spot_img
spot_img

ಪುಸ್ತಕ ಪರಿಚಯ: ರಸಚರಿತಾಮೃತ

Must Read

spot_img
- Advertisement -

ಪುಸ್ತಕದ ಹೆಸರು : ರಸಚರಿತಾಮೃತ

ಪುಟಗಳು : 204
ಪುಸ್ತಕದ ಲೇಖಕರ : ಆಗುಂಬೆ ಎಸ್ ನಟರಾಜ
ಬೆಲೆ : 200
ಪ್ರಕಾಶಕರು : ಎ.ಎಸ್.ಬಿ. ಮೆಮೋರಿಯಲ್ ಟ್ರಸ್ಟ್ (ರಿ)
ವಿಜಯನಗರ ಬೆಂಗಳೂರು.

ಹೆಸರೆ ಸೂಚಿಸುವಂತೆ “ರಸಚರಿತಾಮೃತ” ಪುಸ್ತಕವು ರಸದೌತಣ ನೀಡುವ ಓದುಗರನ್ನು ಒಮ್ಮೆ ಚಿಂತನೆಗೆ, ಮತ್ತೊಮ್ಮೆ ನಗೆಗಡಲಿಗೆ ತಳ್ಳುವ ಅನೇಕ ಚುಟುಕುಗಳು ಮತ್ತು ಹಾಸ್ಯ ಕಥೆಗಳನ್ನು ಒಳಗೊಂಡ ಪುಸ್ತಕ. ಆಗುಂಬೆ ಎಸ್ ನಟರಾಜರ ಬರಹ ಶೈಲಿಯೇ ಅದ್ಭುತ ಎನ್ನಿಸುತ್ತದೆ. ಪುಸ್ತಕವನ್ನು ಓದಲು ತೊಡಗಿದರೆ ಪುಟಗಳು ತನ್ನಿಂತಾನೆ ಹೊರಳಿಸುತ್ತ ಮುಂದೆ ಮುಂದೆ ಸಾಗುತ್ತದೆ.

- Advertisement -

ಪುಸ್ತಕವು ಈ ವರುಷದ ಚಿಂತನೆಗಳು ಎನ್ನುವ ಪರಿವಿಡಿ ಪ್ರಾರ್ಥನೆಯೊಂದಿಗೆ ಪ್ರಾರಂಭವಾಗುತ್ತದೆ. ಸಾಕ್ರೆಟಿಸ್ ಕನಪ್ಯೂಸಿಯಾಸ್, ಪ್ಲೇಟೋ, ಎಮ್.ಪಿ.ಕೆ, ಕುಟ್ಟಿ ಕಾರ್ಲ, ರುವಾನ ,ಡಿವಿಜಿ, ಅವರ ಮಾತುಗಳೊಂದಿಗೆ ಸಾಗುತ್ತದೆ. ಸಂಪತ್ತು ಎಷ್ಟೆ ಸಣ್ಣದಿದ್ದರೂ ಅಕ್ಕರೆಯಿಂದ ಅನುಭವಿಸಬೇಕು ಎನ್ನುವ ಮಾತನ್ನು ಉದಾಹರಣೆಗಳೊಂದಿಗೆ ಅತ್ಯಂತ ಮಾರ್ಮಿಕವಾಗಿ ವಿವರಿಸಿದ್ದಾರೆ.

