spot_img
spot_img

Sindagi: ಇಂದಿನ ಪೀಳಿಗೆಗೆ ದೇಶದ ಇತಿಹಾಸ ಹೇಳಬೇಕು – ನಾಗರತ್ನಾ ಮನಗೂಳಿ

Must Read

- Advertisement -

ಸಿಂದಗಿ: ಭಾರತ ದೇಶವನ್ನು ಬ್ರಿಟೀಷರ ದಾಸ್ಯದಿಂದ ಮುಕ್ತಿಗೊಳಿಸಲು ನಮ್ಮ ಮಹಾನಾಯಕರ ತ್ಯಾಗ ಬಲಿದಾನದಿಂದ ದೇಶ ಸ್ವಾತಂತ್ರ್ಯ ಪಡೆದುಕೊಂಡಿದ್ದು ಇಂದಿನ ಪೀಳಿಗೆಗೆ ಇದರ ಸಂಪೂರ್ಣ ಪರಿಚಯ ಅತ್ಯವಶ್ಯಕವಾಗಿದೆ ಈ ಇತಿಹಾಸವನ್ನು ತಿಳಿಸಿಕೊಡಬೇಕಾದ ಅನಿವಾರ್ಯತೆ ಇದೆ ಎಂದು ಇನ್ನರವೀಲ್ ಕ್ಲಬ್ ಕಲ್ಯಾಣನಗರ ಮಾಜಿ ಅಧ್ಯಕ್ಷೆ ನಾಗರತ್ನಾ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸಂಗಮೇಶ್ವರ ಫಾರ್ಮಸಿ ಹಾಗೂ ಕಾವ್ಯ ಸಮೂಹ ಮಾಧ್ಯಮ ಪ್ರಾಥಮಿಕ ಶಾಲೆಯ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು  ಮಾತನಾಡಿದರು.

- Advertisement -

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ನಾಗರಬೆಟ್ಟ, ಕಾರ್ಯದರ್ಶಿ ಕಾಂಚನಾ ನಾಗರಬೆಟ್ಟ,  ಶಕುಂತಲಾ ಹಿರೇಮಠ, ಮಲ್ಲನಗೌಡ ಪಾಟೀಲ ಇಬ್ರಾಹಿಂಪೂರ, ಪ್ರಾಂಶುಪಾಲ ಸಂದೀಪ ಚಾಂದಕವಠೆ, ರಾಜು ಕಾಂಬಳೆ, ಮಾಂತೇಶ ಕಮಲಾಪೂರೆ, ಅಣ್ಣಾರಾಯ ವಾಲೀಕಾರ, ಶಿವು ಬಡಾನವರ, ಖಾದರಬಾಷಾ ವಾಲೀಕಾರ, ಸಂತೋಷ ಚವ್ಹಾಣ, ಬಸವರಾಜ ಪಾಟೀಲ, ಸುಮಾ ವಸ್ತ್ರದ, ಉಮಾ ಶಾಲಿನಿ. ಭಾಗ್ಯಶ್ರೀ, ರೇಷ್ಮಾ, ನಾಗರಾಜ ಕುಂಬಾರ ಸೇರಿದಂತೆ ಅನೇಕರಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಭವನ:

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ ಭವನದ ಆವರಣದಲ್ಲಿ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ತಾಲೂಕು ಅಧ್ಯಕ್ಷ ರಾಜೇಶೇಖರ ಕೂಚಬಾಳ ನೇರವೇರಿಸಿ ಮಾತನಾಡಿ, ಹಲವಾರು ಗಣ್ಯ ಮಹನೀಯರು ಗಳಿಸಿಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿ-ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಗೊಲ್ಲಾಳಪ್ಪಗೌಡ ಮಾಗಣಗೇರಿ, ಸಿ.ಎಂ.ದೇವರಡ್ಡಿ, ಮಾಧ್ಯಮ ಪ್ರತಿನಿಧಿ ಪಂಡಿತ ಯಂಪೂರೆ,  ಶಾಂತೂ ರಾಣಾಗೋಳ, ಶಿವು ಬಡಾನವರ, ಖಾದರಬಾಷಾ ವಾಲೀಕಾರ ಸೇರಿದಂತೆ ಅನೇಕರಿದ್ದರು. 

