ಕ್ರಿಯೇಟಿವ್ ಕಿಡ್ಸ್ ಹೋಮ್ ನಲ್ಲಿ ಕೃಷ್ಣ ಜನ್ಮಾಷ್ಟಮಿ

Must Read

ಸಿಂದಗಿ: ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್‍ನಲ್ಲಿ ಬುಧವಾರ ಶ್ರೀ ಕೃಷ್ಣ ಜನ್ಮಾಷ್ಠಮಿಯನ್ನು ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

ಚಿಣ್ಣರು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಂಭ್ರಮಿಸಿದರು. ಶ್ರೀ ಕೃಷ್ಣ ವೇಷಧಾರಿ ಮಕ್ಕಳು ಮೊಸರು ಮಡಿಕೆ ಒಡೆದು ಸಂಭ್ರಮಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ನಾಗರತ್ನಾ ಅಶೋಕ ಮನಗೂಳಿ ಮಾತನಾಡಿ, ಚಿಣ್ಣರು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಂಭ್ರಮಿಸಿದ್ದು ನನಗೆ ಸಂತಸ ತಂದಿದೆ. ನಮಗೆ ಬಾಲ್ಯದಲ್ಲಿ ಇಂಥ ಅವಕಾಶಗಳು ಸಿಕ್ಕಿರಲಿಲ್ಲ. ಪಟ್ಟಣದ ಕ್ರಿಯೇಟಿವ್ ಕಿಡ್ಸ್ ಹೋಮ್‍ನಲ್ಲಿ ಚಿಣ್ಣರು ಕೃಷ್ಣ ಮತ್ತು ರಾಧೆಯ ವೇಷ ಧರಿಸಿ ಸಂಭ್ರಮಿಸಲು ಸೂಕ್ತ ವೇದಿಕೆ ನೀಡಿದ್ದಾರೆ ಎಂದು ಹೇಳಿದರು. 

90 ಕ್ಕೂ ಹೆಚ್ಚು ಮಕ್ಕಳು ಶ್ರೀ ಕಷ್ಣ ಹಾಗೂ ರಾಧೆಯರ ವೇಷ ಧರಿಸಿ, ಸಂಭ್ರಮಿಸಿದರು. ಮಕ್ಕಳ ಕಲ್ಯಾಣ ಪ್ರತಿಷ್ಠಾನದ ಅಧ್ಯಕ್ಷ ರಮೇಶ ಪೂಜಾರ, ಕಾರ್ಯದರ್ಶಿ ಮತ್ತು ಮುಖ್ಯಗುರುಮಾತೆ ಡಾ.ಜ್ಯೋತಿ ಪೂಜಾರ, ಲಕ್ಷ್ಮಿಬಾಯಿ ಪೂಜಾರ, ರುಕ್ಮಿಣಿ ಪೂಜಾರಿ, ಶಿಕ್ಷಕಿಯರಾದ ಅಶ್ವಿನಿ ಲೋಣಿ, ಮಂಗಲಾ ಬಮ್ಮಣ್ಣಿ, ಶಾಂತಾ ಮೊಸಲಗಿ, ಸಾಧನಾ ಈಮಡೆ, ಗೌರಿ ಪಾಟೀಲ, ಅಂಬಿಕಾ ಹೂಗಾರ ಹಾಗೂ ಸಿಬ್ಬಂಧಿಗಳು, ಪಾಲಕರು ಹಾಜರಿದ್ದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group