● ಶಿಕ್ಷಕ ಎಂದರೆ ವಿದ್ಯಾರ್ಥಿಗಳ ಪಾಲಿನ ಬೆಳಕು, ಕತ್ತಲೆಯನ್ನು ಹೋಗಲಾಡಿಸುವ ಎಂದರ್ಥ. ತನ್ನ ಸ್ವಂತ ಮಕ್ಕಳಿಗಿಂತ, ಶಾಲಾ ಮಕ್ಕಳ ಭವಿಷ್ಯದ ಬಗ್ಗೆ ಚಿಂತಿಸಿ ಜಗತ್ತಿನ ಏಕೈಕ ವ್ಯಕ್ತಿ ಎಂದರೆ ಅದು ಶಿಕ್ಷಕ ಮಾತ್ರ. ಅಂತಹ ಶಿಕ್ಷಕ ಗುರು ಬಳಗಕ್ಕೆ ಇಂದಿನ “ವಿಶ್ವ ಶಿಕ್ಷಕರ ದಿನ”ದ ಶುಭಾಶಯಗಳನ್ನು ತಿಳಿಸೋಣ.
● ಮಕ್ಕಳ/ಜನರ ಭವಿಷ್ಯವನ್ನು ರೂಪಿಸುವಂತಹ ಶಿಕ್ಷಣವನ್ನು ನೀಡುವ ಮೂಲಕ ದೇಶ ಆರ್ಥಿಕ ಅಭಿವೃದ್ದಿ ಸಾಧಿಸುವಲ್ಲಿ ಮಹತ್ವದ ಪಾತ್ರವಹಿಸಿರುವ ಶಿಕ್ಷಕರಿಗೆ ಗೌರವ ಸಲ್ಲಿಸುವ ದಿನವಿಂದು. ಪ್ರತೀ ವರ್ಷ ಅಕ್ಟೋಬರ್ 5ರಂದು ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಶಿಕ್ಷಕರ ಜವಾಬ್ದಾರಿಗಳು, ಹಕ್ಕುಗಳು ಮತ್ತು ಮೌಲ್ಯದ ಬಗ್ಗೆ ತಿಳಿಸುವ ಉದ್ದೇಶದೊಂದಿಗೆ ವಿಶ್ವ ಶಿಕ್ಷಕರ ದಿನವನ್ನು ಆಚರಿಸಲಾಗುತ್ತದೆ. ಭಾರತ, ಯುನೈಟೆಡ್ ಸ್ಟೇಟ್, ಕೆನಡಾ, ಅಸ್ಟ್ರೇಲಿಯಾ ಮತ್ತು ಫಿಲಿಫೈನ್ಸ್ ಸೇರಿದಂತೆ 100 ಕ್ಕೂ ಹೆಚ್ಚು ರಾಷ್ಟ್ರಗಳು ಈ ದಿನವನ್ನು ಆಚರಿಸುತ್ತವೆ.
● ಇತಿಹಾಸ- ಯುನೆಸ್ಕೋ ಮೊದಲ ವಿಶ್ವ ಶಿಕ್ಷಕರ ದಿನವನ್ನು ಅಕ್ಟೋಬರ್ 5, 1994 ರಂದು ಆಚರಿಸಲಾಯಿತು. ಅಂದಿನಿಂದ ಇದನ್ನು ಪ್ರತಿ ವರ್ಷ ನಡೆಸಲಾಗುತ್ತಿದೆ. ಅಕ್ಟೋಬರ್ 12, 1997 ರಂದು UNESCO 29 ನೇ ಸಾಮಾನ್ಯ ಸಮ್ಮೇಳನದ ಅಧಿವೇಶನದಲ್ಲಿ “ಉನ್ನತ ಶಿಕ್ಷಣ ಬೋಧನಾ ಸಿಬ್ಬಂದಿಯ ಸ್ಥಿತಿಗೆ ಸಂಬಂಧಿಸಿದ ಶಿಫಾರಸು” ಡಾಕ್ಯುಮೆಂಟ್ ಅನ್ನು ಅಂಗೀಕರಿಸಿತು. ಶಿಕ್ಷಕರ ಕೊಡುಗೆಗಳು ಮತ್ತು ಸಾಧನೆಗಳ ಜೊತೆಗೆ ಶಿಕ್ಷಕರ ಕಾಳಜಿ ಮತ್ತು ಶಿಕ್ಷಣದ ಬಗೆಗೆ ಗಮನ ಸೆಳೆಯಲು ಈ ದಿನವನ್ನು ಆಚರಿಸಲಾಗುತ್ತದೆ.
● ಶಿಕ್ಷಕರು ಯಾವಾಗಲೂ ಭವಿಷ್ಯದ ಬಗ್ಗೆ ಶ್ರಮಿಸುತ್ತಾರೆ. ಮಕ್ಕಳ ಮುಂದಿನ ಭವಿಷ್ಯದ ಕಾಳಜಿ ಮಾಡುತ್ತಾರೆ. ಅಕ್ಷರವೆಂಬ ಬೀಜ ಬಿತ್ತಿ, ಜ್ಞಾನವೆಂಬ ಬೆಳಕು ಚೆಲ್ಲಿ, ಬಾಳಿಗೊಂದು ಅರ್ಥ ಕಲ್ಪಿಸುವ ಎಲ್ಲ ಗುರು (ಶಿಕ್ಷಕ) ಬಳಗಕ್ಕೆ ಧನ್ಯವಾದಗಳನ್ನು ಅರ್ಪಿಸೋಣ.
ಎನ್.ಎನ್.ಕಬ್ಬೂರ
ಶಿಕ್ಷಕರು
ತಾ-ಸವದತ್ತಿ ಜಿ-ಬೆಳಗಾವಿ
ಮೊಬೈಲ್-9740043452