ಹಿರಿಯ ಸಾಹಿತಿ ಡಾ.ಭೇರ್ಯ ರಾಮಕುಮಾರ್ ಅವರಿಗೆ ಸನ್ಮಾನ

0
453

ಹಿರಿಯ ಸಾಹಿತಿ, ಪತ್ರಕರ್ತ ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಅವರ ಕನ್ನಡಪರ ಚಿಂತನೆ , ಪರಿಸರ ಪ್ರೇಮ ಹಾಗೂ ಗ್ರಾಮೀಣ ಸೇವೆಯ ಛಲ  ಯುವಜನತೆಗೆ ಮಾದರಿಯಾಗುವಂತಹದ್ದು ಎಂದು  ಮೈಸೂರು ಜಿಲ್ಲೆಯ ಕೆ.ಆರ್.ನಗರದ ಭಗತ್ ಸಿಂಗ್ ಯೂತ್ ಫೌಂಡೇಶನ್ ಸಂಸ್ಥೆಯ ಖಜಾಂಚಿ ಕೃಷ್ಣಯ್ಯ ನುಡಿದರು.

ಸಾಹಿತಿ ಹಾಗೂ ಕನ್ನಡಪರ ಚಿಂತಕ ಡಾ.ಭೇರ್ಯ ರಾಮಕುಮಾರ್ ಅವರ ಐವತ್ತೊಂಬತ್ತನೇ ಜನ್ಮದಿನದಂದು ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡುತ್ತಿದ್ದ ಅವರು ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾಗಿ ನಾಮಫಲಕದಲ್ಲಿ ಕನ್ನಡ ಬಳಸದೇ ಇರುವ ಸಂಸ್ಥೆಗಳ  ವಿರುದ್ದ ಅವರು ನಡೆಸಿದ ಕಾನೂನಾತ್ಮಕ ಹೋರಾಟಗಳು ಇಡೀ ರಾಜ್ಯಕ್ಕೇ ಮಾದರಿಯಾಗಿವೆ.

ಸಾಹಿತಿಗಳಾಗಿ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುತ್ತಿದ್ದಾರೆ. ಸಾಮೂಹಿಕ ನೇತ್ರದಾನ, ಅಂಗಾಂಗದಾನ, ಉಚಿತ ಸಸಿಗಳ ವಿತರಣೆ ಹೀಗೆ ಸಮಾಜದ ಅಭ್ಯುದಯಕ್ಕೇ ತಮ್ಮನ್ನು  ತೊಡಗಿಸಿಕೊಂಡಿದ್ದಾರೆ. ಇವರು ನೂರ್ಕಾಲ ಬಾಳಲಿ. ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡಲಿ ಎಂದು ಹೇಳಿದರು.

ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಪ್ರಧಾನಕಾರ್ಯದರ್ಶಿ ರಕ್ಷಿತ್ ಮಾತನಾಡಿ ಭೇರ್ಯದಂತಹ ಗ್ರಾಮೀಣ ಪ್ರದೇಶದಲ್ಲಿ ಜನಿಸಿದ ರಾಮಕುಮಾರ್ ಅವರು ಕನ್ನಡಪರ ಚಿಂತನೆ,ಸಾಹಿತ್ಯ ಸೇವೆ, ಪರಿಸರ ಸೇವೆ, ನೇತ್ರದಾನ, ಗ್ರಾಮೀಣ ಶಾಲಾ ಕಾಲೇಜುಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ  ಕನ್ನಡಿಗರ ಮನಗೆದ್ದಿದ್ದಾರೆ. ಯುವಜನತೆಗೆ ಸ್ಪೂರ್ತಿಯಾಗಿದ್ದಾರೆ ಎಂದು ನುಡಿದರು.

ಚುನಾವಣಾ ನೀತಿ ಸಂಹಿತೆಯ ಹಿನ್ನೆಲೆಯಲ್ಲಿ ಸಂಸ್ಥೆಯು ಸರಳವಾಗಿ ಕಾರ್ಯಕ್ರಮ ನಡೆಸಿತು. ಭಗತ್ ಸಿಂಗ್ ಫೌಂಡೇಶನ್ ಸಂಸ್ಥೆಯ ಸದಸ್ಯರಾದ ಜಗದೀಶ,ರವಿ ಮೊದಲಾದವರು ಉಪಸ್ಥಿತರಿದ್ದರು.