ಉತ್ತಮ ಗ್ರಂಥಪಾಲಕ ರಾಜ್ಯ ಪ್ರಶಸ್ತಿ ಪಡೆದ ಪ್ರಕಾಶ ಇಂಚಲ ಕರಂಜಿ ಗೆ ಸನ್ಮಾನ

0
460

ಪ್ರಶಸ್ತಿಗಳು ಜವಾಬ್ದಾರಿ ಹೆಚ್ಚಿಸುತ್ತವೆ : ಸುಣಗಾರ ಅಭಿಮತ 

ಬೆಳಗಾವಿ: ನಾವು ಮಾಡುವ  ಸರಕಾರಿ ಸೇವೆಯಲ್ಲಿಯ ಪ್ರತಿಯೊಂದು ಕೆಲಸ ಕಾರ್ಯ ಗಳಲ್ಲಿ ನಿಷ್ಠೆ, ಶೃದ್ಧೆ ಮತ್ತು ಸಾಮಾಜಿಕ ಜವಾಬ್ದಾರಿ ಇಟ್ಟು ಕೊಂಡು ಕಾರ್ಯ ನಿರ್ವಹಣೆ ಮಾಡಿದರೆ ಸಮಾಜ, ಸರ್ಕಾರ ಖಂಡಿತವಾಗಿಯೂ ನಮ್ಮನ್ನು ಗುರುತಿಸುತ್ತದೆ ಜೊತೆಗೆ ಸನ್ಮಾನ, ಪ್ರಶಸ್ತಿ ಗೌರವವೂ ಸಿಗುತ್ತದೆ.ಯಾವುದೇ ಪ್ರಶಸ್ತಿ, ಗೌರವ ಸಿಕ್ಕರೆ,ಮಾಡಿದ ಕೆಲಸ ಇತರರ ಗಮನ ಸೆಳೆದ ತೃಪ್ತಿ ಸಾಧಕರಿಗೆ ಸಿಗುತ್ತದೆ, ಅದರಿಂದ ಅವರ ಜವಾಬ್ದಾರಿ ಹೆಚ್ಚಾಗಿ ಅವರು ಇನ್ನೂ ಹೆಚ್ಚಿನ ಸಾಧನೆ ಮಾಡಲು ಪ್ರೇರಣೆ ನೀಡುತ್ತದೆ ಎಂದು ಬೆಳಗಾವಿಯ ಶ್ರೀ ಸದ್ಗುರು ಸಾಹಿತ್ಯ ಪ್ರತಿಷ್ಠಾನ, ಅಧ್ಯಕ್ಷರಾದ ಹಾಗೂ ಹಿರಿಯ ಮುಖ್ಯೋಪಾಧ್ಯಾಯರಾದ ಬಸವರಾಜ ಸುಣಗಾರ ಅವರು ಅಭಿಪ್ರಾಯ ಪಟ್ಟರು.

ಬೆಳಗಾವಿ ನಗರದ ನಗರ ಕೇಂದ್ರ ಗ್ರಂಥಾಲಯದ ಸಭಾಂಗಣ ದಲ್ಲಿ,ಉತ್ತಮ ಕಾರ್ಯ ಮಾಡಿದ ನಿಮಿತ್ತ ಇತ್ತೀಚೆಗೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ನವರಿಂದ ‘ಉತ್ತಮ ಗ್ರಂಥಪಾಲಕ’ ರಾಜ್ಯ ಪ್ರಶಸ್ತಿ ಪಡೆದುಕೊಂಡ ನಿಮಿತ್ತ ಗ್ರಂಥಾಲಯದ ಗ್ರಂಥ ಪಾಲಕರಾದ ಪ್ರಕಾಶ ಇಚಲಕರಂಜಿ ಅವರ ಸನ್ಮಾನ ಕಾರ್ಯಕ್ರಮದಲ್ಲಿ ಅವರನ್ನು ಸನ್ಮಾನಿಸಿ ಅಭಿನಂದಿಸಿ ಮಾತನಾಡುತ್ತಿದ್ದರು.

