spot_img
spot_img

ವೇದಾಂತ ಫೌಂಡೇಶನ್ ವತಿಯಿಂದ ಶೈಕ್ಷಣಿಕ ಸಾಮಗ್ರಿಗಳ ವಿತರಣೆ

Must Read

- Advertisement -

ಹೊನಗಾ(ಬೆಳಗಾವಿ) – ಅಲ್ಪ ಅವಧಿಯಲ್ಲಿಯೇ ಜನಪ್ರಿಯವಾಗಿರುವ ಸರಕಾರಿ ಶಾಲೆಯ ಶಿಕ್ಷಕರು ಸೇರಿ ಸ್ಥಾಪಿಸಿರುವ ವೇದಾಂತ ಫೌಂಡೇಶನ್ ನ ಸಮಾಜಸೇವೆಯ ಕಾರ್ಯಕ್ರಮಗಳು ನಿಜವಾಗಿಯೂ ಆದರ್ಶಪ್ರಾಯವಾಗಿವೆ. ಪ್ರತೀ ಬಾರಿಯೂ ಹೊಸಕಾರ್ಯಕ್ರಮಗಳನ್ನು ಹಮ್ಮಿಕೊಂಡು ತಮ್ಮ ಸಮಯ ಮತ್ತು ಧನವನ್ನು ಸಮಾಜಕ್ಕಾಗಿ ವ್ಯಯಿಸುವ   ಫೌಂಡೇಶನ್ ನ ಕಾರ್ಯಗಳು ಶ್ಲಾಘನೀಯ ಎಂದು ಕಾಂಟೋನ್ಮೆಂಟ್ ಬೋರ್ಡ್ ಶಾಲೆಯ ಮುಖ್ಯೋಪಾಧ್ಯಾಯರಾದ  ಪರಶರಾಮ ಬಿರ್ಜೆ ಯವರು ಹೇಳಿದರು.

ಹೊನಗಾ ದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವೇದಾಂತ ಫೌಂಡೇಶನ್ ವತಿಯಿಂದ 1 ಮತ್ತು 7 ನೇ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳ ವಿತರಣೆ ಮಾಡಲಾಯಿತು.

1ನೇ ವರ್ಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡುವ ಸಲುವಾಗಿ ಶಾಲಾ ಬ್ಯಾಗ್, ಊಟದ ಡಬ್ಬಿ, ಪೆನ್, ಪೆನ್ಸಿಲ್ ಹಾಗೂ 7ನೇ ವರ್ಗದ ವಿದ್ಯಾರ್ಥಿಗಳಿಗೆ  ಪ್ರೋತ್ಸಾಹಿಸಲು ನೋಟ್ ಪುಸ್ತಕ, ಪೆನ್ ಮುಂತಾದ 20 ಸಾವಿರ ರೂಪಾಯಿಗಳ ಸಾಮಗ್ರಿಗಳನ್ನು ವಿತರಿಸಲಾಯಿತು.

- Advertisement -

ಈ ಸಂದರ್ಭದಲ್ಲಿ ಕಾರ್ಯದರ್ಶಿಯಾದ  ಈಶ್ವರ ಪಾಟೀಲ್ ಮಾತನಾಡುತ್ತ, ಪ್ರತಿಯೊಬ್ಬರು ತಮ್ಮ ಸಂಪಾದನೆಯ ಕೇವಲ 5 ಶೇಕಡ ದಷ್ಟು ಹಣವನ್ನು ಅನಾಥರಿಗಾಗಿ ಖರ್ಚು ಮಾಡಿದರೆ ಸಮಾಜದ ದುರ್ಬಲ ವರ್ಗದ ಜನರು ಖಂಡಿತ ಮುಂದೆ ಬರುತ್ತಾರೆ ಎಂಬುದನ್ನು ಮನಗಂಡು ವೇದಾಂತ ಫೌಂಡೇಶನ್ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ಹೇಳಿದರು.

ಕಾರ್ಯಕ್ರಮವು ಶಾಲೆಯ ಸಭಾಗೃಹದಲ್ಲಿ ನೆರವೇರಿತು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ಎಸ್.ಡಿ.ಎಂ.ಸಿ.ಉಪಾಧ್ಯಕ್ಷರಾದ ಮಾಯ ಪಾಲಕರ ವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ವೇದಾಂತ ಫೌಂಡೇಶನ್ ಅಧ್ಯಕ್ಷರಾದ  ಸತೀಶ್ ಪಾಟೀಲ, ಉಪಾಧ್ಯಕ್ಷ ಸುನಿಲ ದೇಸುರಕರ್, ಲಕ್ಷ್ಮಣ್ ರಾವ್ ನಿಕಮ್, ಸುಜಾತಾ ಲೋಖಂಡೇ, ಅನುರಾಧ ತಾರೀಹಾಳಕರ್,ಆಸ್ಮಾ ನಾಯಿಕ್, ಸವಿತಾ ಚಂದಗಡಕರ್, ಶೋಭಾ ಪಾಟೀಲ್ ಹಾಗೂ ಸಿ. ಆರ್.ಪಿ. ಎಸ್.ಆರ್.ಕುಲಕರ್ಣಿ ಉಪಸ್ಥಿತರಿದ್ದರು.

