ಆನಂಗಿ, ಬುರಲು, ಪುತ್ರಂಜೀವಿ, ಇಂದ್ರಜೀವಿ, ಹಾಲೇ, ಹೊನ್ನೆ… ಮಾರ್ಚ್, ಎಪ್ರಿಲ್,ಮೇ ತಿಂಗಳು ಬಂತೆಂದರೆ ಇವುಗಳ ಬೀಜ ರೆಕ್ಕೆ, ಪುಕ ,ಗಡ್ಡ,ಕಾಗದ ಇವುಗಳಿಂದ ಸಿಂಗರಿಸಿ ಸ್ವಲ್ಪ ಗಾಳಿ ಸಿಕ್ಕರೆ ನಾನೇನು ಕಡಿಮೆ ಅಂತ ಬಾನೆತ್ತರ ಹಾರಿ ಅಂಗಳದಲ್ಲಿ ಆಟದ ಮೈದಾನದಲ್ಲಿ ಕಸಗಳ ಮಧ್ಯೆ ಇಣುಕಿ ಭೂಗರ್ಭ ಸೇರಿ ಮಳೆರಾಯನ ಬರುವಿಕೆಗಾಗಿ ಗುಮ್ಮನಂತೆ ಕುಳಿತಿದ್ದು ಸ್ವಲ್ಪ ಅವಕಾಶ ಕೊಡು ನಾನೂ ಯಾರು ಎಂದು ತೋರಿಸುವೆ ಭಗವಂತ ಎನ್ನುತಿದೆ ಅನ್ನಿಸದಿರದು.
ಮರವಾಗಿ ತಲೆಎತ್ತಿ ನಿಂತ ಮರಗಳಿಂದ ಪಶು ಪಕ್ಷಿಗಳಿಗೆ ನೆರಳು ಅಹಾರ ಆಸರೆ. ಕೆಲವು ಬೀಜ ಪರಿಸರ ಪ್ರೇಮಿಗಳ ಕೈ ಸೇರಿ ರಾಜೋಪಚಾರ. ಕೆಲವಕ್ಕೆ ಅನುಕೂಲ ಇಲ್ಲದೇ ಮನೆ ಅಂಗಳ ಕಾಂಪೌಂಡ್ ಗೋಡೆ ಕಾಂಕ್ರೀಟ್ ಕಾಡಿನಲ್ಲಿ… ಗುಡಿಸಿ ಬೆಂಕಿಗೆ. ನಿಮ್ಮ ಅಂಗಳದಲ್ಲಿ ಇಂತಹ ಯಾವುದೇ ಅತಿಥಿ ಬಂದರೆ ಜೋಪಾನ ಅವುಗಳನ್ನು ರಕ್ಷಿಸಿ .ಮಣ್ಣಿನಲ್ಲಿ ಹುದುಗಿಸಿ ನಿಮ್ಮನ್ನು ಹರಸುತ್ತವೆ. ಯೋಗ್ಯ ಜಾಗ ಕಲ್ಪಿಸಿ ಮುಂದೆ ಮರವಾಗಿ ಬೆಳೆದು ನಿಮ್ಮನ್ನು ಮತ್ತು ಮನುಕುಲಕ್ಕೆ ಹರಸುತ್ತದೆ ಮತ್ತು ಹಾರೈಸುತ್ತದೆ.
ಸುಮನಾ ಮಳಲಗದ್ದೆ.9980182883