ಗಾಂಧಿ ಜಯಂತಿ ಕುರಿತು ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ

Must Read

ಕರ್ನಾಟಕ ಸರ್ವೋದಯ ಮಂಡಲ ಬೆಂಗಳೂರು ಇವರು ಗಾಂಧೀಜಿ ಅವರ 154ನೇ  ಜಯಂತಿ ನಿಮಿತ್ತ ಕೆಳಗೆ ಕಾಣಿಸಿದ ಯಾವುದೇ ಒಂದು ವಿಷಯದ ಕುರಿತು ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ ಏರ್ಪಡಿಸಿದೆ.

  • ಗಾಂಧಿ ನಮಗೆಷ್ಟು ಬೇಕು?
  • ಗಾಂಧಿ ನಂತರದ ಭಾರತ- ನಡೆದಿದ್ದು , ಎಡವಿದ್ದು , ಎಲ್ಲಿ? ಹೇಗೆ ?
  • ಗಾಂಧಿ ಇಂದಿಗೂ ಪ್ರಸ್ತುತ –  ಏಕೆ ? ಹೇಗೆ ?
  • ಯುವಜನರಿಗೆ ಗಾಂಧಿಯನ್ನು ತಲುಪಿಸುವುದು ಹೇಗೆ ?
  • ಸಾಮಾಜಿಕ ಮಾಧ್ಯಮಗಳಲ್ಲಿ ಗಾಂಧಿ ನಿಂದನೆ – ಪರಿಹಾರ ಮಾರ್ಗಗಳು ?

ಎಲ್ಲರೂ ಸರಿ. ಆದರೆ ಯಾವುದೂ ಸರಿ ಇಲ್ಲ  -ಪ್ರಸಕ್ತ ಸ್ಥಿತಿ – ಗತಿಗಳ ಸಮೀಕ್ಷೆ

 ಐದು ನೂರು ಪದಗಳ ಮಿತಿಯಲ್ಲಿ ಕನ್ನಡ ಅಥವಾ ಇಂಗ್ಲೀಷ್ ನಲ್ಲಿ ಬರಹಗಳನ್ನು ಆಯೋಜಕರು ,ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆ,  ಕರ್ನಾಟಕ ರಾಜ್ಯ ಸರ್ವೋದಯ ಮಂಡಲ, ವಲ್ಲಭ ನಿಕೇತನ, ಕುಮಾರ ಪಾರ್ಕ್ ಪೂರ್ವ, ಬೆಂಗಳೂರು-  560001 ಈ ವಿಳಾಸಕ್ಕೆ  ಅಥವಾ sarvodayasuresh @gmail.com  ಗಾಗಲಿ 2023 ಸೆಪ್ಟೆಂಬರ್15 ರ ಒಳಗೆ ಕಳುಹಿಸಲು ಕೋರಿದೆ.

ಯಾವುದೇ ವಯಸ್ಸಿನ ಮಿತಿ ಇಲ್ಲ ; ಬರೆದವರ ಪೂರ್ತಿ ವಿಳಾಸ ,ಮೊಬೈಲ್ ಸಂಖ್ಯೆ ಹಾಗೂ ಇ ಮೇಲ್ ಕಳುಹಿಸಬೇಕು ; ಉತ್ತಮ ಬಹುಮಾನಿತ ಬರಹಗಳನ್ನು ಯಥಾವಕಾಶ ಪ್ರಕಟಿಸಲಾಗುವುದು.

ವಿವರಗಳಿಗೆ 94480 27400 (ಸುರೇಶ್), 99013 77911 (ದೊಡ್ಡಯ್ಯ),

90356 18076 (ಗುರುರಾಜ್) ಇವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group