ಸಿಂದಗಿ: ಪಟ್ಟಣದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಿದ್ದಾರೆ. ಆದರೆ ಮಾದಾರ ಚನ್ನಯ್ಯ ವೃತ್ತಕ್ಕೆ ದೀಪಾಲಂಕಾರ ಮಾಡದೇ ಅಧಿಕಾರಿಗಳು ಅವಮಾನಿಸಿದನ್ನು ಖಂಡಿಸಿ ಕರ್ನಾಟಕ ಆದಿಜಾಂಬವ ಜನ ಸಂಘದ ಪದಾಧಿಕಾರಿಗಳು ಪ್ರತಿಭಟಿಸಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಅವರಿಗ ಮನವಿ ಸಲ್ಲಿಸಿದರು.
ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಸಾಯಬಣ್ಣ ದೇವರಮನಿ ಮಾತನಾಡಿ, ಎಲ್ಲ ವೃತ್ತಗಳಿಗೆ ದೀಪಾಲಂಕಾರ ನಗರದಲ್ಲಿರುವ ಬಹುತೇಕ ಎಲ್ಲ ಮಾಡಲಾಗುತ್ತದೆ. ಆದರೆ ದಲಿತ ಶರಣ, ಮಾದರ ಚನ್ನಯ್ಯ ವೃತ್ತಕ್ಕೆ ಉದ್ದೇಶ ಪೂರ್ವಕವಾಗಿ ಕಿತ್ತೂರು ರಾಣಿ ಚನ್ನಮ್ಮ ಜಯಂತಿಯಂದು ದೀಪಾಲಂಕಾರ ಮಾಡದೇ ಅವಮಾನ ಮಾಡಿದ್ದಾರೆ ಎಂದು ಪಟ್ಟಣದ ಎಲ್ಲ ವೃತ್ತಗಳಿಗೆ ದೀಪಾಲಂಕಾರ ಮಾಡಿದ್ದಾರೆ. ಆದರೆ ಮಾದಾರ ಚನ್ನಯ್ಯ ವೃತ್ತಕ್ಕೆ ದೀಪಾಲಂಕಾರ ಮಾಡದೇ ಅಧಿಕಾರಿಗಳು ಅವಮಾನಿಸಿದ್ದು ಖಂಡನೀಯ. ಈ ರೀತಿಯಾಗಿ ಮಾಡುತ್ತಿರುವುದು ಇದೇನೂ ಮೊದಲಲ್ಲ. ಈ ಹಿಂದೆಯೂ ಹಲವಾರು ಬಾರಿ ಇಂತಹ ತಪ್ಪುಗಳನ್ನು ಮಾಡಿದ್ದಾರೆ. ಆದ ಕಾರಣ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಜಾತಿಯತೆಯನ್ನು ಪೋಷಿಸದೇ ತಪ್ಪಿತಸ್ಥ ಅಧಿಕಾರಿಗಳನ್ನು ಕೂಡಲೇ ಸೇವೆಯಿಂದ ವಜಾಮಾಡಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಏಕನಾಥ ದ್ವಾಶ್ಯಾಳ, ರಮೇಶ ಗುಬ್ಬೇವಾಡ, ಮಲ್ಲೇಶಿ ಕೆರೂರ, ರಮೇಶ ಖಾನಾಪೂರ ಚಂದ್ರಶೇಖರ ದೇವೂರ, ಪರಶುರಾಮ ಬನ್ನೇಟ್ಟಿ, ಸಾಯಬಣ್ಣ ಪುರದಾಳ, ಶ್ರೀಕಾಂತ ದೇವೂರ, ರಾಮು ವಗ್ಗರ, ಗಂಗಾಧರ ಮಳ್ಳಿ, ರಾಮಚಂದ್ರ ಪುರದಾಳ, ಸಿದ್ದು ಯಂಕಂಚಿ ಸೇರಿದಂತೆ ಅನೇಕರಿದ್ದರು.