- Advertisement -

ವಿದ್ಯಾರ್ಥಿನಿಯರು ಈಶಸ್ತವನ ಹಾಗೂ ಸ್ವಾಗತ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಶುಭಾರಂಭ ಮಾಡಿದರು. ಗಣ್ಯರಿಂದ ದೀಪಪ್ರಜ್ವಲನೆಯಾದ ನಂತರ ಶಾಲೆಯ ಮುಖ್ಯಾಧ್ಯಾಪಕಿಯಾದ ಮಧುಬಾಲಾ ದೇಸಾಯಿ ಯವರು ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು.ಅನುರಾಧ ತಾರಿಹಾಳ ಕರ್ ವೇದಾಂತ ಫೌಂಡೇಶನ್ ನ ಕಾರ್ಯಚಟುವಟಿಕೆಯ ಬಗ್ಗೆ ಮಾಹಿತಿ ನೀಡಿದರು.

ಈ ಕಾರ್ಯಕ್ರಮ ಯಶಸ್ವಿಯಾಗಲು ಲಕ್ಹ್ಮಣರಾವ್ ನಿಕಮ್, ಬೆಳಗಾವಿ ಗ್ರಾಮೀಣ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ವ್ಯವಸ್ಥಾಪಕರಾದ ಉಮೇಶ ಬಾಳೆಕುಂದ್ರಿ, ರಘು ನಾಥ ಉತ್ತುರಕರ, ಪರಶರಾಮ ಬಿರ್ಜೆ, ವಿದ್ಯಾಧರ ಯಾದವ್, ಅನುರಾಧಾ ತಾರಿಹಾಳ ಕರ್, ಶೋಭಾ ಪಾಟೀಲ್ ಮುಂತಾದವರು ಆರ್ಥಿಕ ಸಹಾಯ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹೊನಗಾ ದ ನಿವಾಸಿಯಾದ ಈಗ ದುಬೈಯಲ್ಲಿ ಇಂಜಿನಿಯರ್ ಆಗಿರುವ ರಮೇಶ್ ಆನಂದಾಚೆ ಇವರಿಗೆ ಶಾಲು, ಶ್ರೀಫಲ ಹಾಗೂ ಪುಷ್ಪಹಾರ ನೀಡಿ ಸತ್ಕಾರ ಮಾಡಲಾಯಿತು. ರಮೇಶ್ ಆನಂದಾಚೆಯವರು ವೇದಾಂತ ಫೌಂಡೇಶನ್ ಕಾರ್ಯ ಚಟುವಟಿಕೆಯ ಬಗ್ಗೆ ತಿಳಿದು ಮುಂದಿನ ಸಮಾಜ ಸೇವಾ ಕಾರ್ಯಕ್ಕೆ ಪ್ರಾಯೋಜಕತ್ವ ವಹಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದ ನಿರ್ವಹಣೆ ಯನ್ನು ಸೀಮಾ ಕಣಬರಕರ ಹಾಗೂ ಸ್ವಾಗತವನ್ನು ಶ್ರೀಮತಿಬಿ.ಆರ್.ಪಾಟೀಲ್ ಮತ್ತು ಶ್ರೀಮತಿ ಕೆ.ವಿ.ಯಾದವ್ ಇವರು ಧನ್ಯವಾದ ವ್ಯಕ್ತಪಡಿಸಿದರು. ಕ್ರೀಡಾ ಶಿಕ್ಷಕರಾದ ಸಿ.ಎಂ.ಪಾಟೀಲ್, ಪೂಜಾ ಕಾಂಬಳೆ, ಎಸ್.ಡಿ.ಎಂ.ಸಿ.ಸದಸ್ಯರು , ಗ್ರಾಮಸ್ಥರು ಉಪಸ್ಥಿತರಿದ್ದರು.

- Advertisement -
- Advertisement -

Latest News

ಬೆಳಗಾವಿ – ಮನಗೂರು ವಿಶೇಷ ರೈಲು ಅ.16 ರಿಂದ

ಬೆಳಗಾವಿ: ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಯಂತೆ ಬೆಳಗಾವಿ- ಮನಗೂರು ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರವು ಅ-16 ರಿಂದ ಪ್ರಾರಂಭವಾಗಲಿದೆ ಎಂದು ಹುಬ್ಬಳ್ಳಿ ನೈರುತ್ಯ ರೈಲ್ವೆ ಇಲಾಖೆ...
- Advertisement -

More Articles Like This

- Advertisement -
close
error: Content is protected !!
Join WhatsApp Group