322ನೇ ಮನೆ ಮನೆ ಕವಿಗೋಷ್ಠಿ
ಮನೆ ಮನೆ ಕವಿಗೋಷ್ಠಿ, ಹಾಸನ ಇವರ ವತಿಯಿಂದ 322ನೇ ತಿಂಗಳ ಸಾಹಿತ್ಯ ವಿಮಶೆ೯, ಕವಿಗೋಷ್ಠಿ, ಗಾಯನ ಕಾರ್ಯಕ್ರಮವು ಕವಿ ನಿರಂಜನಮೂತಿ೯ ಟಿ. ಇವರ ಪ್ರಾಯೋಜಕತ್ವದಲ್ಲಿ ಹಾಸನ ನಗರದ ಸಿಟಿ ಬಸ್ ನಿಲ್ದಾಣದ ವಾಣಿ ವಿಲಾಸ ರಸ್ತೆ, ಪ್ರಾಚ್ಯ ವಸ್ತು ಸಂಗ್ರಹಾಲಯ ಪಕ್ಕದ ಥಿಯಸಾಫಿಕಲ್ ಸೊಸೈಟಿ ಕಾಯಾ೯ಲಯದಲ್ಲಿ ದಿನಾಂಕ 6-10-2024ರ ಭಾನುವಾರ ಮಧ್ಯಾಹ್ನ 3.00 ಗಂಟೆಗೆ
ನಡೆಯುವುದು.
ಕವಿ ಸಾಹಿತಿ ನಿರಂಜನಮೂತಿ೯ ಟಿ. ಶಿಕ್ಷಕರು, ಬಿಸಲೇಹಳಿ, ಮುದುಡಿ ಅಂಚೆ, ಗಂಡಸಿ ಹೋಬಳಿ, ಅರಸೀಕೆರೆ ತಾಲೂಕು ಇವರ ಕವನ ಸಂಕಲನ ‘ ಕಾಮನಬಿಲ್ಲು’ ಕೃತಿ ಕುರಿತು ಲೋಕೇಶ್ ಬಿ. ಟಿ. ಕನ್ನಡ ಉಪನಾೃಸಕರು, ಸಕಾ೯ರಿ ಮಹಿಳಾ ಪ್ರಥಮ ದರ್ಜೆ ಕಾಲೇಜು, ಹೊಳೆನರಸೀಪುರ ಇವರು ವಿಮಶೆ೯ ಮಾಡುವರು..
ಡಾ. ಎಂ. ಆರ್. ಚಂದ್ರಶೇಖರ್, ನಿವೃತ್ತ ಪ್ರಾಂಶುಪಾಲರು ಹಾಗೂ ಅಧ್ಯಕ್ಷರು, ಥಿಯಸಾಫಿಕಲ್ ಸೊಸೈಟಿ, ಹಾಸನ ಇವರು ಕಾಯ೯ಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು.
ಪುಸ್ತಕ ವಿಮಶೆ೯ ನಂತರ ಆಗಮಿತ ಕವಿಗಳಿಂದ ಕವಿಗೋಷ್ಠಿ, ವಾಚಿಸಿದ ಕವಿತೆಗಳ ಅವಲೋಕನ, ಗಾಯಕ ಗಾಯಕಿಯರಿಂದ ಭಾವಗೀತೆ ಜನಪದ ಗೀತೆ, ರಂಗಭೂಮಿ ಕಲಾವಿದರಿಂದ ರಂಗಗೀತೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯಾಸಕ್ತರು ಗಾಯಕರು, ಕಲಾವಿದರು ಭಾಗವಹಿಸಬೇಕೆಂದು ಮನೆ ಮನೆ ಕವಿಗೋಷ್ಠಿ ಸಂಚಾಲಕರಾದ ಗೊರೂರು ಅನಂತರಾಜುರವರು ಕೋರಿರುತ್ತಾರೆ.