- Advertisement -
ಬೀದರ – ತಾವು ಮತದಾನ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಟ್ಟ ಮತದಾರರ ಬಗ್ಗೆ ಚುನಾವಣಾಧಿಕಾರಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
ಬೀದರ್ ನ ಭಾಲ್ಕಿ, ಬೀದರ್ ಉತ್ತರ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮತದಾರರು ತಾವು ಮತ ಚಲಾಯಿಸಿದ್ದನ್ನು ವಿಡಿಯೊ ಮಾಡಿದ್ದು ಇದು ಮತದಾನದ ಗೌಪ್ಯವನ್ನು ಉಲ್ಲಂಘಿಸಿದಂತಾಗಿದೆ.
ವಿಡಿಯೋ ರೇಕಾರ್ಡ್ ಕಾನೂನು ಬಾಹಿರವೆಂದು ಹೇಳಿರುವ ಚುನಾವಣಾ ಅಧಿಕಾರಿ ಸ್ವಯಂಪ್ರೇರಿತ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
- Advertisement -
ಮತದಾನವೆನ್ನುವುದು ಪವಿತ್ರವಾಗಿದ್ದು ಅದರ ಗೌಪ್ಯತೆ ಕಾಪಾಡುವುದು ಅತ್ಯಂತ ಅಗತ್ಯವಾಗಿದೆ ಆದರೆ ಕೆಲವು ಕಿಡಿಗೇಡಿಗಳು ಕಾಯ್ದೆಯ ಉಲ್ಲಂಘನೆ ಮಾಡಿದ್ದು ಇದರಿಂದ ಸಮಾಜದಲ್ಲಿ ಶಾಂತಿಭಂಗದ ಪರಿಣಾಮ ಉಂಟಾಗುವ ಸಂಭವವಿರುತ್ತದೆ. ಇಂಥವರ ವಿರುದ್ಧ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಕ್ರಮಕ್ಕೆ ಮುಂದಾಗಿರುವುದು ಯೋಗ್ಯ ಕ್ರಮವಾಗಿದೆ.
ವರದಿ: ನಂದಕುಮಾರ ಕರಂಜೆ, ಬೀದರ