ಗುರ್ಲಾಪೂರ: ಇತ್ತೀಚೆಗೆ ಗ್ರಾಮದ ಮಾಳತೋಟದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಅಡುಗೆ ಮನೆಯನ್ನು ಗೋಕಾಕದ ಲಕ್ಷ್ಮೀ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ಸರ್ವೋತ್ತಮ ಜಾರಕಿಹೊಳಿ ಉದ್ಘಾಟಿಸಿದರು.
ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಾ, ನಮ್ಮ ಶಾಸಕರು ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ತಯಾರಿಸುವಲ್ಲಿ ಯಾವುದೆ ಸಮಸ್ಯೆಯಾಗಬಾರದೆಂದು ಸುಮಾರು ರೂ. 6.25 ಲಕ್ಷ ಹಣವನ್ನು ಖರ್ಚು ಮಾಡಿದ್ದಾರೆ. ಸರಿಯಾಗಿ ಇದರ ಉಪಯೋಗ ಮಾಡಿಕೂಳ್ಳಬೇಕು ಎಂದರು.
ತಮ್ಮ ಶಾಲೆಯ ಅಬಿವೃದ್ದಿಯ ಏನೇ ಕಾರ್ಯಗಳಿದ್ದರು ಶಾಸಕರ ಗಮನಕ್ಕೆ ಆಡಳಿತಮಂಡಳಿ ತಂದು ಆ ಕೆಲಸವನ್ನು ಮಾಡಿಕೊಳ್ಳಬೇಕು ಎಂದರು.
ಸದರಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯಲ್ಲಪ್ಪ ಮುಕ್ಕುಂದ ವಹಿಸಿದ್ದರು ಸಾನ್ನಿಧ್ಯವನ್ನು ಶಿವಾನಂದ ಹಿರೇಮಠ ವಹಿಸಿದ್ದರು ಮತ್ತು ಖಾನಟ್ಟಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮಹಾದೇವಿ ತುಪ್ಪದ, ಚೇತನ ರಡ್ಡೆರಟ್ಟಿ, ಬಸಲಿಂಗವ್ವ ಮುಗಳಖೋಡ, ನಾಗಪ್ಪ ಹಳ್ಳೂರ,ಮಲ್ಲೇಶ ಮುಗಳಖೋಡ(ಪಾಲಬಾಂವಿ)ಈಶ್ವರ ಮುಗಳಖೋಡ, ಮಹಾಲಿಂಗ ಮುಗಳಖೋಡ, ಮುತ್ತಪ್ಪ ಡವಳೇಶ್ವರ, ಲಗಮಣ್ಣ ದಾನಪ್ಪಗೋಳ, ವಿಠ್ಠಲ ಬೋರನ್ನವರ ಹಾಗು ಖಾನಟ್ಟಿ ಗ್ರಾಮ ಪಂಚಾಯತ ಸದಸ್ಯರು ಮೂಡಲಗಿ ಪುರಸಭೆ ಸದಸ್ಯರು ಮತ್ತು ಶಿಕ್ಷಣ ಪ್ರೇಮಿಗಳು ಮತ್ತು ಬಿಸಿಯೂಟ ತಯಾರಿಸುವ ಅಮ್ಮಂದಿರು ಆಗಮಿಸಿದ್ದರು ಇದೇ ಸಂದರ್ಭದಲ್ಲಿ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು ಶಾಲೆಯ ಶಿಕ್ಷಕ ವೃಂದವು ಸರ್ವೋತ್ತಮ ಜಾರಕಿಹೊಳಿ ಹಾಗೂ ಪಿ ಡಿ ಒ, ಇಂಜನಿಯರರನ್ನು ಗೌರವಿಸಿ ಸನ್ಮಾನಿಸಿದರು.
ಆರಂಭದಲ್ಲಿ ಶಾಲೆಯ ಪ್ರಧಾನ ಗುರುಗಳಾದ ಎಸ್ ವ್ಹಿ ಸುಣಗಾರ ಸ್ವಾಗತಿಸಿದರು. ಶಿಕ್ಷಕರಾದ ಎಸ್ ಬಿ ಕಳ್ಳಿಗುಂದಿ ಕಾರ್ಯಕ್ರಮದ ನಿರೂಪಣೆ ಮಾಡಿದರೆ ವಂದನಾರ್ಪಣೆಯನ್ನು ಎಸ್ ಎಮ್ ಮಂಗಿ ನೆರವೇರಿಸಿದರು ಮಕ್ಕಳು ಹಾಗು ಶಿಕ್ಷಕವೃಂದವು ವಿವಿಧ ಕಾರ್ಯಕ್ರಮ ನಡೆಸಿದರು.