spot_img
spot_img

ಹಣಬಲದಿಂದ ಗೆದ್ದಿರುವ ಬಿಜೆಪಿಯನ್ನು ಈ ಸಲ ಸೋಲಿಸಿ- ಎಂ ಬಿ ಪಾಟೀಲ

Must Read

- Advertisement -

ಸಿಂದಗಿ: ಕಳೆದ ಉಪಚುನಾವಣೆಯಲ್ಲಿ ಬಿಜೆಪಿ ಸರಕಾರ ದುಡ್ಡಿನ ಹೊಳೆ ಹರಿಸಿ ಸುಳ್ಳು ಭರವಸೆಗಳನ್ನು ನೀಡಿ ಗೆದ್ದಿದೆ ಆದರೆ ಕಾಂಗ್ರೆಸ್ ಅಭ್ಯರ್ಥೀ ಅಶೋಕ ಮನಗೂಳಿ ಅವರು ಮತದಾರರ ಮನ ಗೆದ್ದು ತೋರಿಸಿದ್ದಾರೆ ಕಾರಣ ಬಿಜೆಪಿಯ ಸುಳ್ಳು ಭರವಸೆಗಳನ್ನು ನಂಬಬೇಡಿ ನುಡಿದಂತೆ ನಡೆದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದ್ದಾದರೆ ಅತ್ಯಧಿಕ ಮತಗಳಿಂದ ಕಾಂಗ್ರೆಸ್ ಪಕ್ಷ ಗೆದ್ದೆ ಗೆಲ್ಲುತ್ತದೆ ಎಂದು ಡಾ. ಎಂ.ಬಿ.ಪಾಟೀಲ ಭವಿಷ್ಯ ನುಡಿದರು.

ಪಟ್ಟಣದ ಮಾಂಗಲ್ಯ ಭವನದಲ್ಲಿ ಹಮ್ಮಿಕೊಂಡ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಪ್ರಚಾರ ಸಭೆಯನ್ನು ಉದ್ಘಾಟಿಸಿ ಮಾತನಾಡಿ, ಸಿದ್ದರಾಮಯ್ಯನವರ ಅಧಿಕಾರಾವಧಿಯಲ್ಲಿ ನೀಡಿದ 165 ಭರವಸೆಗಳಲ್ಲಿ 180 ಭರವಸೆಗಳನ್ನು ಈಡೇರಿಸಿದ್ದೇವೆ ಆದರೆ ಬಿಜೆಪಿ ಯಾವುದೇ ಭರವಸೆಗಳನ್ನು ಈಡೇರಿಸದೇ 40 ಪರ್ಸೆಂಟೆಜ್ ಹೆಗ್ಗಳಿಕೆಗೆ ಪಾತ್ರವಾಗಿದೆ ಎನ್ನುವುದು ಜಗಜ್ಜಾಹೀರಾಗಿದೆ ಎಂದು ಬಿಜೆಪಿ ವಿರುದ್ದ ಹರಿಹಾಯ್ದರು.

ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ ಮಾತನಾಡಿ, ಬಿಜೆಪಿ ದುರಾಡಳಿತದಿಂದ ಬಿಜೆಪಿಯವರೇ ಬೇಸತ್ತಿದ್ದಾರೆ ಅಲ್ಲದೆ ಪ್ರತಿಶತ 68 ಮತದಾರರು ಇವರ ಲಂಚಾವತಾರದಿಂದ ಬೇಸತ್ತು ಹೋಗಿದ್ದಾರೆ ಎನ್ನುವುದಕ್ಕೆ ಒಬ್ಬ ಮುಖ್ಯಮಂತ್ರಿ ಚಿತ್ರನಟ್ ಸುದೀಪ ಜೊತೆಯಲ್ಲಿ ನಾಮಪತ್ರ ಸಲ್ಲಿಸುತ್ತಾನೆ ಎಂದರೆ ಇವರು ಯಾವ ಮಟ್ಟಿಗೆ ಅಧಿಕಾರ ನಡೆಸಿದ್ದಾರೆ ಎನ್ನುವುದಕ್ಕೆ ತಾಜಾ ಉದಾಹರಣೆ ಇದಾಗಿದೆ. ಕಾಂಗ್ರೆಸ್ ಪಕ್ಷದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರರವರು ಸರಿಸಮನಾಗಿ ಕಾರ್ಯನಿರ್ವಹಿಸುತ್ತಿರುವುದರಿಂದಲೇ ಜನತೆ ಬಿಜೆಪಿಯ ದುರಾಡಳಿತಕ್ಕೆ ಬೇಸತ್ತು ಕಾಂಗ್ರೆಸ್ ಪಕ್ಷದ ಕಡೆ ವಾಲುತ್ತಿದ್ದಾರೆ ಇದರಿಂದ ಕಾಂಗ್ರೆಸ್ ಅಭ್ಯರ್ಥಿ ಅಶೋಕ ಮನಗೂಳಿ ಅವರ ಗೆಲುವು ನಿಶ್ಚಿತ ಎಂದರು.

