spot_img
spot_img

Sindagi: ಶಾಲಾ ಕಟ್ಟಡ ದುರಸ್ತಿಗೆ ಚಾಲನೆ; ವಿದ್ಯಾರ್ಥಿನಿ ಮನವಿಗೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ

Must Read

spot_img
- Advertisement -

ಸಿಂದಗಿ: ಮತಕ್ಷೇತ್ರದ ಬಬಲೇಶ್ವರ ಗ್ರಾಮದಲ್ಲಿ ಕೆಲ ದಿನಗಳ ಹಿಂದೆ ಜುಲೈ 10 ರಂದು ಕುಮಾರಿ ಸಂಧ್ಯಾ ಶರಣಪ್ಪ ಹಂಗರಗಿ ವಿದ್ಯಾರ್ಥಿನಿಯು ತಮ್ಮ ಶಾಲಾ ಕಟ್ಟಡ ದುರಸ್ತಿ ಬಗ್ಗೆ ಶಾಸಕರಿಗೆ ಮನವಿ ಮಾಡಿಕೊಂಡಿದ್ದಳು ಅದಕ್ಕೆ ಸ್ಪಂದಿಸಿದ ಶಾಸಕ ಅಶೋಕ ಮನಗೂಳಿ ಅವರು 2022-23 ನೇ ಸಾಲಿನ ಶಾಸಕರ ಪ್ರದೇಶಾಭಿವೃದ್ಧಿ ಯೋಜನೆಯಡಿ ರೂ. 9 ಲಕ್ಷ ಅನುದಾನದಲ್ಲಿ ದುರಸ್ತಿ ಕಾಮಗಾರಿಗೆ ಶಾಸಕರ ಸಮ್ಮುಖದಲ್ಲಿ ಕುಮಾರಿ ಸಂಧ್ಯಾ ಶರಣಪ್ಪ ಹಂಗರಗಿ ವಿದ್ಯಾರ್ಥಿ ಕಡೆ ಭೂಮಿ ಪೂಜೆ ನೆರವೇರಿಸಿದರು.

ಶಾಸಕ ಅಶೋಕ ಅಣ್ಣಾ ಮನಗೂಳಿ ಮಾತನಾಡಿ, ಮಾತುಕೊಟ್ಟಂತೆ ಬಬಲೇಶ್ವರ ಗ್ರಾಮದಲ್ಲಿ ಪ್ರಾಥಮಿಕ ಶಾಲಾ ಕಟ್ಟಡದ ಕಾಮಗಾರಿಗೆ 9 ಲಕ್ಷ ರೂ ಅನುದಾನ ಮಂಜೂರಿ ನೀಡಲಾಗಿದೆ ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಬಡಮಕ್ಕಳ ವಿದ್ಯಾಭ್ಯಾಸ ಕುಂಠಿತವಾಗಬಾರದು ಅಲ್ಲದೆ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂದು ಸರಕಾರಿ ಶಾಲೆಗಳ ಜೀರ್ಣೋದ್ದಾರಕ್ಕೆ ಹಲವಾರು ಯೋಜನೆಗಳನ್ನು ರೂಪಿಸಲಾಗುತ್ತಿದೆ ಅಲ್ಲದೆ ಗ್ರಾಮೀಣ ಮಟ್ಟದಲ್ಲೇ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಮೂಲಕ ಶಿಕ್ಷಣ ಪಡೆಯಬೇಕು ಎನ್ನುವ ಗುರಿಹೊಂದಿದೆ ಅಲ್ಲದೆ ತಾಲೂಕು ಮಟ್ಟದಲ್ಲಿ ಪದವಿ ಹಂತದ ಶಿಕ್ಷಣ ಸಿಗಬೇಕು ಎನ್ನುವ ಮಹಾದಾಸೆ ಇಟ್ಟುಕೊಂಡಿದೆ ಎಂದರು. 

ಇದೆ ಸಂದರ್ಭದಲ್ಲಿ 2021-22ನೇ ಸಾಲಿನ ಲೆಕ್ಕ ಶಿರ್ಷಿಕೆ 5054 ಯೋಜನೆಯಡಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯಿಂದ ಮಂಜೂರಾದ ರೂ 50.00 ಲಕ್ಷ ಮೊತ್ತದಲ್ಲಿ ಕನಕದಾಸ ವೃತ್ತದಿಂದ ಹನುಮಾನ ದೇವಸ್ಥಾನದವರೆಗೆ ಸಿಸಿ ರಸ್ತೆ ಕಾಮಗಾರಿಗೆ ಶಾಸಕ ಅಶೋಕ ಅಣ್ಣಾ ಮನಗೂಳಿ ಯವರು ಚಾಲನೆ ನೀಡಿದರು. 

- Advertisement -

ಇದೆ ಸಂದರ್ಭದಲ್ಲಿ ಶಾಲಾ ಸಿಬ್ಬಂದಿ, ಕೆಆರ್‍ಐಡಿಇ ಇಲಾಖೆ ಅಧಿಕಾರಿ ರಾಜಶೇಖರ, ಜಿಲ್ಲಾ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ವೈ.ಎ.ಮುರಾಳ, ಕ್ಷೇತ್ರ ಶಿಕ್ಷಣಾಧಿಕಾರಿ ಐ.ಎಸ್.ಟಕ್ಕೆ, ಊರಿನ ಗ್ರಾಮಸ್ಥರಾದ ಸಂಗಪ್ಪ ಚಾಗಶೆಟ್ಟಿ, ಈರಪ್ಪ ಹಂಚಿನಾಳ, ಸಿದ್ದಪ್ಪ ಹಿರೆಭಾಶೆಟ್ಟಿ, ಸಂಗಮೇಶ ಬಿರಾದಾರ, ಜಗು ನಾಯ್ಕೊಡಿ, ಗಂಗಪ್ಪ ಹಂಚಿನಾಳ, ನಬಿಸಾಬ ನದಾಫ, ಕುಮಾರ ದೇಸಾಯಿ, ವೈ.ಸಿ.ಮಯೂರ, ಶ್ರೀಶೈಲ ದೇಸಾಯಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಶಾಂತಾದೇವಿ ಮಾಳವಾಡರ ಸಾಹಿತ್ಯದ ಕಸುಬು ನಿಜಕ್ಕೂ ಅನನ್ಯ – ಭಾರತಿ ಮದಭಾವಿ

ಬೆಳಗಾವಿ ಜಿಲ್ಲಾ ಕಸಾಪ ವತಿಯಿಂದ ತಿಂಗಳ ಉಪನ್ಯಾಸ ಕಾರ್ಯಕ್ರಮ ಸಾಹಿತ್ಯದ ವಿವಿಧ ಆಯಾಮಗಳಲ್ಲಿ ಅತ್ಯಂತ ಆಸಕ್ತಿಯಿಂದ ಸೇವೆ ಮಾಡಿದ ಶಾಂತಾದೇವಿ ಮಾಳವಾಡರ ಬದುಕು ನಿಜಕ್ಕೂ ಮಾದರಿಯಾದದು. ಕೇಂದ್ರ,ರಾಜ್ಯ...
- Advertisement -

More Articles Like This

- Advertisement -
close
error: Content is protected !!
Join WhatsApp Group