spot_img
spot_img

ಲಿಂಗಾಯತ ಸಂಘಟನೆ ವತಿಯಿಂದ ‘ಡಾನ್ಸ್ ಬೆಳಗಾವಿ ಡಾನ್ಸ್ ‘ಕಾರ್ಯಕ್ರಮ

Must Read

- Advertisement -

ಮಂಗಳವಾರ ದಿ. ೧೫ರಂದು ಬೆಳಗಾವಿ ನಗರದ ಗಾಂಧಿ ಭವನದಲ್ಲಿ  ಲಿಂಗಾಯತ ಸಂಘಟನೆ ವತಿಯಿಂದ ಶಾಲಾ, ಕಾಲೇಜು ಮಕ್ಕಳಿಗೆ ‘ಡಾನ್ಸ್ ಬೆಳಗಾವಿ ಡಾನ್ಸ್’ ಎಂಬ ಅದ್ದೂರಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ಲಿಂಗಾಯತ ಸಂಘಟನೆ ವತಿಯಿಂದ ನಿರಂತರವಾಗಿ ಸಮಾಜೋಪಯೋಗಿ ಕಾರ್ಯಕ್ರಮಗಳು ಜರುಗುತ್ತಿವೆ. ದೇಶ ಭಕ್ತಿ ಹೆಚ್ಚಿಸುವ ಇಂತಹ ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲೂ ಆಯೋಜನೆ ಆಗಲಿ ನನ್ನಿಂದ ಸಂಪೂರ್ಣ  ಸಹಕಾರ ನೀಡುತ್ತೇನೆ ಎಂದರು.     

ಉತ್ತರ ಮತಕ್ಷೇತ್ರವನ್ನು ಮಾದರಿಯಾಗಿ ಮಾಡುವ ಮತ್ತು ಎಲ್ಲಾ ಸಮಾಜದವರನ್ನು ಒಗ್ಗೂಡಿಸಿಕೊಂಡು ನಗರಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ತಮ್ಮೆಲ್ಲರ ಸಹಕಾರದಿಂದ ಶ್ರಮಿಸುತ್ತೇನೆ ಎಂದರು. 

- Advertisement -

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ  ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಮಾತನಾಡಿ, ಲಿಂಗಾಯತ ಸಂಘಟನೆಯವರು ಬೆಳಗಾವಿ ನಗರದಲ್ಲಿ  ಸ್ಥಾಪಿಸಲು ಯೋಜಿಸಿರುವ ಅನುಭವ ಮಂಟಪದ ಕಟ್ಟಡವನ್ನು ಕಟ್ಟಲು ಎಲ್ಲರೂ ಶ್ರಮಿಸಿ ಬಸವಣ್ಣನವರ ಪಥದಲ್ಲಿ ಸಾಗುತ್ತಾ ಬೆಳಗಾವಿಯನ್ನು ಮಾದರಿಯಾಗಿ ಮಾಡೋಣ ಎಂದರು. 

