ಜನ್ಮ ನೀಡಿದ ತಾಯಿಯ ಋಣ, ಅನ್ನ ನೀಡಿದ ಮಣ್ಣಿನ ಋಣ ತಿರಿಸಲಾಗದು- ಸಂಸದ ಈರಣ್ಣ ಕಡಾಡಿ
ಮೂಡಲಗಿ: ಜನ್ಮ ನೀಡಿದ ತಾಯಿಯ ಋಣ, ಅನ್ನ ನೀಡಿದ ಮಣ್ಣಿನ ಋಣ ಇದನ್ನು ಎಂದೂ ಮರೆಯಲಾಗದು. ಭೂಮಿ ತಾಯಿಯ ಮಣ್ಣಿನ ಋಣವನ್ನು ಇನ್ನಷ್ಟು ಗಟ್ಟಿಗೊಳಿಸಲು ಮತ್ತು ಈ ಮಣ್ಣಿನಲ್ಲಿ ನಾಡಿಗಾಗಿ ಪ್ರಾಣ ತೆತ್ತ ಹಲವಾರು ಮಹನೀಯರ ಸ್ಮರಣೆಗಾಗಿ ಅಗಸ್ಟ 09ರ ಕ್ವಿಟ್ ಇಂಡಿಯಾ ಚಳವಳಿಯಿಂದ ಹಿಡಿದು ಸ್ವಾತಂತ್ರೋತ್ಸವದ ಅಗಸ್ಟ-15 ರವರೆಗೆ ಕೇಂದ್ರ ಸರ್ಕಾರ ಮೇರಾ ಮಾಟಿ, ಮೇರಾ ದೇಶ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದರು.
ಮಂಗಳವಾರ ಆ-15 ರಂದು ಜಿಲ್ಲಾ ಪಂಚಾಯತ ಬೆಳಗಾವಿ, ತಾಲೂಕ ಪಂಚಾಯತ ಮೂಡಲಗಿ ಹಾಗೂ ಗ್ರಾಮ ಪಂಚಾಯತ ಶಿವಾಪೂರ ಇವರುಗಳ ಸಂಯುಕ್ತಾಶ್ರಯದಲ್ಲಿ ನಡೆದ `ಮೇರಿ ಮಾಟಿ ಮೇರಾ ದೇಶ” ಅಭಿಯಾನಕ್ಕೆ ಸಸಿಗಳನ್ನು ನೆಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ದೇಶಕ್ಕಾಗಿ ತ್ಯಾಗ ಬಲಿದಾನ ಗೈದ ವೀರರಿಗೆ ಗೌರವ ಸಲ್ಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಕೊಟ್ಟ ಕರೆಯಂತೆ ದೇಶಾದ್ಯಂತ ಆಗಸ್ಟ್ 9 ರಿಂದ 15 ರವರೆಗೆ ನಡೆಯುತ್ತಿರುವ “ಮೇರಾ ಮಾಟಿ, ಮೇರಾ ದೇಶ್ (ನನ್ನ ಮಣ್ಣು, ನನ್ನ ದೇಶ) ಅಭಿಯಾನದಿಂದ ದೇಶಕ್ಕಾಗಿ ತ್ಯಾಗ ಮಾಡಿದ ಅಸಂಖ್ಯ ಸ್ವಾತಂತ್ರ‍್ಯ ಹೋರಾಟಗಾರರನ್ನು ಸ್ಮರಿಸುತ್ತೇವೆ. ತನ್ಮೂಲಕ ಸ್ವಾತಂತ್ರ‍್ಯದ ಬೆಲೆಯನ್ನು ಅರ್ಥ ಮಾಡಿಕೊಳ್ಳುತ್ತೇವೆ. ಹೀಗಾಗಿ ದೇಶದ ಪ್ರತಿಯೊಬ್ಬರೂ ಇದರಲ್ಲಿ ಕೈಜೋಡಿಸಬೇಕೆಂದು ಹೇಳಿದರು.
