ಸಿಂದಗಿ: ಕಾಯಿಲೆ ಬರುವ ಮುನ್ನವೇ ಎಚ್ಚರ ವಹಿಸಿದರೆ ಆಸ್ಪತ್ರೆಗೆ ಹೋಗುವುದು ಹಾಗೂ ಮಾತ್ರೆಗಳು ಮುಂತಾದವುಗಳಿಂದ ನಾವು ಪಾರಾಗಬಹುದು. ಆರೋಗ್ಯ ಇದ್ದರೆ ನಾವು ನೀವೆಲ್ಲರೂ ಸುಖವಾಗಿ ಬಾಳಬಹುದು ಎಂದು ಸಂಗಮ ಸಂಸ್ಥೆಯ ನಿರ್ದೇಶಕ ಫಾದರ್ ಆಲ್ವಿನ್ ಡಿಸೋಜ ಹೇಳಿದರು.
ಪಟ್ಟಣದ ಬಸವ ನಗರದಲ್ಲಿರುವ ಸಂಗಮ ಸಂಸ್ಥೆಯಲ್ಲಿ ವಿಶೇಷ ಚೇತನರಿಗೆ ಹಾಗೂ ದೇವದಾಸಿ ತಾಯಂದಿರಿಗೆ ಹಮ್ಮಿಕೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಕಷ್ಟಪಟ್ಟು ದುಡಿದ ಹಣವನ್ನು ಆಸ್ಪತ್ರೆಗೆ ಸುರಿಯುವ ಬದಲು ಕಾಯಿಲೆ ಬಾರದಂತೆ ತಡೆಯುವುದು ಮತ್ತು ಆರೋಗ್ಯದ ಬಗ್ಗೆ ನಿರ್ಲಕ್ಷ ಬೇಡ ಹೀಗೆ ನಿರ್ಲಕ್ಷ ಮಾಡುವುದರಿಂದ ಇಂದು ಅನೇಕ ಕಾಯಿಲೆಗಳಿಗೆ ತುತ್ತಾಗಿ ಅತೀ ಬೇಗನೆ ಪ್ರಾಣ ಕಳೆದುಕೊಳ್ಳುವ ಪ್ರಸಂಗ ಬರುವುದು ಆದ್ದರಿಂದ ನಮ್ಮ ಆರೋಗ್ಯ ನಾವು ಕಾಪಾಡಿಕೊಳ್ಳುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ವಿಜಯಪುರದ ಆರೋಗ್ಯ ಆಸ್ಪತ್ರೆಯ ವೈದ್ಯ ಡಾ ಮಾಣಿಕ್ಯ ಇವರು ಉಚಿತ ಆರೋಗ್ಯ ತಪಾಸಣೆ ಮಾಡಿದರು. ಇದೇ ಸಂದರ್ಭದಲ್ಲಿ ಗೆಟ್‍ವೆಲ್ಲ್ ಲ್ಯಾಬ್‍ನಿಂದ ಬಂದಿರುವ ಡಾ ಇಸೂಪ್ಪ್ ಮತ್ತು ಡಾ ಶಭಾನಾ ಇವರು ರಕ್ತ ತಪಾಸಣೆ ಮಾಡಿದರು. ಸಿ ಅರುಣಾ ಹಾಗೂ ಸಿಸ್ಟರ್ ರುಕ್ಮಿಣಿ ಕಾರ್ಯಕ್ರಮದ ಸಂಯೋಜಕರು ಹಾಗೂ ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊರವರು ಹಾಜರಿದ್ದರು.
ವಿಜಯ ಬಂಟನೂರ ನಿರೂಪಿಸಿದರು, ರಾಜೀವ ಕುರಿಮನಿ ಸ್ವಾಗತಿಸಿದರು, ಮಲ್ಕಪ್ಪ ಹಲಗಿ ಇವರು ಸಂವಿಧಾನದ ಪ್ರಸ್ತಾವನೆಯನ್ನು ಓದಿದರು. ಶ್ರೀಮತಿ ತೇಜಸ್ವಿನಿ ಹಳ್ಳದಕೇರಿ ಇವರು ವಂದಿಸಿದರು. ಶಿಕ್ಷಣ ಸಂಸ್ಥೆಯ ಸಿಬ್ಬಂದಿಯಾದ ಶ್ರೀಮತಿ ಸುನಿತಾ ಮೊರೆ ಮತ್ತು ಶ್ರೀಮತಿ ಮಿನಾಕ್ಷಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.