spot_img
spot_img

Bidar: ಮದ್ಯದಂಗಡಿ ಮೇಲೆ ಮಾಜಿ ಶಾಸಕರ ದಾಳಿ

Must Read

- Advertisement -

ನಿಗದಿತ ದರಕ್ಕಿಂತ ಹೆಚ್ಚಿನ ದರದಲ್ಲಿ ಮದ್ಯ ಮಾರಾಟ ಆರೋಪ ಮಾಡಿದ ಖೂಬಾ

ಬೀದರ: ನಿಗದಿತ ದರಕ್ಕಿಂತಲು ಹೆಚ್ಚಿನ ಬೆಲೆಗೆ ಮದ್ಯ ಮಾರಾಟ ಮಾಡುತಿದ್ದ ವೈನ್ ಶಾಪ್’ಗಳ ಮೇಲೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ದಿಢೀರನೆ ದಾಳಿ ನಡೆಸಿ ದೂರು ನೀಡಿದರು.

ಬಸವಕಲ್ಯಾಣದ ಮದ್ಯದ ಅಂಗಡಿ ಹಿಡಿದು ಓವರ್ ಲೊಡ್ ತುಂಬಿಕೊಂಡು ಬರುವ ಲಾರಿ ಮೇಲೆ ದಾಳಿ ಮಾಡಿ ತನ್ನ ಫೇಸ್ಬುಕ್ ಖಾತೆಯಿಂದ ಲೈವ್ ಕೊಡುತ್ತ ಬಂದ ಮಲ್ಲಿಕಾರ್ಜುನ ಖೂಬಾ ಅವರು, ಬಸವಕಲ್ಯಾಣ ನಲ್ಲಿ ಯಾವುದೇ ಅನೈತಿಕ ಚಟುವಟಿಕೆ ಕಡಿವಾಣ ಹಾಕುವುದು ಮತ್ತು ಮದ್ಯದ ಅಂಗಡಿಯವರು ದರಕಿಂತ್ತ ಹೆಚ್ಚು ಹಣವನ್ನು ಸುಲಿಗೆ ಮಾಡುತ್ತಾರೆ ಎಂದು ಜಿಲ್ಲಾ ವರಿಷ್ಠ ಪೊಲೀಸ್ ಅಧಿಕಾರಿ ಚನ್ನಬಸವ ಲಂಗೋಟಿ ಅವರಿಗೆ ದೂರು ನೀಡಿದರು.

- Advertisement -

ಮದ್ಯದಂಗಡಿಗಳಲ್ಲಿ ನಿಗದಿತ ದರಕ್ಕಿಂತಲು 20ರಿಂದ 50 ರೂಪಾಯಿಗಳ ವೆರೆಗೆ ಹೆಚ್ಚಿನ ಬೆಲೆಯಲ್ಲಿ ಮದ್ಯ ಮಾರಾಟ ಮಾಡುತ್ತಿರುವ ವೈನ್ ಶಾಪ್ ಅಂಗಡಿಗಳ ಮೇಲೆ ಕಠಿಣ ಕ್ರಮಕ್ಕೆ ಮಾಜಿ ಶಾಸಕ ಖೂಬಾ ಒತ್ತಾಯಿಸಿದರು.

ನಗರದಲ್ಲಿ ಇರುವ ಎಲ್ಲಾ ಮದ್ಯ ಅಂಗಡಿಗಳಲ್ಲಿ ಕಡ್ಡಾಯವಾಗಿ ಎಂಆರ್’ಪಿ ದರದಲ್ಲಿ ಮದ್ಯ ಮಾರಾಟ ಎಂದು ನಾಮಫಲಕ ಹಾಕಿಸಲು ಅಬಕಾರಿ ಇಲಾಖೆಗೆ ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ ಸೂಚನೆ ನೀಡಿದರು.

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಅಬಕಾರಿ ಸಿಪಿಐ ನಾನಾಗೌಡ್ ಕೇರೂರ ಹೆಚ್ಚುವರಿ ಹಣ ಪಡೆಯುವ ಮದ್ಯದ ಅಂಗಡಿಗಳ ಮೇಲೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

- Advertisement -

ವರದಿ: ನಂದಕುಮಾರ ಕರಂಜೆ, ಬೀದರ

- Advertisement -
- Advertisement -

Latest News

ದಿನಕ್ಕೊಬ್ಬ ಶರಣ ಮಾಲಿಕೆ

ಹೂಗಾರ ಮಾದಣ್ಣ ಕರ್ನಾಟಕದ ಇತಿಹಾಸದಲ್ಲಿ 12ನೇ ಶತಮಾನ ಒಂದು ಕ್ರಾಂತಿಯ ಕಾಲ. ಅಪ್ಪ ಬಸಣ್ಣನವರ ನೇತೃತ್ವದಲ್ಲಿ ಧಾರ್ಮಿಕ, ಸಾಮಾಜಿಕ, ಆರ್ಥಿಕ ರಂಗದಲ್ಲಿ ಪರಿವರ್ತನೆಯಾಯಿತು. ವ್ಯಕ್ತಿ ಹಾಗೂ ಸಮಾಜದ...
- Advertisement -

More Articles Like This

- Advertisement -
close
error: Content is protected !!
Join WhatsApp Group