ಕಾರ್ಯಕ್ರಮದಲ್ಲಿ ಲಿಂಗಾಯತ ಸಂಘಟನೆಯ ಅಧ್ಯಕ್ಷ ಈರಣ್ಣ ದೇಯನ್ನವರ 20 ವರ್ಷಗಳಲ್ಲಿ ಸಂಘಟನೆ ಹಮ್ಮಿಕೊಂಡ ವಿವಿಧ ಕಾರ್ಯಕ್ರಮಗಳನ್ನು ಮತ್ತು ಮುಂಬರುವ ದಿನಗಳಲ್ಲಿ ಯೋಜಿಸಿರುವ ಯೋಜನೆಗಳನ್ನು ಸಭೆಗೆ ತಿಳಿಸಿದರು. “ಡಾನ್ಸ್ ಬೆಳಗಾವಿ ಡಾನ್ಸ್ “ಕಾರ್ಯಕ್ರಮಕ್ಕೆ ಸಹಕಾರ ನೀಡಿದ ಮಾಜಿ ಸಚಿವ ಎ.ಬಿ ಪಾಟೀಲ್, ಹಿರಿಯರಾದ ಬಾಬಣ್ಣಾ ಕಗ್ಗನಗಿ, ಬಸವರಾಜ ಜೊಂಡ,  ಮಂಜುನಾಥ ಹುಲಿಕಟ್ಟಿ,ದಿನೇಶ ಪಾಟೀಲ, ಬಸವರಾಜ ಪಾಟೀಲ, ಸಂತೋಷ ಗುಡಸ,ರಮೇಶ ಕಳಸನ್ನವರ ಅಡವೇಶ ಇಟಗಿ ಮಹಾಂತೇಶ ವಕ್ಕುಂದ,ವೀರೇಶ ಕಿವಡಸನ್ನವರ ಮುಂತಾದವರನ್ನು ಸಂಘಟನೆ ವತಿಯಿಂದ ಸನ್ಮಾನಿಸಲಾಯಿತು. 

ಡಾನ್ಸ್ ಬೆಳಗಾವಿ ಡಾನ್ಸ್ ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳ 22 ತಂಡಗಳು ಭಾಗವಹಿಸಿದ್ದವು. ಎಲ್ಲಾ ತಂಡಗಳು ದೇಶಭಕ್ತಿ ಉಕ್ಕಿಸುವ ಹಲವಾರು ದೇಶಭಕ್ತಿ ಗೀತೆಗಳಿಗೆ  ಹೆಜ್ಜೆ ಹಾಕಿದರು. ಕಾರ್ಯಕ್ರಮದ ಮಧ್ಯದಲ್ಲಿ  ಆಗಮಿಸಿ ಕಾರ್ಯಕ್ರಮವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಮಾತನಾಡಿ, ಬೆಳಗಾವಿ ಸಂಸ್ಕೃತಿಕ ಕಲೆಗಳಿಗೆ ಯಾವಾಗಲೂ ಹೆಸರಾಗಿದೆ.

- Advertisement -

ಯಾವುದೇ ಕಲೆ ವ್ಯಕ್ತಪಡಿಸಲು ಪರಿಶ್ರಮ ಬೇಕು. ಆ ನಿಟ್ಟಿನಲ್ಲಿ ದೇಶಭಕ್ತಿ ನೆಲೆಗಟ್ಟಿನಲ್ಲಿ ನಡೆಸುತ್ತಿರುವ ಇಂತಹ ಸಾಂಸ್ಕೃತಿಕ ಮೇಳಗಳು ನಿಜಕ್ಕೂ ಮುಂಬರುವ ಪೀಳಿಗೆಗೆ ದೇಶಭಕ್ತಿ ಉಕ್ಕಿಸಲು ಸಹಕಾರಿಯಾಗುತ್ತವೆ ಇಂತಹ ಕಾರ್ಯಕ್ರಮಗಳು ಮುಂದುವರೆಯಲಿ ಎಂದರು.

