- Advertisement -
ಲಿಂಗರೂಪಿ ಪರಮಾತ್ಮ
ಅರಿವೆಂಬ ಜ್ಞಾನಕ್ಕೆ ಲಿಂಗವೆಂಬ ಕುರುಹಾಗಿ
ಅತ್ತ ಇತ್ತ ಸುತ್ತದ ಮನ ಆತ್ಮದಲಿ ಒಂದಾಗಿ
ಇಡೀ ಬ್ರಹ್ಮಾಂಡ ಅಂಗೈಯಲ್ಲಿ ಲಿಂಗವಾಗಿ
- Advertisement -
ಕಂಡು ಕರುಣಿಸಿದ ಬಸವಂಗೆ ಶರಣು
ನಿರಾಕಾರದ ಸಾಂಕೇತಿಕ ಸ್ವರೂಪನು
ವಿಶ್ವದಾದ್ಯಂತ ಪ್ರತೀಕ ಬಿಂದು ನೀನು
- Advertisement -
ಅಜ್ಞಾನದ ಕತ್ತಲೆ ಅಳಿಸಿ ಸುಜ್ಞಾನದ ಬೆಳಕು
ಚೆಲ್ಲಿದ ಲಿಂಗರೂಪಿ ಪರಮಾತ್ಮಂಗೆ ಶರಣು
ಏಕ ಚಿತ್ತದ ಧ್ಯಾನ ನಿನ್ನಿಂದ ಕಲಿತಿರುವೆನು
ನಿನ್ನೊಳೊಂದಾಗಿ ನಾ ಬೆರೆತಿರುವೆನು
ಅಗಾಧ ಶಕ್ತಿ ಕರುಣಿಸಿರುವೆ ನೀ ನನ್ನಲ್ಲಿ
ಶಿವಲಿಂಗ ಪೂಜೆಗೆ ತನ್ಮಯಳೂ ನಾನು
ನೀನೆಂದರೆ ನಾನು ನಾನೆಂದರೆ ನೀನು
ಏಕಾತ್ಮದಲಿ ಒಂದಾಗಿ ಸ್ಮರಿಸುತಿಹೆನು
ಬುದ್ಧಿಬಲ ಆತ್ಮಬಲ ಮನೋಬಲದಲ್ಲಿ
ಎಂದೆಂದಿಗೂ ನಿನ್ನಿಂದ ನಾನು ಬೆಳೆವೆನು
ಶ್ರೀಮತಿ ಸುಲೋಚನಾ ಮಾಲಿಪಾಟೀಲ ಧಾರವಾಡ.