ಭಗವಂತ ಖೂಬಾ ಅವರಿಂದ ನನಗೆ ಜೀವ ಬೆದರಿಕೆ ಇದೆ – ಶಾಸಕ ಸಚಿವ ಶಾಸಕ ಪ್ರಭು ಚೌವ್ಹಾಣ ಗಂಭೀರ ಆರೋಪ

Must Read

ಬೀದರ – ಕೇಂದ್ರ ಸಚಿವ ಭಗವಂತ ಖೂಬಾ ಅವರಿಂದ ನನ್ನ ಜೀವಕ್ಕೆ ಅಪಾಯವಿದೆ ಎಂದು ಬೀದರ್ ನಲ್ಲಿ ಮಾಜಿ ಸಚಿವ, ಶಾಸಕ ಪ್ರಭು ಚೌವಾಣ ಗಂಭೀರ ಆರೋಪ ಮಾಡಿದ್ದಾರೆ

ನನ್ನ ಜೀವಕ್ಕೆ ಧೋಖಾ ಇದೆ ಕೇಂದ್ರ ಸಚಿವರ ಜೊತೆ ಗೂಂಡಾಗಳ ಟೀಮ್ ಇದೆ ಹೀಗಾಗಿ ನನ್ನ ಜೀವಕ್ಕೆ ದೋಖಾ ಇದೆ ಎಂದು ಮಾಧ್ಯಮ ಗೋಷ್ಠಿಯಲ್ಲಿ ಹೇಳಿಕೆ ನೀಡಿದ ಔರಾದ್ ಶಾಸಕ ಪ್ರಭು ಚೌವ್ಹಾಣ್ ಅವರು ಈ ಬಗ್ಗೆ  ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮೀತ್ ಶಾ, ಐಜಿ, ಎಸ್ ಪಿಯವರಿಗೆಲ್ಲ ದೂರು ನೀಡಿರುವುದಾಗಿ ಹೇಳಿದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಭಗವಂತ ಖೂಬಾ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಚವ್ಹಾಣ ಅವರು, ಪಕ್ಷವು ತಾಯಿ ಇದ್ದ ಹಾಗೆ ಪಕ್ಷಕ್ಕೆ ದ್ರೋಹ ಮಾಡಿದರೆ ತಾಯಿಗೆ ದ್ರೋಹ ಮಾಡಿದ ಹಾಗೆ ಹೀಗಾಗಿ ಇವರನ್ನು ಪಕ್ಷದ ವರಿಷ್ಠರು ಕೂಡಲೇ ಕೇಂದ್ರ ಸಚಿವ ಭಗವಂತ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಮುಂಚೆ ಬಿಜೆಪಿ ಪಕ್ಷದ ಶಾಸಕ ಪ್ರಭು ಚೌವಾಣ ಹಾಗೂ ಕೇಂದ್ರ ಸಚಿವ‌ ಭಗವಂತ ಖೂಬಾ ಮಧ್ಯೆ ಬಹಿರಂಗ  ವಾಗ್ವಾದ ನಡೆದಿತ್ತು. ಚೌವ್ಹಾಣ್ ಅವರನ್ನು ಸೋಲಿಸಲು ಔರಾದ್ ಕ್ಷೇತ್ರಕ್ಕೆ ಹೊರಗಿನಿಂದ 300ಜನರನ್ನು ಕೇಂದ್ರ ಸಚಿವ ಭಗವಂತ ಖೂಬಾ   ಕರೆತಂದಿದ್ದರು ಎಂಬುದಾಗಿ ಸ್ವತಃ  ಶಾಸಕ ಪ್ರಭು ಚೌವಾಣ ಅವರೇ ಗಂಭೀರ ಆರೋಪ ಮಾಡಿದ್ದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಉಪ್ಪಾರ ಸಮಾಜ ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕಾಗಿ ನೆರವು – ಬರಮಣ್ಣ ಉಪ್ಪಾರ

ಮೂಡಲಗಿ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗೆ ವಿದೇಶದಲ್ಲಿ ಉನ್ನತ ವ್ಯಾಸಂಗಕ್ಕಾಗಿ ಉಪ್ಪಾರ ಅಭಿವೃದ್ಧಿ ನಿಗಮದಲ್ಲಿ ರೂ.೫ ಕೋಟಿ ಹಣವಿದೆ ಸಮಾಜದ ವಿದ್ಯಾರ್ಥಿಗಳು ಅದನ್ನು ಸದ್ಬಳಕೆ ಮಾಡಿಕೊಂಡು ಸಾಧನೆ...

More Articles Like This

error: Content is protected !!
Join WhatsApp Group