Mudalagi: ಮಕ್ಕಳ ಬೆಳವಣಿಗೆಗೆ ಕೌಶಲ್ಯಗಳ ಪಾತ್ರ ಹಿರಿದು – ಕೆ ಎಲ್ ಮೀಶಿ

Must Read

ಮೂಡಲಗಿ: ಮಕ್ಕಳ ಸಮಗ್ರವಾದ ಬೆಳವಣಿಗೆಯಲ್ಲಿ ಪ್ರಮುಖವಾಗಿ ಕೌಶಲ್ಯಗಳು ಮತ್ತು ಮೌಲ್ಯಗಳು ನಿರ್ಣಾಯಕ ಪಾತ್ರವಹಿಸುತ್ತವೆ. ಶಾಲಾ ಹಂತದಲ್ಲಿಯೇ ಶೈಕ್ಷಣಿಕ ಚಟುವಟಿಕೆಗಳ ಜೊತೆಯಲ್ಲಿ ಮೈಗೂಡಿಸಿದಾಗ ಮಾತ್ರ ಭವಿಷ್ಯತ್ತಿನಲ್ಲಿ ಉತ್ತಮ ಪ್ರಜೆಗಳನ್ನಾಗಿ ರೂಪಿಸಲು ಸಾಧ್ಯ ಎಂದು ಶಿಕ್ಷಕರ ಸಂಘದ ನಿರ್ದೇಶಕ ಕೆ.ಎಲ್ ಮೀಶಿ ವಿವರಿಸಿದರು.

ಅವರು ಶನಿವಾರ ಸಮೀಪದ ಪಟಗುಂದಿ ಗ್ರಾಮದ ಸರಕಾರಿ ಹಿರಿಯ ಕನ್ನಡ ಮತ್ತು ಉರ್ದು ಶಾಲೆಯಲ್ಲಿ ಜರುಗಿದ ಸಂಭ್ರಮ ಶನಿವಾರ – ಬ್ಯಾಗ್ ರಹಿತ ದಿನದ ಪ್ರಯುಕ್ತ ಮಾತನಾಡಿ,  ಪ್ರತಿ ತಿಂಗಳು ಮೂರನೇ ಶನಿವಾರ ಮಕ್ಕಳಿಗೆ ಪುಸ್ತಕ, ನೋಟ್ ಬುಕ್, ಬ್ಯಾಗ್ ಇಲ್ಲದೆ ಶಾಲೆಗೆ ಬರಬೇಕು.

ಸಂತಸದ ಕಲಿಕೆಯನ್ನುಂಟುಮಾಡಲು ಚಟುವಟಿಕೆ ಆಧಾರಿತ ಕಲಿಕೆಯನ್ನು ಪ್ರೋತ್ಸಾಹಿಸಲು ಆರೋಗ್ಯಕರ ಜೀವನ ಶೈಲಿ, ಶುಚಿತ್ವ, ನಾಗರಿಕ ಸೌಲಭ್ಯಗಳು ಹಾಗೂ ಹಲವಾರು ವಿಷಯಗಳ ಅರಿವು ಮೂಡಿಸುವುದಾಗಿದೆ. ಮಕ್ಕಳಿಗೆ ವಿನೂತನ ಮಾರ್ಗದರ್ಶನ ಹಾಗೂ ಸ್ವ-ಕಲಿಕೆಗೆ ಸಹಾಯಕವಾಗುವದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಪಠ್ಯೇತರ ಚಟುವಟಿಕೆಗಳನ್ನು ಆಯೋಜಿಸಿದ್ದರು. ಸಾರ್ವಜನಿಕ ಸೌಕರ್ಯಗಳಾದ ಗ್ರಾಮ ಪಂಚಾಯತ್ ಶುದ್ಧ ಕುಡಿಯುವ ನೀರಿನ ಘಟಕ, ಬಸ್ ತಂಗುದಾಣ, ಅಂಚೆ ಕಛೇರಿ, ತ್ಯಾಜ್ಯ ವಿಲೇವಾರಿ ವಾಹನ ಹಾಗೂ ಇನ್ನಿತರ ನಾಗರಿಕ ಸೌಲಭ್ಯಗಳನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಅದರಿಂದಾಗುವ ಪ್ರಯೋಜನಗಳ ಕುರಿತು ಮಕ್ಕಳು ಅರಿತುಕೊಂಡರು.

ಸಂಭ್ರಮ ಕಾರ್ಯಕ್ರಮದಲ್ಲಿ ಪ್ರಧಾನ ಗುರುಗಳಾದ ರಾಜೀವ ಕೊಳದೂರ, ಎಮ್.ಎನ್ ಪೆಂಡಾರಿ, ಸಹ ಶಿಕ್ಷಕರಾದ ಎ.ಎ ಪಟವೇಗಾರ, ಎಸ್.ಐ ನದಾಫ್, ಶಿವರಾಜ ಕಾಂಬಳೆ, ಮಹಾಂತೇಶ ಭಜಂತ್ರಿ, ಲಕ್ಷ್ಮೀ ಕೆಳಗೇರಿ, ಜಯಶ್ರೀ ಸರ್ವಿ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group