ತಿಂಗಳೊಳಗೆ ತುದಿ ಭಾಗದ ರೈತರ ಜಮೀನುಗಳಿಗೆ ನೀರು ಪೂರೈಕೆ: ಶಾಸಕ ಬಾಲಚಂದ್ರ ಜಾರಕಿಹೊಳಿ

Must Read

ರಾಮೇಶ್ವರ ಏತ ನೀರಾವರಿ ಯೋಜನೆಯ ವೆಂಕಟಾಪೂರ ಮುಖ್ಯ ಕಾಲುವೆಯ ಪರಿಶೀಲನೆ

ಮೂಡಲಗಿ : ರಾಮೇಶ್ವರ ಏತ ನೀರಾವರಿ ಯೋಜನೆಯಡಿ ಇದುವರೆಗೂ ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದ ರೈತರಿಗೆ ತಮ್ಮ ಜಮೀನುಗಳಿಗೆ ನೀರು ಪೂರೈಸಲು ಹೊಸ ಚೇಂಬರ್ ನಿರ್ಮಾಣ ಮಾಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಶುಕ್ರವಾರದಂದು ತಾಲೂಕಿನ ವೆಂಕಟಾಪೂರ ಗ್ರಾಮದ ರಾಮೇಶ್ವರ ಏತ ನೀರಾವರಿ ಯೋಜನೆಯ ಕಾಲುವೆಗೆ ಭೇಟಿ ನೀಡಿ ಮಾತನಾಡಿದ ಅವರು, ತಿಂಗಳೊಳಗೆ ವೆಂಕಟಾಪೂರ ಮತ್ತು ಸುತ್ತಲಿನ ಗ್ರಾಮಗಳ ರೈತರ ಜಮೀನುಗಳಿಗೆ ನೀರು ಹರಿಸುವುದಾಗಿ ಅವರು ಭರವಸೆ ನೀಡಿದರು.

ವೆಂಕಟಾಪೂರ, ಕುಲಗೋಡ, ಹಳೇಯರಗುದ್ರಿ ಮತ್ತು ತಿಮ್ಮಾಪೂರ ಗ್ರಾಮಸ್ಥರು ಕುಲಗೋಡ ಹದ್ದಿಯಲ್ಲಿ ಹಾಯ್ದು ಹೋಗಿರುವ ಏರುಗೊಳುವೆ(ರೈಸಿಂಗ್‍ಮೈನ್) ಕಿ.ಮೀ 7+680 ರಲ್ಲಿ ಹೊಸದಾಗಿ ವಾಲ್ವನ್ನು ಅಳವಡಿಸಿ 150 ಮೀಟರ್ ಏರುಗೊಳವೆ ಅಳವಡಿಸಿ ಹೊಸದಾಗಿ ಚೇಂಬರ್ ನಿರ್ಮಾಣ ಮಾಡಿ, ಚೇಂಬರನ್ನು ವೆಂಕಟಾಪೂರ ಮುಖ್ಯ ಕಾಲುವೆ ಕಿ.ಮೀ 5+264 ಗೆ ಸೇರಿಸಬೇಕೆಂಬ ಈ ಭಾಗದ ರೈತರು ಬೇಡಿಕೆ ಇಟ್ಟಿದ್ದಾರೆ. ವೆಂಕಟಾಪೂರ ಮುಖ್ಯ ಕಾಲುವೆಯ ತುದಿ ಭಾಗದ ರೈತರಿಗೆ ಸಮರ್ಪಕವಾಗಿ ನೀರು ಪೂರೈಸಲು ಖಾಸಗಿ ಕಂಪನಿಗಳ ಮೂಲಕ ಸಮೀಕ್ಷೆ ನಡೆಸಲು ಉದ್ಧೇಶಿಸಿರುವುದಾಗಿ ಅವರು ಹೇಳಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ಭಾಗದ ರೈತರೊಂದಿಗೆ ಕಿ.ಮೀ ನಷ್ಟು ನಡೆದುಕೊಂಡು ಕಾಲುವೆಯ ಸ್ಥಿತಿಗತಿಗಳನ್ನು ಪರಿಶೀಲಿಸಿದರು. ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಈ ಸಂಬಂಧ ಕಾರ್ಯೋನ್ಮುಖರಾಗಿ ರೈತರ ಜಮೀನುಗಳಿಗೆ ನೀರು ಹರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ, ರವಿ ಪರುಶೆಟ್ಟಿ, ವೆಂಕಪ್ಪ ಕೋಳಿಗುಡ್ಡ, ಕಲ್ಲಪ್ಪಗೌಡ ಪಾಟೀಲ, ಲಕ್ಷ್ಮಪ್ಪ ಮಿರ್ಜಿ, ಶೇಷಪ್ಪಗೌಡ ಪಾಟೀಲ, ರಂಗಪ್ಪ ಅರಳಿಮಟ್ಟಿ, ವಿಶ್ವೇಶ್ವರ ನಾಯ್ಕ, ಬೀರಪ್ಪ ಉದ್ದವ್ವಗೋಳ, ಬಸು ನೀಲಪ್ಪಗೋಳ, ಯಲ್ಲಪ್ಪ ಗಾಜಿ, ನಾರಾಯಣ ವಟವಟಿ, ಮಹಾದೇವ ವಟವಟಿ, ನಿಂಗಪ್ಪ ಹೊರಟ್ಟಿ, ಶಂಕರೆಪ್ಪ ಕುಲಗೋಡ, ಬಾಳಪ್ಪ ಕವಟಕೊಪ್ಪ, ಭೀಮಪ್ಪ ಫಕೀರಪ್ಪಗೋಳ, ಶಿವಾನಂದ ಅಂಗಡಿ, ಸಂಗಪ್ಪ ಬಾಡಕರ, ಬೀರಪ್ಪ ಹೊಸಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳಾದ ರಘುರಾಮ ಎಸ್.ವ್ಹಿ, ವ್ಹಿ.ಆರ್. ಭಜಂತ್ರಿ, ಮಹಾಂತೇಶ ಕೋಹಳ್ಳಿ ಸೇರಿದಂತೆ ವೆಂಕಟಾಪೂರ ಮುಖ್ಯ ಕಾಲುವೆ ಭಾಗದ ಅನೇಕ ರೈತರು ಉಪಸ್ಥಿತರಿದ್ದರು.

Latest News

ಬೆಳಕಿನ ಹಬ್ಬ ದೀಪಾವಳಿ.

            'ಹಬ್ಬಗಳ ರಾಜ' ಎಂದು ಪ್ರಖ್ಯಾತಿ ಪಡೆದಿರುವ ಪ್ರಮುಖ ರಾಷ್ಟ್ರೀಯ ಹಬ್ಬ' ಬೆಳಕಿನ ಹಬ್ಬ  ದೀಪಾವಳಿ ಹಬ್ಬ'. ದೇಶದಾದ್ಯಂತ...

More Articles Like This

error: Content is protected !!
Join WhatsApp Group