- Advertisement -

ಎಚ್.ಜಿ.ಪಪೂ ಕಾಲೇಜು:

ತಾಲೂಕಾ ಶಿಕ್ಷಣ ಪ್ರಸಾರಕ ಮಂಡಳಿಯ  ಎಚ್.ಜಿ.ಪಪೂ ಕಾಲೇಜಿನಲ್ಲಿ ಹಮ್ಮಿಕೊಂಡಿರುವ 77ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ಶಾಸಕರು ಹಾಗೂ ಚೇರಮನ್ ಅಶೋಕ ಮನಗೂಳಿ ನೇರವೇರಿಸಿದರು.

ಈ ಸಂಧರ್ಭದಲ್ಲಿ 2023-24 ನೇ ಸಾಲಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವೀತಿಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಕಾಲೇಜಿನ ಪ್ರಥಮ, ದ್ವೀತಿಯ ಸ್ಥಾನ ಬಂದಿರುವ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ನಿರ್ದೇಶಕ ಶಿವಪ್ಪಗೌಡ ಬಿರಾದಾರ ಸಂಸ್ಥೆಯ ಕಾರ್ಯದರ್ಶಿ ಬಿ.ಎಸ್.ಪಾಟೀಲ(ಡಂಬಳ), ಬಿ.ಜಿ.ನೆಲ್ಲಗಿ ವಕೀಲರು ಹಾಗೂ ವಿವಿಧ ಅಂಗಸಂಸ್ಥೆಗಳ ಪ್ರಾಚಾರ್ಯರಾದ ಡಾ.ಬಿ.ಜಿ.ಪಾಟೀಲ, ಎ.ಆರ್.ಹೆಗ್ಗಣದೊಡ್ಡಿ, ಎನ್.ವಿ.ಆಲಗೂರ.   ಎಸ್.ವಾಯ್.ಮೇಲಿನಮನಿ, ಪ್ರೊ: ಎಂ.ಎಸ್.ಕಿರಣಗಿ, ಆರ್.ವಾಯ್.ಪರೀಟ್ ವೇದಿಕೆ ಮೇಲೆ ಉಪಸ್ಥಿತರಿದ್ದರು. 

ತಾಪಂ ಸಿಂದಗಿ- ಪಟ್ಟಣದ ತಾಪಂ ಕಛೇರಿಯಲ್ಲಿ ತಾಪಂ ಇಓ ಬಾಬು ರಾಠೋಡ ಅವರು 77ನೇ ಸ್ವತಂತ್ರೋತ್ಸವದ ಧ್ವಜಾರೋಹಣ ನೇರವೇರಿಸಿದರು. 

ಸರಕಾರಿ ಆದರ್ಶ ವಿದ್ಯಾಲಯ: 

ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದ ಆವರಣದಲ್ಲಿ ಎಸ್‍ಡಿಎಂಸಿ ಅಧ್ಯಕ್ಷ ರವಿ ಬಮ್ಮಣ್ಣಿ 77ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೇರವೇರಿಸಿದರು.

ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯ ಎಸ್.ಕೆ.ಬಿರಾದಾರ, ಎಸ್‍ಡಿಎಂಸಿ ಸದಸ್ಯರಾದ ಶ್ರೀಶೈಲ ಕಡಣಿ, ಜಯಶ್ರೀ ತಳವಾರ, ಸಾವಿತ್ರಿ ಬಿರಾದಾರ, ಅಬ್ದುಲ್‍ಖರೀಮ ಮಕಾನದಾರ ಸೇರಿದಂತೆ ಶಾಲಾ ಸಿಬ್ಬಂದಿ ಇದ್ದರು.

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group