spot_img
spot_img

ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡ

Must Read

- Advertisement -

ಮುನವಳ್ಳಿಯ ನಾಡಹಬ್ಬದ ಮೊದಲ ದಿನ ಸ್ಟ್ಯಾಂಡ್ ಅಪ್ ಎಂಬ ಹಾಸ್ಯ ತಂಡದ ಆಗಮನವಾಗಿತ್ತು. ನಮ್ಮೂರಿನ ಹುಡುಗ ಕಾರ್ತಿಕ ಗೋಪಶೆಟ್ಟಿ ಈ ತಂಡದ ಸದಸ್ಯರಲ್ಲಿ ಒಬ್ಬನು. ನಾನು  ಈ ಸ್ಟ್ಯಾಂಡ್ ಅಪ್ ತಂಡದ ಹಾಸ್ಯ ಕುರಿತು ವಿಡಿಯೋ ನೋಡಿದ ನೆನಪಿಗಾಗಿ ಆ ದಿನ ಕಾರ್ತಿಕ್ ಅವರ ಮನೆಗೆ ಹೋಗಿ ಬಂದೆನು.ಅಲ್ಲಿ ತಂಡದ ಸದಸ್ಯರನ್ನು ಪರಿಚಯಿಸಿಕೊಂಡೆ. ನಂತರ ಪಂಚಲಿಂಗೇಶ್ವರ ದೇವಾಲಯದಲ್ಲಿ ಈ ತಂಡದ ಹಾಸ್ಯ ಕಾರ್ಯಕ್ರಮ ಜರುಗಿತು. ಅವರು ತಮ್ಮನ್ನು ತಾವು ಪರಿಚಯಿಸಿಕೊಳ್ಳುವ ರೀತಿ ಜೊತೆಗೆ ಆ ಪರಿಚಯ ಜೊತೆಗೆ ತಾವು ಏನನ್ನು ನಿರೂಪಿಸಬೇಕೋ ಅದನ್ನು ಅವರು ನಿರೂಪಿಸಿದ ರೀತಿ ಜನರನ್ನು ನಗೆಗಡಲಿನಲ್ಲಿ ತೇಲಿಸಿತು. ನಾಡಹಬ್ಬದ ಹಿರಿಯರಾದ ಬಿ.ಬಿ.ನಾವಲಗಟ್ಟಿ. ಸುರೇಶ ಜಾವೂರ. ಶ್ರೀಶೈಲ ಹಂಜಿ ಹಾಗೂ ಎಲ್ಲ ಸದಸ್ಯರು ನಿರೂಪಕರಾದ ಭವಾನಿ ಖೊಂದುನಾಯ್ಕ. ಬಾಳು ಹೊಸಮನಿಯವರು ಸೇರಿದಂತೆ ಈ ಟೀಂ ನ ಎಲ್ಲ ಸದಸ್ಯರನ್ನು ಸನ್ಮಾನಿಸಿ ಗೌರವಿಸಿದರು.

ಹಾಸ್ಯ ನಮ್ಮ ಜೀವನದಲ್ಲಿ ಮಹತ್ವದ ಅಂಶ. ಇಂದು ಹಾಸ್ಯಕ್ಕೆ ಬಹಳ ಮಹತ್ವ ನೀಡುತ್ತಿರುವರು. ಹಾಸ್ಯ ಎಲ್ಲಿಯೇ ಇರಲಿ ಅಲ್ಲಿ ಸೇರುವರು.

ಚಾರ್ಲಿ ಚಾಪ್ಲಿನ್ ಪ್ರಕಾರ- ನಗದೇ ಕಳೆದ ದಿನ ಅದು ವ್ಯರ್ಥ ದಿನ! ದಿನದ ಇಪ್ಪತ್ನಾಲ್ಕು ಗಂಟೆಗಳಲ್ಲಿ ಕೆಲವು ನಿಮಿಷಗಳಾದರೂ ನಗೆ, ಹಾಸ್ಯ, ತುಂಟತನದಿಂದ ಕೂಡಿದ್ದರೆ ಗಂಭೀರ ಬದುಕಿನ ಒತ್ತಡ ದೂರವಾಗಿ, ದೇಹ-ಮನಸ್ಸುಗಳು ಹಗುರಗೊಂಡು ಉಲ್ಲಾಸಕ್ಕೆಡೆ ಮಾಡಿಕೊಡುತ್ತವೆ, ಆರೋಗ್ಯದ ಭಾಗ್ಯವನ್ನು ಒದಗಿಸುತ್ತವೆ. ಇಂದಿನ ಪೀಳಿಗೆಯಂತೂ ಒತ್ತಡದ ಬದುಕಿಗೇ ಒಗ್ಗಿಹೋಗಿದೆ.ಇಂತಹ ಸಂದರ್ಭದಲ್ಲಿ ಸ್ವಲ್ಪ ಸಮಯವಾದರೂ ನಗೆಗಡಲಲ್ಲಿ ತೇಲುವ ಮೂಲಕ ಮನಸ್ಸಿಗೆ ರಿಲ್ಯಾಕ್ಸ ತಂದುಕೊಳ್ಳುವುದು ಕೂಡ ಇಂದಿನ ದೈನಂದಿನ ಅವಶ್ಯಕತೆಗಳಲ್ಲೊಂದು.

