spot_img
spot_img

ಮೂಡಲಗಿ ತಾಲೂಕಾ ಶಿಕ್ಷಕರ ದಿನಾಚರಣೆ ಸೆ. ೫ ರಂದು

Must Read

- Advertisement -

ಮೂಡಲಗಿ: ಜಿ.ಪಂ, ಶಾಲಾ ಶಿಕ್ಷಣ ಇಲಾಖೆ, ಮೂಡಲಗಿ ಶೈಕ್ಷಣಿಕ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಸೆ. ೫ ರಂದು ಮಂಗಳವಾರ ಮುಂಜಾನೆ ೧೧ ಗಂಟೆಗೆ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ತಾಲೂಕಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ-೨೦೨೩ ನಿಮಿತ್ತ ನಿವೃತ್ತ ಶಿಕ್ಷಕರ ಸನ್ಮಾನ ಹಾಗೂ ಸಾಧಕ ಶಿಕ್ಷಕರಿಗೆ ಅಭಿನಂದನಾ ಸಮಾರಂಭವು ಅರಭಾವಿ (ಗೋಕಾಕ) ಯ ಶ್ರೀ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಲಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಸುಣಧೋಳಿಯ ಶ್ರೀ ಮ.ನಿ.ಪ್ರ.ಅ ಶಿವಾನಂದ ಮಹಾಸ್ವಾಮಿಗಳು ಮಹಾಸ್ವಾಮಿಗಳು ಹುಣಶ್ಯಾಳ ಪಿಜಿಯ ಪ.ಪೂ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಶ್ರೀ ಪ.ಪೂ ಶ್ರೀ ನಿಜಗುಣದೇವರ ವಹಿಸುವರು.     

ಉದ್ಘಾಟಕರಾಗಿ ಲೋಕೋಪಯೋಗಿ ಸಚಿವರು ಬೆಳಗಾವಿ ಜಿಲ್ಲೆಯ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿ, ಅಧ್ಯಕ್ಷತೆಯನ್ನು ಅರಭಾಂವಿ ಶಾಸಕರು, ಬೆಂಗಳೂರ ಕೆ.ಎಂ.ಎಫ್ ನಿರ್ದೇಶಕರಾದ ಬಾಲಚಂದ್ರ ಜಾರಕಿಹೊಳಿ, ಮುಖ್ಯ ಅತಿಥಿಗಳಾಗಿ ಗೋಕಾಕ ಶಾಸಕರಾದ ರಮೇಶ ಜಾರಕಿಹೊಳಿ, ಸಂಸದೆ ಮಂಗಳಾ ಅಂಗಡಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ವಿಧಾನ ಪರಿಷತ್ ಸದಸ್ಯರಾದ ಪ್ರಕಾಶ ಹುಕ್ಕೇರಿ, ಲಖನ್ ಜಾರಕಿಹೊಳಿ, ಚನ್ನರಾಜ ಹಟ್ಟಿಹೊಳಿ, ಹಣಮಂತ ನಿರಾಣಿ, ವಡೇರಹಟ್ಟಿ ಗ್ರಾಪಂ ಅಧ್ಯಕ್ಷೆ ಅಕ್ಕವ್ವ ಮಳಿವಡೇರ, ಉಪಾಧ್ಯಕ್ಷೆ ಲಕ್ಕವ್ವ ಸಾರಾಪೂರ, ಗೌರವ ಉಪಸ್ಥಿತರಾಗಿ  ಡಿ.ಡಿ.ಪಿ.ಐ ಮೋಹನಕುಮಾರ ಹಂಚಾಟೆ, ಚಿಕ್ಕೋಡಿ ಡೈಟ್ ಪ್ರಾಚಾರ್ಯ ಮೋಹನಕುಮಾರ ಜೀರಗಿಹಾಳ, ಮೂಡಲಗಿ ತಹಶೀಲ್ದಾರ ಶಿವಾನಂದ ಬಬಲಿ, ಗೋಕಾಕ ತಹಶೀಲ್ದಾರ ಮಂಜುನಾಥ ಕೆ,  ಮೂಡಲಗಿ ತಾಪಂ ಇಒ ಎಫ್.ಜಿ ಚಿನ್ನಣ್ಣವರ, ಗೋಕಾಕ ತಾಪಂ ಇಒ ಎಮ್.ಎಚ್ ದೇಶಪಾಂಡೆ, ಅರಭಾವಿ ಸಿಡಿಪಿಓ ವಾಯ್.ಕೆ ಗದಾಡಿ, ಗೋಕಾಕ ಟಿ.ಎಚ್.ಓ ಡಾ. ಮುತ್ತಣ್ಣ ಕೊಪ್ಪದ, ಸಿಪಿಐ ಶ್ರೀಶೈಲ್ ಬ್ಯಾಕೂಡ, ಪಿಎಸ್‌ಐ ಎಚ್.ವಾಯ್ ಬಾಲದಂಡಿ ಮ.ಉ.ಯೋ ಸಹಾಯಕ ನಿರ್ದೇಶಕ ಎ.ಬಿ ಮಲಬನ್ನವರ ಹಾಗೂ ಪುರಸಭೆ, ಪ.ಪಂ ಹಾಗೂ ಗ್ರಾ.ಪಂ ಸದಸ್ಯರು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿರುವರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
- Advertisement -

Latest News

ವಚನ ವಿಶ್ಲೇಷಣೆ : ಕಾಯದ ಜೀವದ ಹೊಲಿಗೆ

*ಕಾಯದ ಜೀವದ ಹೊಲಿಗೆ* ----------------------------------- ದೇಹಭಾವವಳಿದಲ್ಲದೆ ಜೀವಭಾವವಳಿಯದು. ಜೀವಭಾವವಳಿದಲ್ಲದೆ ಭಕ್ತಿಭಾವವಳವಡದು. ಭಕ್ತಿಭಾವವಳವಟ್ಟಲ್ಲದೆ ಅರಿವು ತಲೆದೋರದು. ಅರಿವು ತಲೆದೋರಿದಲ್ಲದೆ ಕುರುಹು ನಷ್ಟವಾಗದು. ಕುರುಹು ನಷ್ಟವಾದಲ್ಲದೆ ಮಾಯೆ ಹಿಂಗದು. ಇದು ಕಾರಣ; ಕಾಯದ ಜೀವದ ಹೊಲಿಗೆಯ ಅಳಿವ ಭೇದವ ತಿಳಿಯಬಲ್ಲಡೆ ಗುಹೇಶ್ವರಲಿಂಗದ...
- Advertisement -

More Articles Like This

- Advertisement -
close
error: Content is protected !!
Join WhatsApp Group