ಶಿಕ್ಷಕರನ್ನು ಬಿ.ಎಲ್.ಒ ಕರ್ತವ್ಯದಿಂದ ಬಿಡುಗಡೆಗೋಳಿಸ ಬೇಕೆಂದು ಆಗ್ರಹಿಸಿ ಮನವಿ

Must Read

ಮೂಡಲಗಿ: ಚುನಾವಣೆಯ ಮತಗಟ್ಟೆಗಳ ಅಧಿಕಾರಿಗಳಾಗಿ (ಬಿ.ಎಲ್.ಒ) ಕರ್ತವ್ಯ ನಿರ್ವಹಿಸುತ್ತಿರುವ ಶಿಕ್ಷಕರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಬೇಕು ಮತ್ತು ಗಳಿಕೆ ರಜೆ ಹಾಗೂ ಕೋವಿಡ್-19 ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರ ಹಾಜರಾತಿ ಪ್ರಮಾಣ ಪತ್ರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಮೂಡಲಗಿ ತಾಲೂಕಾ ಘಟಕ ಪದಾಧಿಕಾರಿಗಳು ಬುಧವಾರದಂದು ಪಟ್ಟಣದಲ್ಲಿ ತಹಶೀಲ್ದಾರ ಕಛೇರಿ ಶಿರಸ್ತೆದಾರ ಪರುಶುರಾಮ ನಾಯಕ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಿದರು.

ಶಾಲಾ ಶಿಕ್ಷಕರಿಗೆ ಪಾಠ ಬೋಧನೆ, ಖಾಲಿ ಹುದ್ದೆಗಳ ನಿರ್ವಹಣೆ, ರಾಷ್ಟ್ರೀಯ ಹಬ್ಬಗಳು, ಕ್ರೀಡಾಕೂಟ, ಪ್ರತಿಭಾ ಕಾರಂಜಿ, ಆಧಾರ ಸೀಡಿಂಗ್, ತಂತ್ರಾಂಶಗಳ ನಿರ್ವಹಣೆ ಕೆಲಸ, ಬಿಸಿ ಊಟ ನಿರ್ವಹಣೆ, ಪರೀಕ್ಷಾ ಮೌಲ್ಯ ಮಾಪನ ಕಾರ್ಯಗಳು, ಮೊಟ್ಟೆ ಹಂಚಿಕೆ, ಡೈಸ್-ಯು-ಡೈಸ್, ಮಕ್ಕಳ ದಾಖಲಾತಿ-ಹಾಜರಾತಿ ಮುಂತಾದ ಇಲಾಖಾ ಶೈಕ್ಷಣಿಕ ಕೆಲಸಗಳ ಜೊತೆಯಲ್ಲಿ ಚುನಾವಣೆಯ ಮತಗಟ್ಟೆಗಳ ಅಧಿಕಾರಿಗಳಾಗಿ (ಬಿ.ಎಲ್.ಒ) ಕರ್ತವ್ಯ ನಿರ್ವಹಿಸಿವಹಿಸಲು ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ತೊಂದರೆಯಾಗುತ್ತಿದೆ, ಪಾಲಕರ ಹಾಗೂ ಸಮಾಜದ ಕೆಂಗಣ್ಣಿಗೆ ಗುರಿಯಾಗಿದ್ದೇವೆ.

ಬಿ.ಎಲ್.ಒ ಕರ್ತವ್ಯ ನಿರ್ವಹಿಸುತ್ತಿರುವ ಶಾಲಾ ಶಿಕ್ಷಕರನ್ನು ಬಿಡುಗಡೆಗೊಳಿಸಿ ಮುಕ್ತಿ ನೀಡಬೇಕು, ಕೋವಿಡ್-19 ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ಶಿಕ್ಷಕರ ಹಾಜರಾತಿ ಪ್ರಮಾಣ ಪತ್ರ ಹಾಗೂ ಏಪ್ರಿಲ್ ರಿಂದ ಮೇ- 2023ರ ರಜಾ ಅವಧಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಬಿಎಲ್‍ಓ ಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಗಳಿಕೆ ರಜೆ ಮಂಜೂರು ಮಾಡುಬೇಕು. 

ಸನ್ 2019-20 ಹಾಗೂ 2020-21 ನೇ ಸಾಲಿನ ಬೇಸಿಗೆ ರಜಾ ಅವಧಿಯಲ್ಲಿ ಕೋವಿಡ್ ಕೆಲಸ ನಿರ್ವಹಿಸಿದ ಶಿಕ್ಷಕರಿಗೆ ಸರಕಾರ  ಗಳಿಕೆ ರಜೆ ಮಂಜೂರು ಮಾಡಿದೆ. ಆ ಸಂದರ್ಭದಲ್ಲಿ ಕೆಲಸ ನಿರ್ವಹಿಸಿದ ನಮ್ಮ ಮೂಡಲಗಿ ತಾಲೂಕಿನ ಶಿಕ್ಷಕರಿಗೆ ಇನ್ನೂ ವರೆಗೂ ಹಾಜರಾತಿ ಪ್ರಮಾಣ ಪತ್ರ ನೀಡಿರುವದಿಲ್ಲ ಹಾಗೂ ಏಪ್ರೀಲ್-2023 ರಿಂದ ಮೇ- 2023ರ ರಜಾ ಅವಧಿಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸಿದ ಬಿಎಲ್‍ಒ ಗಳಿಗೆ, ಮತಗಟ್ಟೆ ಅಧಿಕಾರಿಗಳಿಗೆ ಗಳಿಕೆ ರಜೆ ಮಂಜೂರು ಮಾಡಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. 

ಈ ಸಂದರ್ಭದಲ್ಲಿ ಸಂಘಟನೆಯ ತಾಲೂಕಾ ಅಧ್ಯಕ್ಷ ಆನಂದ ಹಂಜ್ಯಾಗೋಳ, ಪ್ರಧಾನ ಕಾರ್ಯದರ್ಶಿ ಕೆ.ಆರ್.ಅಜ್ಜಪ್ಪನವರ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಲ್.ಎಮ್.ಬಡಕಲ್ಲ, ಮಾಜಿ ಅಧ್ಯಕ್ಷ ಮಾಲತೇಶ ಸಣ್ಣಕ್ಕಿ ಹಾಗೂ ಪದಾಧಿಕಾರಿಗಳು, ಶಿಕ್ಷಕರು ಮತ್ತಿತರರು ಇದ್ದರು.

Latest News

ಗೌರವ -ಘನತೆಯೇ ಮಾನವ ಹಕ್ಕಿನ ಮೂಲ: ಕರೆಪ್ಪ ಬೆಳ್ಳಿ

ಸಿಂದಗಿ: ಮನುಷ್ಯನಿಗೆ ಮೊದಲು ಗೌರವ ಮತ್ತು ಘನತೆ ಇರಬೇಕು. ಜಾತಿ—ಧರ್ಮ ಯಾವ ಬೇಧ ಭಾವವೂ ಇಲ್ಲದೆ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳಿವೆ. ನಾವು ಎಲ್ಲರೂ ಮಾನವೀಯ ಮೌಲ್ಯಗಳನ್ನು...

More Articles Like This

error: Content is protected !!
Join WhatsApp Group