ರಿಚರ್ಡ ವ್ಹೇಬ್ಲಿ ಅವರ ಅಸಹನೆಯ ದ್ವೇಷಿಸುವ ಪ್ರಸಂಗ, ಮಾರ್ವಾಡಿಯ ಸಮುದ್ರಯಾನ ರೆ ಜಾನ್ ಲಾ ಷಾರ್ಜ ಅವರ ಮಾತು, ಅಂಗಡಿಮಾಲಿಕರ ವೈರತ್ವದ ಪ್ರಸಂಗ, ಖ್ಯಾತ ಕ್ರಿಕೆಟ ಆಟಗಾರ ವಿಜಯ ಮರ್ಚಂಟ್ ಅವರ ಕ್ರಿಕೆಟ್ ಕುರಿತ ಪ್ರಸಂಗ, ಪ್ರೇರಣೆಯ ಬಗ್ಗೆ ಒಂದು ಕಥೆ, ಅಕ್ಬರ ಬೀರಬಲನ ಕಾಲದ ಬೈರಾಂಖಾನನ ಒಂದು ಪ್ರಸಂಗ, ಪ್ರಸಿದ್ಧ ಪತ್ರಕರ್ತೆ ಆರ್ಫರ ಜೇಮ್ಲೆ ಪೆಗ್ಲರ ಅವರ ಮೂರ್ಛೇರೋಗದ ಹಾಸ್ಯ ಒಂದು ಅರೇಬಿಯಾ ಕಥೆ, ಒಂದು ಚೀನಿಕಥೆಯಲ್ಲಿ ಮಡಿವಾಳನ ಕಥೆಯನ್ನು ತುಂಬಾ ಸರಳ ಹಾಗೂ ವೈವಿಧ್ಯಮಯವಾಗಿ ಓದುಗರಿಗೆ ನೀಡಿದ್ದಾರೆ.

ಹೀಗೆ ಕಥೆಗಳ ಸರಣಿ ಮುಂದುವರೆಯುತ್ತಾ ಸಾಮ್ಯುಲ್ ಜಾನ್ಸನ್ ಅವರ ಜ್ಞಾನ ಫ್ರೀಯಾಗಿ ಸಿಕ್ಕರೂ ಅದನ್ನು ಪಡೆಯಲು ಎಲ್ಲರೂ ಆಸಕ್ತಿ ಪಡುವದಿಲ್ಲ ಎನ್ನುವ ಮಾತು ಅವರು ಡಿಕ್ಸನರಿ ಬರೆದರೂ ಜ್ಞಾನದ ಮಹತ್ವ ಜಗತ್ತು ಅರಿತಿಲ್ಲ ಎನ್ನುವಂತೆ ಸೂಚಿಸುತ್ತದೆ. ಮೂರು ಕನ್ಯೆಯರ ಕಥೆ ವಾಲ್ ಸ್ಟ್ರೀವನ ಮಾಟಗಾತಿಯ ಕಥೆ, ಸರ್ ರಾಬರ್ಟವಾಲ್ ಪೋಲ್ ಅವರು ಓದುವ ಹವ್ಯಾಸ ಕಳೆದಕೊಂಡು ಲೈಬ್ರರಿ ಪುಸ್ತಕ ಓದಲಾಗದೆ ಅತ್ತ ಪ್ರಸಂಗ ಸಂದರವಾಗಿ ಹೆಣೆಯಲ್ಪಟ್ಟಿವೆ.

- Advertisement -

ಅಬ್ರಹಾಂ ಲಿಂಕನ್, ವಿಲಿಯಂ ಸ್ಕಾಟ್ ಎಂಬ ಸಾಮಾನ್ಯ ರೈತನಮಗನಿಗೆ ಸ್ಪಂದಿಸಿದ್ದು, ಮಾರ್ಕ ಟ್ರೈನ್ ಅವರ ಕಥೆ ಬೈಬಲ ಹೆಸರು ಹೇಗೆ ರೂಡಿಗೆ ಬಂದಿತು? ಸತ್ಸಂಗ ಜೀವನದ ನಶ್ವರತೆ ಸಂಕಟದ ಮರ ಸಮಯದ ಬೆಲೆ ಪ್ರತಿಯೊಂದು ಕಥೆಗಳು ಮತ್ತೊಮ್ಮೆ ಮತ್ತೊಮ್ಮೆ ಓದುವಂತಹವು.

