spot_img
spot_img

Kama Kastoori: ಸುಗಂಧಭರಿತ ಔಷಧ ಕಾಮಕಸ್ತೂರಿ

Must Read

spot_img
- Advertisement -

ಕಾಮಕಸ್ತೂರಿ ಗಿಡವು ತುಳಸಿಯನ್ನೇ ಹೋಲುವಂಥದ್ದು. ಪ್ರಾಚೀನಕಾಲದಿಂದಲೂ ಇದನ್ನು ಮನೆಮದ್ದಾಗಿ ಬಳಸುತ್ತಿದ್ದರು. ಇದರ ಬೀಜಗಳನ್ನು ಹೆಚ್ಚಾಗಿ ಔಷಧರೂಪದಲ್ಲಿ ಬಳಸುತ್ತಾರೆ. ದೇಹಕ್ಕೆ ತಂಪನ್ನು ನೀಡುವ ಇದನ್ನು ಸುಗಂಧದ್ರವ್ಯಗಳ ತಯಾರಿಯಲ್ಲಿಯೂ ಉಪಯೋಗಿಸುತ್ತಾರೆ. ಇದನ್ನು ಹೆಚ್ಚಾಗಿ ಮನೆಯಂಗಳದಲ್ಲಿ, ತೋಟಗಳಲ್ಲಿ ಬೆಳೆಸುತ್ತಾರೆ. ತುಂಬ ಸುವಾಸನೆಯನ್ನು ಹೊಂದಿರುವ ಕಾಮಕಸ್ತೂರಿ ಬೀಜವು ಕೊಬ್ಬು, ಕಬ್ಬಿಣ ಮತ್ತು ನಾರಿನಂಶವುಳ್ಳದ್ದು. ಇದರ ವೈಜ್ಞಾನಿಕ ಹೆಸರು Ocimum basilicum.

ಕಾಮಕಸ್ತೂರಿ ಎಲೆಗಳ ಕಷಾಯಕ್ಕೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ಶೀತ, ಜ್ವರ ಹತೋಟಿಗೆ ಬರುತ್ತದೆ. ಕಾಮಕಸ್ತೂರಿ ಬೀಜವನ್ನು ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ದೇಹದ ಉಷ್ಣತೆಯನ್ನು ನಿಯಂತ್ರಣದಲ್ಲಿಡಬಹುದು. ಕಾಮಕಸ್ತೂರಿ ಎಲೆಯ ಸ್ವಲ್ಪ ರಸವನ್ನು ಸೇರಿಸಿದ ನೀರಿನಿಂದ ನಿಯತವಾಗಿ ಸ್ನಾನ ಮಾಡಿದರೆ ದೇಹದ ದುರ್ಗಂಧ ದೂರವಾಗುತ್ತದೆ. ರಾತ್ರಿ ನೆನೆಸಿದ ಕಾಮಕಸ್ತೂರಿ ಬೀಜಗಳಿಗೆ ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯುವುದರಿಂದ ರಕ್ತಭೇದಿ ಕ್ರಮೇಣ ಕಡಿಮೆಯಾಗುತ್ತದೆ.

ಚೆನ್ನಾಗಿ ನೆನೆಸಲಾದ ಕಾಮಕಸ್ತೂರಿ ಬೀಜಕ್ಕೆ ಸ್ವಲ್ಪ ಕಲ್ಲುಸಕ್ಕರೆ ಪುಡಿ ಸೇರಿಸಿ ಸೇವಿಸುವುದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಪ್ರತಿದಿನ ಕಾಮಕಸ್ತೂರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಮರುದಿನ ಬೆಳಗ್ಗೆ ಕುಡಿಯುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಕಾಮಕಸ್ತೂರಿಯ ಹಸಿ ಎಲೆಗಳನ್ನು ಅರೆದು ರಸ ತೆಗೆದು ಸೋಸಿ ಆ ರಸಕ್ಕೆ ಸ್ವಲ್ಪ ಜೇನುತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲುಬೇನೆ ಗುಣವಾಗುತ್ತದೆ.

- Advertisement -

ಕಾಮಕಸ್ತೂರಿಯ ಹೂವುಗಳನ್ನು ನೀರಿನಲ್ಲಿ ಅರೆದು ಸೋಸಿಕೊಂಡು ಸ್ವಲ್ಪ ಜೇನುತುಪ್ಪ ಬೆರೆಸಿ, ಅರ್ಧ ಗಂಟೆಗೊಮ್ಮೆ ಅರ್ಧ ಚಮಚ ರಸ ಸೇವಿಸುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಜರುಗುತ್ತದೆ. ಕಾಮಕಸ್ತೂರಿಯು ಫ್ಲೇವನಾಯ್ಡ್ಸ್ ಅಂಶ ಹೊಂದಿದ್ದರಿಂದ ನೆನೆಸಿದ ಅದರ ಬೀಜಕ್ಕೆ ಹಾಲು ಮತ್ತು ಜೇನುತುಪ್ಪ ಸೇರಿಸಿ ತಂಪುಪಾನೀಯದಂತೆ ಬಳಸಬಹುದು. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

- Advertisement -
- Advertisement -

Latest News

10 ನೆಯ ತರಗತಿ ವಿದ್ಯಾರ್ಥಿಗಳ ಮನೆಗೆ ಭೇಟಿ ನೀಡಿ ಧೈರ್ಯ ನೀಡಿದ ತಾಲೂಕಾಧಿಕಾರಿಗಳು

ಮೂಡಲಗಿ:- ಮಾರ್ಚ್ ನಲ್ಲಿ ನಡೆಯುವ 10 ನೆಯ ತರಗತಿ ವಿದ್ಯಾರ್ಥಿಗಳ ಪರೀಕ್ಷೆ, ಅದರ ಪೂರ್ವ ತಯಾರಿ ನಡೆಸುತ್ತಿರುವ ತಾಲೂಕಾ ಅಧಿಕಾರಿಗಳು ಪೂರ್ವಭಾವಿಯಾಗಿ ವಿದ್ಯಾರ್ಥಿಗಳ ಮನೆಗೆ ಭೇಟಿ...
- Advertisement -

More Articles Like This

- Advertisement -
close
error: Content is protected !!
Join WhatsApp Group