ಈ ಅಭಿಯಾನವು ದೇಶಾದ್ಯಂತ ‘ಅಮೃತ ಕಲಶ ಯಾತ್ರೆ’ಗೆ ಸಾಕ್ಷಿಯಾಗಲಿದೆ, ಇದು ಭಾರತದ ಮೂಲೆ ಮೂಲೆಯಿಂದ ದೆಹಲಿಗೆ 7500 ಕಲಶಗಳಲ್ಲಿ ಮಣ್ಣನ್ನು ಸಾಗಿಸುತ್ತದೆ. ಈ ಪ್ರಯಾಣದಲ್ಲಿ ಮಣ್ಣಿನ ಜೊತೆಗೆ ದೇಶದ ವಿವಿಧ ಪ್ರದೇಶಗಳ ಸಸಿಗಳನ್ನೂ ಒಯ್ಯಲಾಗುವುದು. ಈ ಎರಡೂ ಅಂಶಗಳನ್ನು ರಾಷ್ಟ್ರೀಯ ಯುದ್ಧ ಸ್ಮಾರಕದ ಬಳಿ ‘ಅಮೃತ ಉದ್ಯಾನ’ ರಚಿಸಲು ಬಳಸಲಾಗುತ್ತದೆ, ಇದು ‘ಏಕ್ ಭಾರತ್ ಶ್ರೇಷ್ಠ ಭಾರತ’ದ ಭವ್ಯ ಸಂಕೇತವಾಗಿ ಕಾರ್ಯನಿರ್ವಹಿಸುತ್ತದೆ ಎಂದರು.
ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಿದರು, ಗ್ರಾಮಸ್ಥರು, ಹಿರಿಯರು, ಸಂಘ ಸಂಸ್ಥೆಗಳಿಂದ ಮತ್ತು ನಿವೃತ್ತ ಯೋಧರನ್ನು ಸಂಸದ ಈರಣ್ಣ ಕಡಾಡಿ ಅವರು ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಅಡವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಪೂಜ್ಯರಾದ ಅಡವಿ ಸಿದ್ದರಾಮ ಮಹಾಸ್ವಾಮಿಗಳ ಆರ್ಶೀವಾದ ಪಡೆದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ. ಚಿನ್ನನ್ನವರ್, ನೋಡಲ್ ಅಧಿಕಾರಿ ರೋಹಿತ, ಶಿವನಗೌಡ ಪಾಟೀಲ, ಗ್ರಾಮ ಪಂಚಾಯತ ಅಧ್ಯಕ್ಷೆ ಯಮನವ್ವ ಗಿಡ್ಡವಗೋಳ, ಶಂಕರಗೌಡ ಪಾಟೀಲ, ಈಶ್ವರ ಬೆಳಗಲಿ, ಮಲ್ಲಪ್ಪ ಜುಂಜರವಾಡ, ಶಿವಬಸು ಜುಂಜರವಾಡ, ಲಕ್ಕಪ್ಪ ಕಬ್ಬೂರ, ಪ್ರಕಾಶ ಮಾದರ, ಕೆಂಪ್ಪಣ್ಣ ಮುಧೋಳ, ಸತೀಶ ಜುಂಜರವಾಡ, ಬಸವರಾಜ ಸಾಯನ್ನವರ, ಈಶ್ವರ ಶೀಳನ್ನವರ, ಮಲ್ಲಪ್ಪ ಢವಳೇಶ್ವರ, ಮಹಾಂತೇಶ ಕುಡಚಿ, ನಿವೃತ್ತ ಸೈನಿಕ ಶಂಕರ ತುಕ್ಕನ್ನವರ, ಮಲ್ಲಪ್ಪ ಗಿರೆಣ್ಣವರ,ಸುಜಾತ ಮೇತ್ರಿ, ಡಾ. ಬಿ.ಎಂ. ಪಾಲಭಾಂವಿ, ಪರಪ್ಪ ಗಿರೆಣ್ಣವರ, ತಾ.ಪಂ ಸಹಾಯಕ ನಿರ್ದೇಶಕರಾದ ಸಂಗಮೇಶ ರೊಡ್ಡನ್ನವರ, ಚಂದ್ರಶೇಖರ ಬಾರ್ಕಿ ಸೇರಿದಂತೆ ಮಾಜಿ ಸೈನಿಕರು, ಪ್ರಗತಿಪರ ರೈತರು ಉಪಸ್ಥಿತರಿದ್ದರು.