ಇವೆಲ್ಲ ಮೊದಲ ಭಾಗದಲ್ಲಿ ಸವಿಸ್ತಾರವಾಗಿ ಮೂಡಿಬಂದಿವೆ. ಎರಡನೇ ಭಾಗದಲ್ಲಿ ಇತಿಹಾಸದ ಕಥೆ ಅದು ನಡೆದು ಬಂದ ದಾರಿ ಎನ್ನುವ ಶೀರ್ಷಿಕೆಯೊಂದಿಗೆ ನಿಜವಾದ ತತ್ವಶಾಸ್ತ್ರವೇ ಇತಿಹಾಸ ಎನ್ನುವ ನೆಪೋಲಿಯನ್ನವರ ಒಂದು ಮಾತು ಒಂದು ಗ್ರಂಥವನ್ನು ಓದಿದಷ್ಟು ಚಿಂತನೆಗೆ ಹಚ್ಚುವುದು, ಇದರಲ್ಲಿ ಅಲೆಗ್ಸಾಂಡರ ಗ್ರೀಕ್ ಜಾನಿ ಡೈಯೋಜಿನಿಸನೊಂದಿನ ಮಾತಿನ ಚರ್ಚೆ, ಅಬೆಲಾರ್ಡ ಎನ್ನುವ ಸನ್ಯಾಸಿಯ ಕಥೆ, ಅವನ ಪ್ರೇಯಸಿಯ ಪ್ರೇಮಪತ್ರದ ಪ್ರಾಮುಖ್ಯತೆ, ಇಂಗ್ಲೆಂಡಿನ ತತ್ವಜ್ಞಾನಿ ವೈಕ್ಲಿಷ ಜಾನ್ ವೈಕ್ಲಿಫನ ರೋಮನ ಕ್ಯಾಥೋಲಿಕ ಚರ್ಚನ ಧಾರ್ಮಿಕ ನೀತಿ ರೀತಿಗಳ ವಿರುದ್ಧ ಹೋರಾಡಿದ್ದು ಇದರಿಂದ ಮಾರ್ಟಿನ್ ಲೂಥರ್ ಬೆಳಕಿಗೆ ಬಂದಿದ್ದು (1483-1546) ಪವಿತ್ರ ನಗರ ಜೆರೋಸಲಂನ ಕಥೆ ಅದರಲ್ಲಿ ಸಮಯಾನುಸಾರ ಕ್ರಿ. ಪೂ. 1900 ರಿಂದ ಕ್ರಿ.ಶ 1979 ರವರೆಗಿನ ರಕ್ತಪಾತ, ಸಾಮಾಜಿಕ ಕ್ರಾಂತಿಕಾರಕ ಘಟನಾವಳಿಗಳನ್ನು ದಿನಾಂಕ ವರ್ಷ ಸಹಿತವಾಗಿ ಓದುಗರ ಮಾಹಿತಿ ನೀಡುತ್ತದೆ.

ಪ್ರಥಮ ಪ್ರೇಮ ಕವಿತೆ ಬರೆದ ಗ್ರೀಕ್ ಕವಿಯತ್ರಿ (ಕ್ರಿ.ಶ 612) ಸಾಪ್ಪೋಳ ಕುರಿತು ಮಾಹಿತಿ. ಅವಳು ಸತ್ತಾಗ ಅವಳು ಬರೆದ ಪ್ರೇಮ ಕವಿತೆಗಳನ್ನು ಸಾರ್ವಜನಿಕವಾಗಿ ಸುಟ್ಟು ಭಸ್ಮಮಾಡಿದ ಮಾಹಿತಿ ನಿಜಕ್ಕೂ ಧರ್ಮಾಂಧರ ಬಗ್ಗೆ ಬೇಸರ ತರಿಸದೆ ಇರಲಾರದು. ನಂತರ ರಾಬರ್ಟ ಬರ್ನ್ಸ್ ಕ್ರಿ. ಶ 1759 ರಿಂದ 96 ಮೊ ಜಾರ್ಚ ಬಿಥೋವನ್ (ಕಿವುಡ ಸಂಗೀತ ಸಂಯೋಜಕ) ನ ಮಾಹಿತಿ ಲಭ್ಯವಿದೆ.

