ಮಕ್ಕಳ ಪ್ರತಿಭೆಯನ್ನು ಶಿಕ್ಷಕರು ಅನಾವರಣಗೊಳಿಸಬೇಕು

Must Read

ಸಿಂದಗಿ-ಮಕ್ಕಳಲ್ಲಿರುವ ಸುಪ್ತ ಶಕ್ತಿಯನ್ನು ಹೊರಸೂಸುವ ಸಾಮರ್ಥ್ಯ ಶಿಕ್ಷಕರಲ್ಲಿದೆ ಅದನ್ನು ಸೃಜನಶೀಲತೆಯಿಂದ ಹೊರ ಹಾಕಿ ಅವರ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹ.ಮ.ಪೂಜಾರ ಹೇಳಿದರು.

ಪಟ್ಟಣದ ಶ್ರೀ ಪದ್ಮರಾಜ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ ಶಿಕ್ಷಕರ ದಿನಾಚಾರಣೆಯಲ್ಲಿ ಭಾಗವಹಿಸಿ ಮಾತನಾಡಿ, ಶಿಕ್ಷಕರ ಬೋಧನೆ ಪರಿಣಾಮಕಾರಿಯಾಗಲು ನಿರಂತರ ಅಧ್ಯಯನ, ಪ್ರಸ್ತುತ ಜ್ಞಾನ, ಅನುಭವ ಮತ್ತು ಬೋಧನೆಯ ಮಾರ್ಗಗಳು ಹೆಚ್ಚು ಅವಶ್ಯವಾಗಿವೆ. ಇಂದಿನ ವೈಜ್ಞಾನಿಕ ಜಗತ್ತಿಗೆ ನಮ್ಮ ಮಕ್ಕಳು ಹೊಂದಿಕೊಳ್ಳಲು ಪ್ರತಿ ಬೋಧನೆಗೆ ವಿಜ್ಞಾನದ ಸಹಕಾರ ಅಗತ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿ ವಿಶಾಲಾಕ್ಷೀ ಬಜಂತ್ರಿ, ಮಹಾವೀರ ಕಕ್ಕಳಮೇಲಿ ಮಾತನಾಡಿದರು. ಈ ವೇಳೆ ಶಿಕ್ಷಕರ ದಿನಾಚಾರಣೆಯ ಪ್ರಯುಕ್ತ ಏರ್ಪಡಿಸಿದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದ ಉಪನ್ಯಾಸಕರಿಗೆ ಬಹುಮಾನ ವಿತರಿಸಲಾಯಿತು.

ಅಧ್ಯಕ್ಷತೆ ವಹಿಸಿದ ಪಾಚಾರ್ಯ ಜೆ.ಸಿ.ನಂದಿಕೋಲ ಮಾತನಾಡಿ, ಶಿಕ್ಷಕರ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಸಮಾಜ ಶಿಕ್ಷಕರಿಗೆ ಅತ್ಯಂತ ಹಿರಿಯ ಸ್ಥಾನಮಾನಗಳನ್ನು ನೀಡಿದೆ ಅದನ್ನು ಉಳಿಸಿಕೊಂಡು ಹೋಗುವ ಜವಾಬ್ದಾರಿಯಾಗಬೇಕು. ಜಗತ್ತು ಶಿಕ್ಷಣದ ಮೇಲೆ ನಿಂತಿದೆ. ಸೂಕ್ತ ಶಿಕ್ಷಣ ಸೂಕ್ತ ಶಿಕ್ಷಕ ಜಗತ್ತನ್ನು ವ್ಯವಸ್ಥಿತವಾದ ರೀತಿಯಲ್ಲಿ ಬದಲಾಯಿಸಬಲ್ಲದು ಎಂದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಡಾ.ಶರಣಬಸವ ಜೋಗೂರ, ದಾನಯ್ಯ ಮಠಪತಿ. ಸುಧಾಕರ ಚವ್ಹಾಣ, ಪಿ.ಸಿ.ಕುಲಕರ್ಣಿ, ಸಿದ್ದಲಿಂಗ ಕಿಣಗಿ, ಆರ್.ಎ.ಹಾಲಕೇರಿ, ಸಿ.ಜಿ.ಕತ್ತಿ, ವಿದ್ಯಾ ಮೋಗಲಿ, ಎಸ್.ಕೆ.ಕತ್ತಿ ಸೇರಿದಂತೆ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು.

Latest News

ಕಲಬುರಗಿ ವಿಮಾನ ನಿಲ್ದಾಣ ಸ್ತಬ್ಧ: ರಾಜ್ಯ ಸರಕಾರದ ಮೌನದಿಂದ ಅಭಿವೃದ್ಧಿಗೆ ಹಿನ್ನಡೆ

371 ಜೆ ವ್ಯಾಪ್ತಿಯ ವಿಮಾನ ನಿಲ್ದಾಣಕ್ಕೆ ಗ್ರಹಣ: ಜನಪ್ರತಿನಿಧಿಗಳ ಮೌನಕ್ಕೆ ಆಕ್ಷೇಪಇತ್ತೀಚೆಗಷ್ಟೇ ಕಲಬುರಗಿಯಲ್ಲಿ ವಿಶೇಷ ಸಚಿವ ಸಂಪುಟ ಸಭೆ ನಡೆಸಿ ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ಸಂಕಲ್ಪ...

More Articles Like This

error: Content is protected !!
Join WhatsApp Group