ಪುನರ್ನವ(ಕೊಮ್ಮೆ ಗಿಡ)

Must Read

ಇದನ್ನು ತರಕಾರಿ ರೂಪದಲ್ಲಿ ಉಪಯೋಗಿಸುತ್ತಾರೆ. ಹೊಟ್ಟೆಗೆ ತೆಗೆದುಕೊಳ್ಳುವುದು ಸ್ವಲ್ಪ ಉಷ್ಣ ಆದರೂ ಉತ್ತಮ ಔಷಧಿ ಗುಣಗಳನ್ನು ಹೊಂದಿದೆ.

ಪುನರ್ನವ ಯಾವ ಅವಯವ ಡ್ಯಾಮೇಜ್ ಆದರೂ ಪುನಃ ಮೊದಲಿನ ಸ್ಥಿತಿಗೆ ತರುತ್ತದೆ.

  1. ಕೊಮ್ಮೆಗಿಡ ಅಥವಾ ಪುನರ್ನವ ಬೇರಿನ ಕಷಾಯವನ್ನು ಕುಡಿದರೆ ಕಾಲುಗಳ ಊತ ಕಡಿಮೆಯಾಗುತ್ತದೆ.
  2. ಎಲೆಗಳನ್ನು ಪಲ್ಯ ಮಾಡಿ ಸೇವಿಸಿದರೆ ರುಮ್ಯಾಟಿಕ್‌(ಸಂಧಿವಾತ) ಸಮಸ್ಯೆ ದೂರವಾಗುತ್ತದೆ.
  3. ಬೇರನ್ನು ನೀರಲ್ಲಿ ಅರೆದು ಚರ್ಮಕ್ಕೆ ಹಚ್ಚಿದರೆ ಚರ್ಮದ ಸಮಸ್ಯೆ ನಿವಾರಣೆಯಾಗುತ್ತದೆ.
  4. ಬೇರಿನ ಪುಡಿಗೆ ಬಿಸಿ ನೀರು ಸೇರಿಸಿ ಕುಡಿದರೆ ಹೊಟ್ಟೆ ಹುಳು ನಿವಾರಣೆಯಾಗುತ್ತದೆ.
  5. ಬೇರಿನ ಪುಡಿಗೆ ಜೇನುತುಪ್ಪ ಹಾಗೂ ಬಜೆ ಪುಡಿ ಸೇರಿಸಿ ಮಿಶ್ರಣ ಮಾಡಿ ಸೇವಿಸಿದರೆ ಕಫ ಹಾಗೂ ಕೆಮ್ಮು ವಾಸಿಯಾಗುತ್ತದೆ.
  6. ಕಷಾಯವನ್ನು ಮಲಗುವ ಮುನ್ನ ಕುಡಿದರೆ ಚೆನ್ನಾಗಿ ನಿದ್ದೆ ಬರುತ್ತದೆ.
  7. ಬೇರಿನ ಪುಡಿಗೆ ಅರಿಶಿಣ ಪುಡಿ ಬೆರೆಸಿ ಬಿಸಿ ನೀರಿನಲ್ಲಿ ಕಲಸಿ ಕುಡಿದರೆ, ಆಸ್ತಮಾ ಕಡಿಮೆಯಾಗುತ್ತದೆ.
  8. ಮೂಳೆ ಸಂಬಂಧಿತ ಸಮಸ್ಯೆಗಳಿದ್ದರೆ ಪುನರ್ನವದ ಕಷಾಯಕ್ಕೆ ಶುಂಠಿ ಮತ್ತು ಕರ್ಪೂರ ಸೇರಿಸಿ ಸೇವಿಸಿದರೆ ನೋವು ಕಡಿಮೆಯಾಗುತ್ತದೆ.
  9. ನಾನು ತಯಾರಿಸುವ ನೋವಿನ ಎಣ್ಣೆಯಲ್ಲಿ ಇದನ್ನು ಉಪಯೋಗಿಸುತ್ತೇನೆ.
  10. ಬೇರಿನ ಪುಡಿಯನ್ನು ಹರಳೆಣ್ಣೆ ಜತೆ ನಿಯಮಿತ ಪ್ರಮಾಣದಲ್ಲಿ ಸೇವಿಸಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ.
  11. ನಾನು ತಯಾರಿಸುವ ಕುಡಿಯಲು ಉತ್ತಮ ಪೇಯವಾದ ಕಷಾಯದ ಪುಡಿಯಲ್ಲಿ ಪುನರ್ನವ ಇರುತ್ತದೆ.
  12. ನಿಯಮಿತ ಸೇವನೆ ಯಿಂದ ಮೂತ್ರ ವಿಸರ್ಜನೆ ಸರಿಯಾಗುತ್ತದೆ.

 ಸುಮನಾ ಮಳಲಗದ್ದೆ 9980182883.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group