spot_img
spot_img

ಅಂಗವಿಕಲರು ಯೋಜನೆಗಳ ಸದ್ಬಳಕೆ ಮಾಡಿಕೊಳ್ಳಬೇಕು: ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

spot_img
- Advertisement -

ಗೋಕಾಕ: ಅಂಗವಿಕಲರು ಮುಖ್ಯ ವಾಹಿನಿಗೆ ಬರಲು ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಿ. ಅಂಗವಿಕಲರ ಕೆಲಸ ಕಾರ್ಯಗಳಿಗಾಗಿ ಅನುಕೂಲವಾಗಲು ಟ್ರೈಸಿಕಲ್ ವಿತರಿಸಲಾಗಿದೆ ಎಂದು ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಇಲ್ಲಿಯ ಎನ್‍ಎಸ್‍ಎಫ್ ಆವರಣದಲ್ಲಿ 2022-23ನೇ ಸಾಲಿನಲ್ಲಿ ಅಂಗವಿಕಲ ಮತ್ತು ಹಿರಿಯ ನಾಗರೀಕರ ಕಲ್ಯಾಣ ಇಲಾಖೆಯಿಂದ ಹೆಚ್ಚುವರಿ ಯಂತ್ರಚಾಲಿತ ದ್ವಿಚಕ್ರ ವಾಹನಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದರು.

ಇನ್ನೂ ಅರಭಾವಿ ಕ್ಷೇತ್ರದ ಅಂಗವಿಕಲ ಫಲಾನುಭವಿಗಳಿಗೆ ಯಂತ್ರ ಚಾಲಿತ ದ್ವಿಚಕ್ರ ವಾಹನಗಳನ್ನು ನೀಡುವುದು ಬಾಕಿ ಇವೆ. ಹೆಚ್ಚುವರಿ ಯಾದಿ ಆಧಾರದ ಮೇಲೆ ತುರ್ತಾಗಿ ನಾಲ್ವರು ಫಲಾನುಭವಿಗಳನ್ನು ಆಯ್ಕೆ ಮಾಡಿ ಅವರಿಗೆ ದ್ವಿಚಕ್ರ ವಾಹನಗಳನ್ನು ವಿತರಿಸಲಾಗುತ್ತಿದೆ. ಬಾಕಿ ಉಳಿದಿರುವ ಫಲಾನುಭವಿಗಳಿಗೆ ದ್ವಿಚಕ್ರ ವಾಹನಗಳನ್ನು ಹಂತ ಹಂತವಾಗಿ ನೀಡುವ ವ್ಯವಸ್ಥೆ ಮಾಡಿಕೊಡುವುದಾಗಿ  ಅವರು ಹೇಳಿದರು.

- Advertisement -

ಅಂಗವಿಕಲರು ಸಾಮಾನ್ಯರಂತೆ ಜೀವನ ನಡೆಸಲು ಕಷ್ಟಕರವಾಗುತ್ತಿದೆಯಾದರೂ ಅವರಿಗೆ ಸ್ವಲ್ಪ ಅನುಕೂಲವಾಗಲು ತಮ್ಮ ಕೆಲಸಗಳನ್ನು ನಿರ್ವಹಿಸಲು ಇಂತಹ ದ್ವಿಚಕ್ರ ವಾಹನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಂಗವಿಕಲರ ಕಲ್ಯಾಣಕ್ಕಾಗಿ ನಾವು ಸದಾ ಬದ್ಧರಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಮಲ್ಲು ಪಾಟೀಲ, ಜಿಪಂ ಮಾಜಿ ಸದಸ್ಯ ಡಾ.ರಾಜೇಂದ್ರ ಸಣ್ಣಕ್ಕಿ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ, ಮುತ್ತೆಪ್ಪ ಖಾನಪ್ಪಗೋಳ, ಸುಭಾಸ ಪಡದಲ್ಲಿ, ಶಿವಾನಂದ ಕಮತಿ, ಸಂಗಪ್ಪ ಸೂರಣ್ಣವರ, ಭೀಮಶಿ ಅಂತರಗಟ್ಟಿ, ರಾಜು ಬಳಿಗಾರ, ರಾಮನಾಯ್ಕ ನಾಯ್ಕ, ಶಬ್ಬೀರ ತಾಂಬಿಟಗಾರ, ಬಾಳಪ್ಪ ಕಪರಟ್ಟಿ, ವಾಶಪ್ಪ ಪಂಡ್ರೊಳ್ಳಿ, ಪಿ.ಎಲ್. ಬಬಲಿ, ಕಲ್ಲಪ್ಪ ಕುದರಿ, ಬೈರು ಯಕ್ಕುಂಡಿ, ಬಸವರಾಜ ಪಂಡ್ರೊಳ್ಳಿ, ಸುನೀಲ ಭೋವಿ, ಬಸು ಕಾಡಾಪೂರ, ತಾಲೂಕಾ ವಿವಿದೋದ್ಧೇಶ ಪುನರ್‍ವಸತಿ ಕಾರ್ಯಕರ್ತ ಶಮ್ಮು ಖೈರದಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಶಿವಾಪೂರ(ಹ) ಗ್ರಾಮದ ಮಹೇಶ ಮಹಾದೇವ ಮುಧೋಳ, ಹುಣಶ್ಯಾಳ ಪಿಜಿ ಗ್ರಾಮದ ಭೀಮವ್ವಾ ಲಗಮಣ್ಣ ಸುಂಕದ, ರಾಜಾಪೂರ ಗ್ರಾಮದ ಗೌರವ್ವ ವಾಶಪ್ಪ ಪಂಡ್ರೊಳ್ಳಿ, ಕೌಜಲಗಿ ಗ್ರಾಮದ ಸದಾಶಿವ ವೆಂಕಪ್ಪ ಭೋವಿ ಅವರಿಗೆ ತ್ರಿಚಕ್ರ ವಾಹನಗಳನ್ನು ವಿತರಿಸಿದರು.

- Advertisement -
- Advertisement -

Latest News

ಸಾಮಾಜಿಕ ಕ್ರಾಂತಿಗೆ ಸಿದ್ಧರಾಮೇಶ್ವರ ಕೊಡುಗೆ ಮಹತ್ತರವಾದುದು – ಸಿದ್ಧಲಿಂಗ ಕಿಣಗಿ

ಸಿಂದಗಿ; ೧೨ ನೇ ಶತಮಾನದಲ್ಲಿನ ಸಾಮಾಜಿಕ ಕ್ರಾಂತಿಗೆ ಶಿವಯೋಗಿ ಸಿದ್ದರಾಮೇಶ್ವರರ ಕೊಡುಗೆ ಗಮನಾರ್ಹವಾದುದು, ಅವರು ಅಸಮಾನತೆ, ವರ್ಣ, ಜಾತಿ, ಲಿಂಗಭೇದವನ್ನು ತೊಡೆದು ಹಾಕುವ ಕೆಲಸವನ್ನು ವಚನಗಳ...
- Advertisement -

More Articles Like This

- Advertisement -
close
error: Content is protected !!
Join WhatsApp Group