ಜ್ಞಾನಭಾರತಿ ಪದವಿ ಕಾಲೇಜಿಗೆ ಶೇ. 76.87 ಫಲಿತಾಂಶ

Must Read

ಸಿಂದಗಿ: ಪಟ್ಟಣದ ಶ್ರೀ ಬಸವೇಶ್ವರ ವಿದ್ಯಾ ಪ್ರಸಾರ ಸಮಿತಿಯ ಅಡಿಯಲ್ಲಿ ನಡೆಯುತ್ತಿರುವ ಜ್ಞಾನ ಭಾರತಿ ಪದವಿ ಪೂರ್ವ ಕಾಲೇಜು  ಬಸವ ನಗರ ಸಿಂದಗಿ. 2023- ಏಪ್ರಿಲ್/ಮೇ ತಿಂಗಳಲ್ಲಿ ನಡೆದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿಗೆ ಅತ್ಯುತ್ತಮ ಫಲಿತಾಂಶವನ್ನು ವಿದ್ಯಾರ್ಥಿಗಳು ಪಡೆಯುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಪದವಿ ಪೂರ್ವ ಕಾಲೇಜಿನ  ಒಟ್ಟು 160 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದರಲ್ಲಿ 123 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. ಈ ಫಲಿತಾಂಶದಲ್ಲಿ  ಕುಮಾರ, ಭಾಗಪ್ಪ ಗಂಗಪ್ಪ ಭಾಸಗಿ 600ಕ್ಕೆ  591 (98.50%) ಅಂಕಗಳನ್ನು ಗಳಿಸಿಕೊಂಡು ಕಾಲೇಜಿಗೆ ಪ್ರಥಮ ಬಂದಿರುತ್ತಾನೆ. ದ್ವಿತೀಯ ಸ್ಥಾನವನ್ನು ಕುಮಾರಿ ಮಹಾದೇವಿ ನಿಂಗಪ್ಪ 600ಕ್ಕೆ 586 (97.65%) ಅಂಕಗಳನ್ನು ಪಡೆದುಕೊಂಡಿರುತ್ತಾಳೆ. ತೃತೀಯ ಸ್ಥಾನವನ್ನು ಕುಮಾರಿ ಪದ್ಮಾವತಿ ಸೋಮನಿಂಗ  600ಕ್ಕೆ 577(96.17%) ಅಂಕಗಳನ್ನು ಪಡೆದುಕೊಂಡಿರುತ್ತಾಳೆ. 

       ಒಟ್ಟಾರೆ ಫಲಿತಾಂಶದಲ್ಲಿ 21 ಅತ್ಯುನ್ನತ(ಡಿಸ್ಟಿಂಕ್ಷನ್) 39 ವಿದ್ಯಾರ್ಥಿಗಳು ಪ್ರಥಮ ದರ್ಜೆ 33 ವಿದ್ಯಾರ್ಥಿಗಳು ದ್ವಿತೀಯ ದರ್ಜೆ 30 ತೃತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ. ಕಾಲೇಜಿನ ಒಟ್ಟು ಶೇಕಡಾವಾರು ಫಲಿತಾಂಶ 76.87 ಬಂದಿರುತ್ತದೆ.  ಎಂದೂ ಪ್ರಾಚಾರ್ಯರಾದ  ಜೆ. ಸಿ. ಪಾಟೀಲ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. 

ಕಾಲೇಜಿನ ಉತ್ತಮ ಫಲಿತಾಂಶ ಬಂದಿದ್ದಕ್ಕಾಗಿ ಸಂಸ್ಥೆಯ ಅಧ್ಯಕ್ಷ ಶ್ರೀ ಶಿವಾನಂದ ಶಿವಾಚಾರ್ಯರು ಹಾಗೂ ಕಾರ್ಯದರ್ಶಿ ಸತೀಶ ಮಡಿವಾಳಯ್ಯ ಹಿರೇಮಠ, ಆಡಳಿತ ಮಂಡಳಿಯ ಸರ್ವ ಸದಸ್ಯರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ವಿದ್ಯಾರ್ಥಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿ ಸಂತಸ ವ್ಯಕ್ತ ಪಡಿಸಿರುತ್ತಾರೆ.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group