ಬೀದರ – ಇಸ್ಲಾಮಿಕ್ ಮತ್ತು ಐಎಐಎಸ್ ಸಂಘಟನೆಗಳು ದೇಶದಲ್ಲಿ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಉಗ್ರ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು ಹಿಂದೂ ಯುವತಿಯರು ಎಚ್ಚರವಹಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.
ದಿ ಕೇರಳ ಸ್ಟೋರಿ ಚಲನ ಚಿತ್ರ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಮಾತನಾಡಿದ ಅವರು, ಹಿಂದು ಯುವತಿಯರಿಗೆ ಪ್ರೀತಿ ಪ್ರೇಮ ಎಂಬ ಚಕ್ರ ವ್ಯೂಹದಲ್ಲಿ ಬೀಳಿಸಿ ಆಮೇಲೆ ಲವ್ ಜಿಹಾದ್ ನಲ್ಲಿ ಸಿಲುಕಿಸಿ ಉಗ್ರಗಾಮಿ ಸಂಘಟನೆಗೆ ಬಳಕೆ ಮಾಡಲಾಗುತ್ತಿದೆ. ಇಸ್ಲಾಮಿಕ್ ಮತ್ತು ಐಎಸ್ ಐ ಎಸ್ ಸಂಘಟನೆಗಳು ಈ ಕೆಲಸ ಮಾಡುತ್ತಿವೆ. ಈ ಬಗ್ಗೆ ನಮ್ಮ ಹಿಂದೂ ಯುವತಿಯರು ಜಾಗೃತಿ ವಹಿಸಬೇಕು ಎಂದರು.
ನಾನು ಹಿಂದು ಯುವತಿಯರಿಗೆ ಮನವಿ ಮಾಡುತ್ತೇನೆ. ಯಾರೂ ಪ್ರೀತಿ ಪ್ರೇಮ ಚಕ್ರವ್ಯೂಹದಲ್ಲಿ ಬೀಳಬೇಡಿ. ನಿಮ್ಮ ಕುಟುಂಬ ಸಮೇತ ದಿ ಕೇರಳ ಸ್ಟೋರಿ ಚಲನಚಿತ್ರ ನೋಡಿ ಎಂದು ಖೂಬಾ ಮನವಿ ಮಾಡಿದರು.
ನಾವು ನಮ್ಮ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ, ದೇವ ದೇವತೆಯರ ಬಗ್ಗೆ ಹೇಳಿಕೊಡಬೇಕು ಭಯೋತ್ಪಾದಕರ ಸಂಚಿಗೆ ಯಾರೂ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ವರದಿ: ನಂದಕುಮಾರ ಕರಂಜೆ, ಬೀದರ