ಗ್ರಂಥಾಲಯ ಇಲಾಖೆಯಲ್ಲಿ 25 ವರ್ಷಗಳ ಕಾಲ ಉತ್ತಮ ಕಾರ್ಯ ಮಾಡಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಕಾಶ ಇಚಲಕರಂಜಿಯವರನ್ನು ಅಭಿನಂದಿಸಿ, ಅವರೊಬ್ಬ ಸರಳ ಸಜ್ಜನಿಕೆಯ ಸ್ನೇಹ ಜೀವಿಯಾಗಿದ್ದಾರೆ, ಯಾವಾಗಲು ಓದುಗರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ, ವಿನಯಶೀಲ ನಡವಳಿಕೆಯಿಂದ ಇತರರಿಗೆ ಮಾದರಿಯಾಗಿದ್ದಾರೆ ಜೊತೆಗೆ ಗ್ರಂಥಾಲಯ ಇಲಾಖೆಯ ಹಿರಿಯ ಅಧಿಕಾರಿಗಳ ಮೆಚ್ಚುಗೆ ಪಡೆದಿರುವರು ಎಂದು ಬಸವರಾಜ ಸುಣಗಾರ ಹೇಳಿ ಅವರ ಸೇವೆ ಸ್ಮರಿಸಿದರು 

ನಗರದ ಸದ್ಗುರು ಸಾಹಿತ್ಯ ಪ್ರತಿಷ್ಠಾನ ಹಾಗೂ ಸಮಾನ ಮನಸ್ಕರ ಬಳಗದ ವತಿಯಿಂದ ಸನ್ಮಾನ ಸಮಾರಂಭ  ಹಮ್ಮಿಕೊಳ್ಳಲಾಗಿತ್ತು, ಸಭೆಯಲ್ಲಿ ಮಾತನಾಡಿದ ಹಿರಿಯ ವಕೀಲರಾದ ರವಿ ಎನ್ ಶಾಸ್ತ್ರಿ ಅವರು, ನಮ್ಮ ಜಿಲ್ಲೆಗೆ ರಾಜ್ಯ ಪ್ರಶಸ್ತಿ ಬಂದಿರುವುದು, ಅತ್ಯಂತ ಖುಷಿಯ ವಿಚಾರ,ಜೊತೆಗೆ ಸರ್ಕಾರಕ್ಕೆ, ಇಲಾಖೆಗೆ ಧನ್ಯವಾದ ಹೇಳಿ,ತಾವು ಸಹ ಸಾರ್ವಜನಿಕ ಗ್ರಂಥಾಲಯ ಓರ್ವ ಓದುಗ ಎಂಬುದನ್ನು ನೆನೆದರು.

ಕಾರ್ಯಕ್ರಮದಲ್ಲಿ ಪ್ರಾದೇಶಿಕ ಆಯುಕ್ತರ, ಕಾರ್ಯಾಲಯದ ಶಿರಸ್ತೇದಾರರಾದ ಸಂಜೀವ ಮುತ್ತೆಪ್ಪಗೋಳ, ಜಿಲ್ಲಾ ಆರೋಗ್ಯ ಅಧಿಕಾರಿಗಳ ಕಾರ್ಯಲಯದ ಗಣಪತಿ ಬಾರ್ಕಿ, ತಹಸೀಲ್ದಾರ ಕಾರ್ಯಾಲಯದ ಅಶೋಕ ಕಬ್ಬಲಿಗೇರ, ರಾಷ್ಟ್ರ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಸ್ ಎಸ್ ಪಾಟೀಲ ಅವರು ಮಾತನಾಡಿ ಶುಭ ಕೋರಿದರು.

ಸನ್ಮಾನ ಮಾಡಿದಕ್ಕೆ ಕೃತಜ್ಞತೆ ಸಲ್ಲಿಸಿದ ಪ್ರಕಾಶ ಇಂಚಲಕರಂಜಿ ಯವರು ತಮ್ಮ ಸೇವಾವಧಿಯಲ್ಲಿ ಸಹಾಯ ಸಹಕಾರ ನೀಡಿದವರನ್ನು ಸ್ಮರಿಸಿದರು 

ಕಾರ್ಯಕ್ರಮದಲ್ಲಿ ಉಪ ತಹಶೀಲ್ದಾರರಾದ ಚನ್ನಮ್ಮ ಶೀಗಿಹಳ್ಳಿ, ನಗರ ಶಿಕ್ಷಕರ ಸಂಘದ ಗೌರವಾಧ್ಯಕ್ಷರಾದ ಕುಮಾರಸ್ವಾಮಿ ಚರಂತಿಮಠ, ಮುಖ್ಯೋಪಾಧ್ಯಾಯ ರಾದ ಬಿ ಬಿ ಬಾಯಣ್ಣವರ, ಗ್ರಂಥಾಲಯ ಸಿಬ್ಬಂದಿಗಳಾದ ಎಚ್ ಅರ್ ಬೀಲಕೇರಿ,ಅಂಬೇಕರ ಸೇರಿದಂತೆ ಓದುಗರು ಇತರರು ಉಪಸ್ಥಿತರಿದ್ದರು.