- Advertisement -

ಅಭ್ಯರ್ಥಿ ಅಶೋಕ ಮನಗೂಳಿ ಮಾತನಾಡಿ, 2023ರ ಚುನಾವಣೆ ಇದು ಅಶೋಕ ಮನಗೂಳಿಯ ಚುನಾವಣೆಯಲ್ಲ ಕಾಂಗ್ರೆಸ್ ಪಕ್ಷದ ಚುನಾವಣೆಯಾಗಿದೆ ಕಳೆದ ಉಪಚುನಾವಣೆಯಲ್ಲಿ ಆಡಳಿತ ಯಂತ್ರ ಮತ್ತು ದುರಾಡಳಿತ ಹಾಗೂ ದುಡ್ಡಿನ ಬಲದಿಂದ ಸೋಲು ಕಂಡಿದ್ದೇನೆ ವಿನಃ ಮತದಾರರಿಂದಲ್ಲ. ಈ ಭಾಗದ ರೈತರ ಮಕ್ಕಳು ತೋಟಗಾರಿಕೆಯಲ್ಲಿ ಹೆಚ್ಚಿನ ಇಳುವರಿ ಪಡೆಯಬೇಕು ಎನ್ನುವ ಮಾಹಿತಿ ಪಡೆದುಕೊಳ್ಳಬೇಕು ಎಂದು ಆಲಮೇಲಕ್ಕೆ ತೋಟಗಾರಿಕೆ ಕಾಲೇಜನ್ನು ಮಂಜೂರು ಮಾಡಲಾಗಿತ್ತು.

ಕಡಣಿ ಬ್ರಿಜ್ ಕಾಮಗಾರಿಯಾದರೆ ಮನಗೂಳಿಯವರ ಹೆಸರು ಉಳಿಯುತ್ತದೆ ಎನ್ನುವ ಕಾರಣಕ್ಕೆ ಶಾಸಕ ಭೂಸನೂರ ಅವರು ವಿಳಂಬ ಮಾಡಿದ್ದಾರೆ ಕಳೆದ ಸಮ್ಮಿಶ್ರ ಸರಕಾರದಲ್ಲಿ ಮಂಜೂರಾದ ಕಾಮಗಾರಿಗಳೆಲ್ಲವೂ ನಾನೇ ಮಾಡಿಸಿದ್ದೇನೆ ಎಂದು ಸುಳ್ಳು ಸೃಷ್ಟಿಸಿ ಮತದಾರರ ಮನಗೆಲ್ಲಲು ಪ್ರಯತ್ನಿಸುತ್ತಾರೆ ಇದೆಲ್ಲವು ಮತದಾರರಿಗೆ ತಿಳಿದ ವಿಷಯ ಅದಕ್ಕೆ ಅವರ ಆಡಳಿತವನ್ನು ಬೇಸತ್ತು ಎಲ್ಲ ಸಮುದಾಯಗಳು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಕಾಂಗ್ರೆಸ್ ಹೊರಡಿಸಿರುವ ಭರವಸೆಗಳನ್ನು ಪ್ರಚಾರದ ಸಭೆಯಲ್ಲಿ ಬಿತ್ತರಿಸಿ ನಿಮ್ಮ ಮಗನನ್ನು ಆಶಿರ್ವದಿಸಿ ಎಂದು ಮನವಿ ಮಾಡಿಕೊಂಡರು. 

- Advertisement -

ಇಂಡಿ ಶಾಸಕ ಯಶವಂತ್ರಾಯಗೌಡ ಪಾಟೀಲ, ಜಿಲ್ಲಾಧ್ಯಕ್ಷ ರಾಜು ಆಲಗೂರ, ವಕ್ತಾರ ಎಸ್.ಎಂ.ಪಾಟೀಲ ಗಣಿಹಾರ, ಮಹಾನಂದ ಬಮ್ಮಣ್ಣಿ, ಬಂದೇನವಾಜ ಶಹಾಪೂರ, ರಮೇಶ ಮೋರಟಗಿ ಸೇರಿದಂತೆ ಅನೇಕರು ಮಾತನಾಡಿದರು.

ಕೃಷಿಕ ಸಂಘದ ಶಿವಪ್ಪಗೌಡ ಬಿರಾದಾರ, ಮಾಜಿ ಜಿಪಂ ಉಪಾದ್ಯಕ್ಷ ಮಲ್ಲಣ್ಣ ಸಾಲಿ, ಕಿಸಾನ ವಿಬಾಗದ ರಾಜ್ಯ ಉಪಾಧ್ಯಕ್ಷ  ಮಹಿಬೂಬ ತಾಂಬೋಳಿ, ಪುರಸಭೆ ಅಧ್ಯಕ್ಷ ಹಣಮಂತ ಸುಣಗಾರ, ಸಿದ್ದಣ್ಣ ಹಿರೇಕುರಬರ, ಮಲ್ಲಿಕಾರ್ಜುನ ಲೋಣಿ, ಎಂ.ಎ.ಖತೀಬ, ರಾಕೇಶ ಕಲ್ಲೂರ, ನರಸಿಂಗಪ್ರಸಾದ ತಿವಾರಿ, ಬಸನಗೌಡ ಪಾಟೀಲ ಚಾಂದಕವಟೆ, ಗುರನಗೌಡ ಪಾಟೀಲ, ಶರಣಪ್ಪ ವಾರದ, ತಮ್ಮನಗೌಡ ಪಾಟೀಲ ಸೇರಿದಂತೆ ಅನೇಕರು ವೇದಿಕೆ ಮೇಲಿದ್ದರು.     

ಬ್ಲಾಕ್ ಸಮಿತಿ ಅಧ್ಯಕ್ಷ ವಿಠ್ಠಲ ಕೊಳ್ಳುರ ಸ್ವಾಗತಿಸಿದರು. ಕಾಂತನಗೌಡ ಪಾಟೀಲ ಸುರಗಿಹಳ್ಳಿ, ಪರಸುರಾಮ ಕಾಂಬಳೆ ನಿರೂಪಿಸಿದರು. ರಾಜಶೇಖರ ಕೂಚಬಾಳ ವಂದಿಸಿದರು.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group