- Advertisement -
ಬೀದರ – ಗೋ ಹತ್ಯೆ ನಡೆಯುತ್ತಿದ್ದ ಮನೆಯ ಮೇಲೆ ಶಾಸಕರು ಮತ್ತು ಅವರ ಬೆಂಬಲಿಗರು ದಾಳಿ ಪ್ರಕರಣ ಸಂಬಂಧ ಶಾಸಕ ಶರಣು ಸಲಗರ್ ಸೇರಿ 9 ಜನರ ಮೇಲೆ ಎಫ್ ಆಯ್ಆರ್ ದಾಖಲಾಗಿದೆ
ಬೀದರ್ ಜಿಲ್ಲೆಯ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
- Advertisement -
ಜುಲೈ 1 ರಂದು ಬಸವಕಲ್ಯಾಣ ಪಟ್ಟಣದ ಹಿರೇಮಠ ಕಾಲೋನಿಯಲ್ಲಿ ಇನಾಮುಲ್ಲಾ ಖಾನ್ ಎಂಬುವವರ ಮನೆಯಲ್ಲಿ ಗೋ ಹತ್ಯೆ ನಡೆಯುತ್ತಿತ್ತು. ಗೋ ಹತ್ಯೆ ನಡೆಯುತ್ತಿದ್ದ ಮನೆಯ ಮೇಲೆ ಶಾಸಕ ಶರಣು ಸಲಗರ್ ಹಾಗೂ ಅವರ ಬೆಂಬಲಿಗರು ದಾಳಿ ಮಾಡಿ ಗೋ ಹತ್ಯೆ ತಡೆದಿದ್ದರು.
ಐದು ದಿನದ ಬಳಿಕ ಬಸವಕಲ್ಯಾಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಶಾಸಕ ಶರಣು ಸಲಗರ್ ಸೇರಿ 9 ಜನ ಬೆಂಬಲಿಗರ ಮೇಲೆ ಎಫ್ ಐಆರ್ ದಾಖಲು ಮಾಡಿಕೊಂಡು ಪೊಲೀಸರು ವಿಚಾರಣೆ ನಡೆಸಿದ್ದಾರೆ.
ವರದಿ: ನಂದಕುಮಾರ ಕರಂಜೆ, ಬೀದರ