ಲೇಖಕರ ಹುಡುಕುವ ಬರೆಯುವ ಹವ್ಯಾಸಕ್ಕೆ ನನ್ನದೊಂದು ನಮನ ಸಲ್ಲಲೇಬೇಕು. ಏಕೆಂದರೆ ಪುಸ್ತಕ ನೋಡಿದರೆ ಇದರಲ್ಲಿ ಇಷ್ಟೊಂದು ಆಗಾಧವಾದ, ವಿಶಿಷ್ಠವಾದ, ವಿಷಯ, ಆಳವಾದ ಚಿಂತನೆ ಮಂಡನೆ ಇದೆಯೇ ಎನ್ನಿಸಿದರೆ ಇದು ಒಂದು ಪಿ.ಎಚ್ ಡಿಗೇನು ಕಡಿಮೆಯಲ್ಲ ಎನ್ನಸುವುದಂತೂ ನಿಜ.

ಲೇಖಕರು ಮುಂದುವರೆಯುತ್ತಾ ಪ್ಲಾಸಿ ಕದನ ಎನ್ನುವ ಶಿರೋನಾಮೆಯೊಂದಿಗೆ ಭಾರತದ ಆಗಿನ ಪರಿಸ್ಥಿತಿಯನ್ನು ಎಳೆಳೆಯಾಗಿ ಬಿಚ್ಚಿಡುತ್ತಾ ಸಾಗಿದ್ದಾರೆ. ಲಾರ್ಡ ಸಂತತಿಯ ಪರಿಸ್ಥಿತಿ ವೆಲ್ಲೂರಿನಲ್ಲಿ ಬಂಧನದಲ್ಲಿರಿಸಿದ್ದು ಟಿಪ್ಪುವಿನ 12 ಮಕ್ಕಳಲ್ಲಿ ಬದುಕಳಿದ ಗುಲಾಮ ಮಹ್ಮದ ವಿದ್ಯೆಪಡೆದು ಲಂಡನ್ ಗೆ ಹೋಗಿ ತನಗೆ ಬರಬೇಕಾದ ಪಿಂಚಣಿ ಹೋರಾಡಿ ಪಡೆದದ್ದು ಕಲ್ಕತ್ತದಲ್ಲಿ ಕಟ್ಟಿಸಿದ ಎರಡು ಮಸೀದಿಗಳ ಕುರಿತು ಮಾಹಿತಿ ಮತ್ತಷ್ಟು ವಿಷಯಬೇಕಿತ್ತು ಎನಿಸುತ್ತದೆ.