ಈ ಕಾರ್ಯಕ್ರಮದಲ್ಲಿ ರಾಣಿ ಚೆನ್ನಮ್ಮಳ ನೃತ್ಯ ರೂಪಕ ಪ್ರಸ್ತುತಪಡಿಸಿದ ಬೆಳಗಾವಿಯ ವಿ. ಬಿ ಡ್ಯಾನ್ಸ್ ತಂಡ ಪ್ರಥಮ ಬಹುಮಾನ, ಭಗತ್ ಸಿಂಗರ ಮನಮೋಹಕ ನೃತ್ಯ ರೂಪಕ ಪ್ರದರ್ಶನ ಮಾಡಿದ ಬೆಳಗಾವಿಯ ಆಪ್ಷನ್ ಡಾನ್ಸ್ ಕ್ರಿವ್ ತಂಡ ದ್ವಿತೀಯ ಬಹುಮಾನ ಮತ್ತು ನವಸೇನಾ ಗ್ರೂಪ್ ತಂಡ ತೃತೀಯ ಬಹುಮಾನ ಪಡೆಯಿತು . ಬೆಳಗಾವಿಯ ಮರಾಠಾ ಮಂಡಳ ಡಾನ್ಸ್ ಗ್ರೂಪ್ ಮತ್ತು ಲಕ್ಕಿ ಗ್ರೂಪ್ ತಂಡಗಳು ಸಮಾಧಾನಕರ ಬಹುಮಾನ ಪಡೆದವು. ಈ ಭವ್ಯವಾದ ನೃತ್ಯ ಕಾರ್ಯಕ್ರಮದ ಪ್ರಧಾನ ಸಂಚಾಲಕರಾದ ಸತೀಶ ಪಾಟೀಲ ಬಹುಮಾನ ವಿತರಿಸಿ ಮಾತನಾಡಿ, ಲಿಂಗಾಯತ ಸಂಘಟನೆ ವತಿಯಿಂದ ಇಂತಹ ಹಲವಾರು ಕಾರ್ಯಕ್ರಮಗಳು ಮುಂಬರುವ ದಿನಗಳಲ್ಲಿ ಬೆಳಗಾವಿ ನಗರದ ಮಹಾ ಜನತೆಗೆ ನೀಡುವಲ್ಲಿ ಶ್ರಮ ವಹಿಸುತ್ತೇವೆ ಎಂದರು.     

       ಕಾರ್ಯಕ್ರಮದ ನಿರ್ಣಾಯಕರಾಗಿ ಉಪನ್ಯಾಸಕರಾದ ಶ್ರೀಕಾಂತ ಶಾನವಾಡ ಸೇರಿದಂತೆ ಬೆಳಗಾವಿಯ ನೃತ್ಯ ಅಕಾಡೆಮಿಗಳ ನುರಿತ ತಜ್ಞರು ಕಾರ್ಯನಿರ್ವಹಿಸಿದರು. ಶಂಕರ ಗುಡಸ,ಸಂಗಮೇಶ ಅರಳಿ, ಸದಾಶಿವ ದೇವರಮನಿ, ಶಶಿಭೂಷಣ ಪಾಟೀಲ, ಶಿವಾನಂದ ತಲ್ಲೂರ ಕಾರ್ಯಕ್ರಮವನ್ನು           ಅಚ್ಚುಕಟ್ಟಾಗಿ ನಿರ್ವಹಿಸಿದರು. ತಜ್ಞ ಕಲಾವಿದೆ ಪ್ರಿಯಾ ಬರಡೇಸ್ಕರ್ ಕಾರ್ಯಕ್ರಮವನ್ನು  ಅಚ್ಚುಕಟ್ಟಾಗಿ ನಿರೂಪಿಸಿದರು.

- Advertisement -
- Advertisement -

Latest News

ಎಮ್ಮೆತಮ್ಮನ ಕಗ್ಗದ ತಾತ್ಪರ್ಯ 

  ದೇಶ ಸುತ್ತಿದರಿಲ್ಲ‌ ಕೋಶ ಓದಿದರಿಲ್ಲ ಪುಣ್ಯಕ್ಷೇತ್ರದಿ ಮುಳುಗಿ ಬಂದರಿಲ್ಲ ಸುಳಿದು ಸೂಸುವ ಮನವ ಶ್ವಾಸದಲಿ ನಿಲಿಸಿದರೆ ನಿಚ್ಚ ನಿರ್ಮಲ ಬೆಳಕು - ಎಮ್ಮೆತಮ್ಮ ಶಬ್ಧಾರ್ಥ ಕೋಶ‌ = ಪುಸ್ತಕ ತಾತ್ಪರ್ಯ ದೇಶವೆಲ್ಲ ತಿರುಗಾಡಿ ಕಾಶಿ, ಕೇದಾರ,...
- Advertisement -

More Articles Like This

- Advertisement -
close
error: Content is protected !!
Join WhatsApp Group