spot_img
spot_img

ಕೌಜಲಗಿಯಲ್ಲಿ ಸಾರ್ವಜನಿಕರ ಕುಂದು-ಕೊರತೆಗಳನ್ನು ಆಲಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

- Advertisement -

ಗೋಕಾಕ: ಕೌಜಲಗಿಯ ಸರ್ವತೋಮುಖ ಅಭಿವೃದ್ಧಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸದ್ಬಳಕೆ ಮಾಡಲಾಗುವುದು. ಈ ಮೂಲಕ ಕೌಜಲಗಿ ಗ್ರಾಮಸ್ಥರ ಅಹವಾಲುಗಳಿಗೆ ಸ್ಪಂದಿಸುವ ಕೆಲಸ ಮಾಡಲಾಗುವುದು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ರವಿವಾರದಂದು ಕೌಜಲಗಿಯ ವಿಠ್ಠಲ-ಬೀರದೇವರ ದೇವಸ್ಥಾನದ ಆವರಣದಲ್ಲಿ ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಮಾತನಾಡಿದ ಅವರು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಈ ಭಾಗದಿಂದ ಅತ್ಯಧಿಕ ಮತಗಳ ಮುನ್ನಡೆ ನೀಡಿದ್ದಕ್ಕಾಗಿ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದರು.

ರಸ್ತೆಗಳ ಸುಧಾರಣೆ, ಒಳಚರಂಡಿ ನಿರ್ಮಾಣ, ಕುಡಿಯುವ ನೀರು, ಆಸ್ಪತ್ರೆ ಸೇರಿದಂತೆ ಜನರ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಚುನಾವಣೆಯಲ್ಲಿ ಜನತೆಗೆ ನೀಡಿರುವ ಆಶ್ವಾಸನೆಗಳನ್ನು ಮುಂದಿನ ದಿನಗಳಲ್ಲಿ ಈಡೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ಹೇಳಿದರು.

- Advertisement -

ಕೌಜಲಗಿ ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ರಚಿಸುವ ಕುರಿತಂತೆ ಈ ಭಾಗದ ಸಾರ್ವಜನಿಕರು ಪ್ರತಿ ಬಾರಿ ಒತ್ತಾಯಿಸುತ್ತಲೇ ಬರುತ್ತಿದ್ದಾರೆ. ಆಡಳಿತಾತ್ಮಕ ಹಿತದೃಷ್ಟಿಯಿಂದ ಗೋಕಾಕ ತಾಲೂಕಿನ ಕೌಜಲಗಿ ತಾಲೂಕು ಕೇಂದ್ರವಾಗುವುದು ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ನಾನು ಕೂಡ ನಿಮ್ಮ ಚಾಲನಾ ಸಮಿತಿ ಹೋರಾಟಗಾರರೊಂದಿಗೆ ಸದಾ ಇದ್ದುಕೊಂಡು ಹೋರಾಟಕ್ಕೆ ಬೆಂಬಲ ನೀಡುತ್ತೇನೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಮುಖಂಡರಾದ ಡಾ.ರಾಜೇಂದ್ರ ಸಣ್ಣಕ್ಕಿ, ಎ.ಕೆ. ನಾಯಿಕ, ಸಣ್ಣಪ್ಪ ಭೋವಿ, ರವಿ ಪರುಶೆಟ್ಟಿ, ಪರಮೇಶ್ವರ ಹೊಸಮನಿ, ಮಹಾಂತೇಶ ಶಿವನಮಾರಿ, ಗಂಗಾಧರ ಲೋಕನ್ನವರ, ಬಸವರಾಜ ಲೋಕನ್ನವರ, ಶಿವಾನಂದ ಲೋಕನ್ನವರ, ಮಹೇಶ ಪಟ್ಟಣಶೆಟ್ಟಿ, ನಾರಾಯಣ ಮುತಾಲಿಕದೇಸಾಯಿ, ಸುಭಾಸ ಕೌಜಲಗಿ, ಅಶೋಕ ಉದ್ದಪ್ಪನವರ, ಗ್ರಾಪಂ ಅಧ್ಯಕ್ಷ ಶಿವಾನಂದ ಭಜಂತ್ರಿ, ಮಹಾದೇವ ಬುದ್ನಿ, ಎಂ.ಡಿ. ಖಾಜಿ, ಎಸ್.ಬಿ. ಹಳ್ಳೂರ, ಹಾಸೀಮಸಾಬ ನಗಾರ್ಚಿ, ರಾಯಪ್ಪ ಬಳೋಲದಾರ, ನೀಲಪ್ಪ ಕೇವಟಿ, ಸಿದ್ದಪ್ಪ ಡೋಣಿ, ಬಸಪ್ಪ ದಳವಾಯಿ, ಶಂಕರ ಜೋತೆನ್ನವರ, ಶಾಂತಪ್ಪ ಹಿರೇಮೇತ್ರಿ, ಡಿ.ಜೆ. ಮುಲ್ತಾನಿ, ಅಲ್ಲಾಭಕ್ಷ ಹುನ್ನೂರ, ಜಾಕೀರ ಜಮಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ವಿವಿಧ ಗ್ರಾಮ ಪಂಚಾಯತಿಗಳ ನೂತನ ಅಧ್ಯಕ್ಷ-ಉಪಾಧ್ಯಕ್ಷರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಜಾತ್ರಾ ಕಮೀಟಿಗಳ ಪ್ರಮುಖರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಸತ್ಕರಿಸಿದರು.

- Advertisement -

ನಂತರ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಕೌಜಲಗಿ ಜಿಲ್ಲಾ ಪಂಚಾಯತ ಕ್ಷೇತ್ರದ ವಿವಿಧ ಗ್ರಾಮಗಳ ಸಾರ್ವಜನಿಕರ ಕುಂದುಕೊರತೆಗಳನ್ನು ಸ್ವೀಕರಿಸಿದರು.

- Advertisement -
- Advertisement -

Latest News

ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ಸಮಾನತೆ ದೊರಕಬೇಕು- ಸಿಡಿಪಿಓ ಶ್ವೇತಾ

ಮೈಸೂರು ನಗರ ವರ್ತಲ ರಸ್ತೆಯಲ್ಲಿರುವ ಮಾರ್ವೆಲ್ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group