ರೆ ಹೈಬರನ್ ವೃತ್ತಾಂತ ಝಾನ್ಸಿ ಲಕ್ಷ್ಮೀಬಾಯಿ, ರೀಡರ್ಸ ಡೈಜೆಸ್ಟನ ಒಂದು ಕಥೆ, ಲಾಹೋರನಲ್ಲಿ ಕುಳಿತು ಬ್ಯಾನರ್ಜಿ ಬರೆದ ಕಥೆ, ಇಂಗ್ಲೀಷನಲ್ಲಿಯ ಪತ್ರ ಬಂಗಾರದ ಮಾಹಿತಿ ಮಮ್ಮಿ ಪದದ ಅರ್ಥ, ಮೊನಾಲಿಸಾ ವರ್ಣಚಿತ್ರದ ಬಗ್ಗೆ, ಕ್ರಿ.ಶ. 850 ರಲ್ಲಿ ಅರಬ್ಬರು ಕಾಫಿ ಕುಡಿಯುವುದನ್ನು ಶುರುಮಾಡಿದರು ಎನ್ನುವ ಮಾಹಿತಿ ಗುಡ್ ಇಯರ್ ರಬ್ಬರನ್ನು ಕಂಡು ಹಿಡಿದವನ ದಾರುಣ ಕಥೆ, ಥಾಮಸ್ ಅಲ್ಪಾ ಎಡಿಸನನ ಪತ್ನಿಯು ಅರಿತ ಮಾರ್ಸಕೋಡ ಭಾಷೆ, ಅಲ್ ಫ್ರೆಡ ನೋಬೆಲ್ ಡೈನಾಮೈಟ್ ಸಿಡಿಮದ್ದು ಕಂಡುಹಿಡಿದು ಅದರಲ್ಲಿ ಅವನ ತಮ್ಮನ ಸಾವು, ಅವನ ಮರಣ ಶಾಸನದ ಮಾಹಿತಿ, ಇಟಲಿಯ ಪ್ರಮುಖ ನಗರ ಅವುಗಳ ವೈಶಿಷ್ಟ್ಯ, ಬೆಲೆವೆಣ್ಣುಗಳ ಮಾಹಿತಿ, ಎರಡನೇ ಬಿಸಿಲ್ ಎಂಬ ಕ್ರೂರ ರಾಜನ ಕಥೆ, ಅಬ್ರಹಾಂ ಲಿಂಕನನ ಪತ್ನಿ ಮೇರಿಟಾಡ್ ಲಿಂಕನಳ ಕಥೆ, ವಿಚಿತ್ರ ಮನೋರಂಜಕ ಸಂತ ರಾಸ್ ಪುಟಿನ್ ನ ಮಾಹಿತಿ, ಬ್ರಿಟನಲ್ಲಿ ಮರಣದಂಡನೆ ರದ್ದುಗೊಳಿಸಿದ್ದಕ್ಕೆ ಕಾರಣವಾದ ಹೃದಯ ವಿದ್ರಾವಕ ಘಟನೆ ಮಹಿಳಾ ಕಡಲ್ಗಳ್ಳರು, ಕಾರು ಅಪಘಾತದ ಹಾಸ್ಯ ಬೆಂಜಾಮಿನ್ ಪ್ರಾಂಕಲಿನನ ಕ್ರಿಯಾಶೀಲತೆ, ಘಸ್ನಿ ಮೊಹಮ್ಮದನ ದಂಡಯಾತ್ರೆ ಅದರ ಪರಿಣಾಮ ಕುರಿಕಟುಕನ ಉದಾಹಣೆಯೊಂದಿಗೆ ಮೂಡಿ ಬಂದಿದೆ ಹೀಗೆ ರಸಚರಿತಾಮೃತ ಪುಸ್ತಕವು ಶ್ರೀ ಮುರುಳೀಧರ ಉಪಾಧ್ಯಾಯ ಅವರು ಬರೆದ ಆಗುಂಬೆ ನಟರಾಜರ ಮಾಹಿತಿ ಅವರು ಬರೆದಿರುವ 29 ಕೃತಿಗಳ ಮಾಹಿತಿಯೊಂದಿಗೆ ನನ್ನನ್ನು ಓದಿನೊಂದಿಗೆ ಬರಹಕ್ಕೆ ಅಂಟಿಸಿದ್ದಂತೂ ಸುಳ್ಳಲ್ಲ.

ನೀವು ಓದಿ ಇತರರನ್ನು ಓದಲು ಪ್ರೋತ್ಸಾಹಿಸಿ ಲೇಖಕರಿಂದ ಇನ್ನಷ್ಟು ಅನ್ವೇಷಕ ಕೃತಿಗಳು ಮೂಡಿ ಬರಲಿ ಎಂದು ಆಶಿಸುತ್ತೇನೆ.

ಲೇಖಕರ ಜಂಗಮವಾಣಿ : 9481423004
ಲಲಿತಾ ಕ್ಯಾಸನ್ನವರ
ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ
ಬೆಳಗಾವಿ
ಮೋ: 9035527366

- Advertisement -
- Advertisement -

Latest News

ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಬಸವರಾಜ ಪತ್ತಾರ ಅವರಿಗೆ ಸನ್ಮಾನ

ಬೈಲಹೊಂಗಲ: ಸೋಲನ್ನು ಒಪ್ಪಿಕೊಳ್ಳದೇ ನಿರಂತರವಾಗಿ ಪ್ರಯತ್ನಿಸುವ ಮನೋಭಾವವೇ ಸಾಧನೆಯ ಸೂತ್ರ ಎಂದು ಬೈಲಹೊಂಗಲ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷರಾದ ಎನ್.ಆರ್.ಠಕ್ಕಾಯಿ ಹೇಳಿದರು. ಕರ್ನಾಟಕ ರಾಜ್ಯ ಶಿಕ್ಷಕರ ಕಲ್ಯಾಣ...
- Advertisement -

More Articles Like This

- Advertisement -
close
error: Content is protected !!
Join WhatsApp Group