ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ ಮಹತ್ವದ್ದು – ಡಾ. ನಯನಾ ಭಸ್ಮೇ

0
513

ಮುನವಳ್ಳಿ: ಮನುಷ್ಯನು ತನ್ನ ಜೀವನದಲ್ಲಿ ವಯಸ್ಸು, ಆರೋಗ್ಯ,ಗುಣ ಸಂಪತ್ತುಗಳ ಮೂಲಕ ಜೀವನಾನುಭವ ಹೊಂದುತ್ತಾನೆ. ಇವುಗಳ ನಡುವೆ ಧರ್ಮದ ತಳಹದಿಯಲ್ಲಿ ಪ್ರಾಮಾಣಿಕವಾಗಿ ಬದುಕಬೇಕು.ಅಂದಾಗ ಜೀವನ ಸಾರ್ಥಕತೆ ಪಡೆಯುತ್ತದೆ ಎಂದು ಸವದತ್ತಿ ಯ ಡಾ. ನಯನಾ ಭಸ್ಮೇ ತಿಳಿಸಿದರು.

ಅವರು ಮುನವಳ್ಳಿ ಸಮೀಪದ ಸಿಂದೋಗಿಯ ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮದಲ್ಲಿ ಜರುಗಿದ ಸಹಸ್ರ ಬಿಲ್ವಾರ್ಚನೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ, ಬಿಲ್ವಾರ್ಚನೆ ಮಾಡಿ  ಪ್ರಸ್ತುತ ಸಮಾಜದಲ್ಲಿ ವಾನಪ್ರಸ್ಥ ಆಶ್ರಮ ಮತ್ತು ಪಾಶ್ಚಾತ್ಯೀಕರಣದ ಪ್ರಭಾವ ಧರ್ಮದ ಉಳಿವಿಗಾಗಿ ನಮ್ಮ ಜವಾಬ್ದಾರಿಗಳ ಕುರಿತು 

ಈ ಸಂದರ್ಭದಲ್ಲಿ ವೈವಾಹಿಕ ಜೀವನದಲ್ಲಿ 25 ವಸಂತಗಳನ್ನು ಪೂರೈಸಿದ ದಂಪತಿಗಳು ಲಿಂಗಪೂಜಾ ಕಾರ್ಯದಲ್ಲಿ ತೊಡಗಿದರು.     

ಹಿರಿಯ ಸತ್ಸಂಗಿಗಳಾದ ಯಶವಂತ ಗೌಡರ ಅವರು ನಾಲ್ಕು ಪುರುಷಾರ್ಥ ಗಳ ಕುರಿತು ಉದಾಹರಣೆ ಸಹಿತ ಮಾಹಿತಿ ನೀಡಿದರು. ಶ್ರೀ ನಿತ್ಯಾನಂದ ಸತ್ಸಂಗ ಆಶ್ರಮ ಸ್ವಾಮೀಜಿಗಳಾದ ಪರಮಪೂಜ್ಯ  ಶ್ರೀ ಮುಕ್ತಾನಂದ ಸ್ವಾಮೀಜಿ ಯವರು, ಆಶೀರ್ವಚನ ನೀಡಿ “ಗುರುಕುಲ ಪದ್ಧತಿ ಶಿಕ್ಷಣ ಹಾಗೂ ಆಧುನಿಕ ಶಿಕ್ಷಣ ಕುರಿತು ತಿಳಿಸಿ ಬದುಕಿನಲ್ಲಿ ಮೌಲ್ಯಗಳು ಅವಶ್ಯಕ.ನಮ್ಮ ಭಾರತೀಯ ಸಂಸ್ಕೃತಿ ಮೌಲ್ಯಗಳ ಪ್ರತೀಕ. 25 ವರ್ಷಗಳ ವೈವಾಹಿಕ ಜೀವನ ನಡೆಸಿದ ನಂತರ ದಂಪತಿಗಳು ಮೌಲ್ಯವನ್ನು ಮಕ್ಕಳಲ್ಲಿ ಬಿಂಬಿಸುವ ಮೂಲಕ ಬದುಕನ್ನು ಸಾರ್ಥಕ ಪಡಿಸಿಕೊಳ್ಳಲು ಕರೆ ನೀಡಿದರು.

ಮುನವಳ್ಳಿ ಶಿಂದೋಗಿ ಬಡ್ಲಿ ಮಲ್ಲೂರು ಅಸುಂಡಿ ಗ್ರಾಮದ ಭಕ್ತರು. ಗುರು ಹಿರಿಯರು.ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಿಕ್ಷಕ ವೀರಣ್ಣ ಕೊಳಕಿ ಸ್ವಾಗತಿಸಿದರು. ಬಿ. ಬಿ. ಹುಲಿಗೊಪ್ಪ ನಿರೂಪಿಸಿದರು.