ಶಿವರಾಜ ತಂಗಡಗಿ ಅವರಿಗೆ ಸಚಿವ ಸ್ಥಾನ ನೀಡಲು ಆಗ್ರಹ

Must Read

ಸಿಂದಗಿ: ದಲಿತಪರ ಚಿಂತಕ ಹಿಂದುಳಿದ ವರ್ಗಗಳ ನಾಯಕರಾಗಿರುವ ಕನಕಗಿರಿ ಮತಕ್ಷೇತ್ರದ ಅಭಿವೃದ್ಧಿಯ ಹರಿಕಾರ ಶಿವರಾಜ ತಂಗಡಗಿ ಅವರಿಗೆ ಸಾಮಾಜಿಕ ನ್ಯಾಯದಡಿ ಸಚಿವ ಸ್ಥಾನ ನೀಡಬೇಕು ಎಂದು ತಾಲೂಕಾ ಭೋವಿ ವಡ್ಡರ ಸಮಾಜದ ಅಧ್ಯಕ್ಷ ಪಂಡಿತ ಯಂಪೂರೆ ಆಗ್ರಹಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಕೊಪ್ಪಳ ಜಿಲ್ಲೆಯ ಕನಕಗಿರಿ ಮೀಸಲು ಕ್ಷೇತ್ರದಲ್ಲಿ ಶಾಸಕರಾಗಿ, ಸಚಿವರಾಗಿ ಎಲ್ಲ ವರ್ಗಗಳಿಗೆ ನ್ಯಾಯಯುತವಾದ ಸೌಲಭ್ಯಗಳನ್ನು ಕೊಡುವಲ್ಲಿ ಅವಿರತ ಶ್ರಮಿಸಿದವರು ಅಲ್ಲದೆ ಭೋವಿ ವಡ್ಡರ ಸಮಾಜವನ್ನು ಕಟ್ಟುವಲ್ಲಿ ಇವರ ಪಾತ್ರ ಅಮೋಘವಾದದ್ದು ಅವರು ಇಡೀ ರಾಜ್ಯಾದ್ಯಂತ ಹೊರಡಿಸಿದ ಆದೇಶದಂತೆ ಕೊರಚ, ಕೊರಮ, ಬಂಜಾರ, ಭೋವಿ ಸಮಾಜಗಳ ಒಕ್ಕೂಟವು ನೀಡಿದ ನಿರ್ಣಯದಂತೆ ಬಿಜೆಪಿಯನ್ನು ತಿರಸ್ಕರಿಸಿ ಸಮಾಜವನ್ನು ಉಳಿಸಿ ಎನ್ನುವ ಸಂದೇಶದೊಂದಿಗೆ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣೀಕರ್ತರಾಗಿದ್ದಾರೆ.

ಅಲ್ಲದೆ ಭೋವಿ ಸಮಾಜದ ಕಟ್ಟಕಡೆಯ ನೊಂದ ವ್ಯಕ್ತಿಯ ನಾಡಿಮಿಡಿತವನ್ನು ಅರಿತ ಅನುಭವಿ ನಾಯಕರಾಗಿರುವ ಅವರು ಶಾಸಕರಾಗಿ. ಸಚಿವರಾಗಿ ಕಾರ್ಯರ್ನಿಹಿಸಿದ ಅನುಭವಹೊಂದಿದ್ದಾರೆ ಇಡೀ ರಾಜ್ಯವು ಒಕ್ಕೂರಲಿಂದ ಕಾಂಗ್ರೆಸ್ ಪಕ್ಷದ ಗೆಲುವಿಗೆ ಕಾರಣೀಕರ್ತರಾದ ಶಿವರಾಜ ತಂಗಡಗಿ ಅವರನ್ನು ಸಚಿವ ಸಂಪುಟದಲ್ಲಿ ಸೇರ್ಪಡೆ ಮಾಡಿದರೆ ನ್ಯಾಯ ದೊರಕಿಸಿಕೊಟ್ಟಂತಾಗುತ್ತದೆ ಕಾರಣ 2 ಹಂತದ ಸಚಿವ ಸಂಪುಟದಲ್ಲಿ ಇವರಿಗೆ ಸಂಪುಟ ದರ್ಜೆ ಸಚಿವ ಸ್ಥಾನ ನೀಡಬೇಕು ಎಂದು ಕಾಂಗ್ರೆಸ್ ಎಸ್‍ಸ್ಸಿ ಮೋರ್ಚಾ ನಗರ ಘಟಕ ಅದ್ಯಕ್ಷ ತಿರುಪತಿ ಬಂಡಿವಡ್ಡರ ಒತ್ತಾಯಿಸಿದ್ದಾರೆ.

Latest News

ಮಹಿಳಾ ಕವಿತೆಗಳು ಸೌಹಾರ್ದತೆಯ ಬಿಂಬ ಪ್ರತಿಬಿಂಬ-  :ಡಾ. ಮಮ್ತಾಜಬೇಗಂ ಗಂಗಾವತಿ

ಹುನಗುಂದ : ಪಟ್ಟಣದ ವಿ.ಮ. ಕಾಲೇಜು ಸಭಾಂಗಣದಲ್ಲಿ ನಡೆದ ಹೊನ್ನಕುಸುಮ ಸಾಹಿತ್ಯ ವೇದಿಕೆಯ "ತಿಂಗಳ ಹೊನಲು -04ರಲ್ಲಿ ಕಾವ್ಯೋತ್ಸವ-2026 ಅತ್ಯಂತ ಅದ್ದೂರಿಯಾಗಿ ನಡೆಯಿತು.ಮುಖ್ಯ ಅತಿಥಿಯಾಗಿ ಆಗಮಿಸಿದ...

More Articles Like This

error: Content is protected !!
Join WhatsApp Group