ನಿಜ, ನಾವು ನಮ್ಮನ್ನು, ನಮ್ಮ ಪರಂಪರೆಯನ್ನು ಅರಿತುಕೊಳ್ಳಲು ನಮ್ಮ ‘ಇತಿಹಾಸ’ವನ್ನು ಓದಬೇಕು. ಹಾಗೆಂದು ಈಗ ಲಭ್ಯವಿರುವ ಇತಿಹಾಸ ಕೃತಿಗಳನ್ನು ಓದಿದರೆ ನಾವು ನಮ್ಮ ನಿಜವಾದ ಪರಂಪರೆಯನ್ನು ತಿಳಿಯಬಹುದೆ? ‘ಇಲ್ಲ’ ಎನ್ನುವುದೇ ವಿಷಾದಕರ ಸಂಗತಿ. ಏಕೆ?
ಬ್ರಿಟಿಷರ ಜೊತೆ ಬಂದ ಮಿಷನರಿ ಪಂಡಿತರು ಮತ್ತು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬಂದಳಿಕೆಗಳಂತೆ ಸರಕಾರಿ ಶೈಕ್ಷಣಿಕ-ಬೌದ್ಧಿಕ ವಲಯಕ್ಕೆ ಜೋತುಬಿದ್ದ ಕಮ್ಯೂನಿಸ್ಟರು ನಮ್ಮ ನೈಜ ಇತಿಹಾಸವನ್ನು ತಿರುಚಿ, ಭಾರತೀಯರನ್ನು ಭಾರತೀಯ ಪರಂಪರೆಯನ್ನು ತುಚ್ಛವಾಗಿ ಕೀಳಾಗಿ ಅವಹೇಳನಕಾರಿಯಾಗಿ ಚಿತ್ರಿಸಿದರು. ಈಗ ಬಹುತೇಕ ಲಭ್ಯವಿರುವುದು ಇಂಥ ದುರುದ್ದೇಶಪೂರಿತ ಕೃತಿಗಳೇ.
ಈ ದುರ್ಬುದ್ಧಿಜೀವಿಗಳು ಸರಕಾರದ ದುಡ್ಡಲ್ಲಿ ಸುಳ್ಳುಗಳನ್ನೇ ಇತಿಹಾಸವೆಂದು ಬರೆದು ಪೀಳಿಗೆಗಳನ್ನು ದಾರಿತಪ್ಪಿಸಿದ್ದಲ್ಲದೆ, ಖಜಾನೆಯನ್ನೂ ಲೂಟಿಮಾಡಿದ್ದು ಹೇಗೆ ಎಂಬುದನ್ನು ಆಧಾರ ಸಮೇತ ದೇಶದೆದುರು ಬಿಚ್ಚಿಟ್ಟವರು ಮಹಾನ್ ಲೇಖಕ ಅರುಣ್ ಶೌರಿ. ಅವರ ‘ಮಹಾನ್’ ಇತಿಹಾಸಕಾರರು’ ಕೃತಿ ನಾವೆಲ್ಲರೂ ಓದಬೇಕಾದದ್ದು.
#ಮಹಾನ್_ಇತಿಹಾಸಕಾರರು ಕೃತಿಯನ್ನು ಖರೀದಿಸಲು WhatsApp ಮಾಡಿ: 74836 074836 81708