ಬೀದರ – ಗೋ ಹತ್ಯೆ ತಡೆಯಲು ನಮ್ಮ ಹೋರಾಟ ನಿರಂತರ ಇರಬೇಕು. ಹಿಂದೂಗಳಲ್ಲಿ ಒಗ್ಗಟ್ಟು ಬರಬೇಕು ಎಂದು ಬಸವಕಲ್ಯಾಣ ಶಾಸಕ ಶರಣು ಸಲಗರ ಕರೆ ನೀಡಿದ್ದಾರೆ.
ಗೋ ಹತ್ಯೆ ಮಾಡುವವರ ವಿರುದ್ದ ನೀರಂತರ ಹೋರಾಟ ಇರಬೇಕು.
ಹಿಂದುಗಳಿಗೆ ಕರೆ ನೀಡಿದ ಶಾಸಕ ಶರಣು ಸಲಗರ್:
ಸ್ಥಳೀಯ ಇನಾಮ ಉಲ್ಲಾಖಾನ್ ಎಂಬುವವರ ಮನೆಯಲ್ಲಿ ಗೋ ಹತ್ಯೆ ನಡೆಯುತ್ತಿರುವ ಸುದ್ದಿ ಕೇಳಿ ಹೋಗಿ ತಡೆದ ಶಾಸಕರು ಮುಸಲ್ಮಾನರು ಗೋ ಹತ್ಯೆ ಮಾಡುವುದನ್ನು ತಡೆಯಬೇಕು. ಇದು ಹೀಗೆಯೆ ಮುಂದವರೆದರೆ ನಾವು ಏನು ಎನ್ನುವುದನ್ನು ತೋರಿಸಬೇಕಾಗುತ್ತದೆ. ಹಿಂದೂಗಳು ಪುಕ್ಕಲರಲ್ಲ ಎಂದು ಸಾಬೀತು ಮಾಡುತ್ತೇವೆ ಎಂದು ಗರ್ಜಿಸಿದರು.
ಗೋ ಹತ್ಯೆ ಮಾಡುವುದು ಮುಸ್ಲಿಂ ರಿಗೆ ಮೈ ಉಂಡಿದೆ. ಹಿಂದೂಗಳು ನೂರು ಜನ ಕಲೆತರೂ ಹಿಂದುಗಳು ಪುಕ್ಕಲರಿದ್ದಾರೆ ಎಂಬುದು ಮುಸ್ಲಿಮರ ಭಾವನೆ ಹಿಂದುಗಳು ಪುಕ್ಕಲರು ಅಲ್ಲ ಅನ್ನವುದನ್ನು ಮುಸ್ಲಿಮರಿಗೆ ಸಾಬೀತು ಮಾಡಿ ತೋರಿಸ್ತಿವಿ. ಬಸವಕಲ್ಯಾಣದಲ್ಲಿ ಮುಸ್ಲಿಮರ ದಬ್ವಾಳಿಕೆ ನಡೆಯುತ್ತಿದೆ. ಕಾಂಗ್ರೆಸ್ ಅಲ್ಲ ಯಾವ ಸರ್ಕಾರ ಬಂದ್ರೂ ನಮ್ಮನ್ನು ಏನು ಮಾಡಕ್ಕಾಗಲ್ಲ. ನಾವು ಗೋಹತ್ಯೆ ತಡೆಯುತ್ತೇವೆ ಎಂದು ಸಲಗರ ಹೇಳಿದರು.
ಕಾನೂನು ಪ್ರಕಾರ ಏನು ಮಾಡಬೇಕೋ ಅದನ್ನು ಮಾಡಿ ಎಂದು ಮುಸ್ಲಿಮರಿಗೆ ಹೇಳಿದ ಅವರು, ಅದಕ್ಕೆ ನಾವೂ ಬೆಂಬಲ ನೀಡುತ್ತೇವೆ ಆದರೆ ಬಸವಕಲ್ಯಾಣದಲ್ಲಿ ಕಾನೂನು ಮುರಿಯುವುದೇ ನಡೆದಿದೆ ಎಂದು ಆರೋಪಿಸಿದರು.
ವರದಿ: ನಂದಕುಮಾರ ಕರಂಜೆ, ಬೀದರ