- Advertisement -

ಅದರ ಫಲವೇ ಲಾಫ್ಟರ್ ಕ್ಲಬ್, ನಗೆಹಬ್ಬಗಳು, ಹಾಸ್ಯೋತ್ಸವ ಇತ್ಯಾದಿಗಳು. ಮುಂಬೈನ ಖ್ಯಾತ ವೈದ್ಯ ಮದನ್ ಕಟಾರಿಯಾ ಮಹಾನಗರಿಯ, ಒತ್ತಡ ಬದುಕಿಗೆ ವಿದಾಯ ಹೇಳಲಾಗದಿದ್ದರೂ, ತುಸು ವಿರಾಮವನ್ನಾದರೂ ಹೇಳಲು, ನಗೆ-ಯೋಗಕ್ಕೆ ಒತ್ತು ಕೊಡುವ ಲಾಫ್ಟರ್ ಕ್ಲಬ್‌ಗಳನ್ನು ಆರಂಭಿಸಿದರು. ಮಾತ್ರವಲ್ಲ, ೧೯೯೮ರಿಂದ ಮೇ ತಿಂಗಳ ಮೊದಲ ಭಾನುವಾರದಂದು ವಿಶ್ವ ನಗೆ ದಿನವನ್ನೂ ಪ್ರಾರಂಭಿಸಿದರು. ಸುಮಾರು ನೂರೈವಕ್ಕೂ ಹೆಚ್ಚು ದೇಶಗಳು ವಿಶ್ವ ನಗೆ ದಿನವನ್ನು ನಗು-ನಗುತ್ತ ಆಚರಿಸಿಕೊಂಡು ಬರುತ್ತಿವೆ. ಈ ಲಾಫ್ಟರ್ ಕ್ಲಬ್‌ಗಳು ತಮಾಷೆ, ನಗುವುದಕ್ಕಷ್ಟೇ ಸೀಮಿತವಾಗದೆ ವೈಜ್ಞಾನಿಕ ಹಿನ್ನೆಲೆಯನ್ನೂ ಹೊಂದಿ ನಗುವಿನಿಂದ ದೇಹದಲ್ಲಿ ಬಿಡುಗಡೆಯಾಗುವ ಹಾರ್ಮೋನುಗಳು ದೇಹ-ಮನಸ್ಸುಗಳ ಉಲ್ಲಾಸಕ್ಕೆ ಪೂರಕ ಎಂಬುದನ್ನು ದೃಢೀಕರಿಸಿವೆ.

ಗಂಗಾವತಿ ಪ್ರಾಣೇಶ ಅವರು ತಮ್ಮ ಪ್ರತಿ ಹಾಸ್ಯದ ಗೋಷ್ಟಿಯಲ್ಲಿ ನಗೆಯ ಜೊತೆಗೆ ಮೌಲ್ಯಗಳನ್ನು ಕೂಡ ಹಾಸ್ಯ ಲೇಪನದೊಂದಿಗೆ ನೀಡುವರು.ಅವರು ಬೀಚಿ ಅಭಿಮಾನಿಯಾಗಿ ಬೀಚಿ ಅವರ ಮೌಲ್ಯಯುತ ಸಾಹಿತ್ಯವನ್ನು ಕೂಡ ಬಿಂಬಿಸುವರು.

- Advertisement -

ಈ ದಿಸೆಯಲ್ಲಿ ಮೂವರು ಯುವಕರ ತಂಡವೊಂದು ರಘು ಆಚಾರ್ಯ ಅವರ ಮಾರ್ಗದರ್ಶನದಲ್ಲಿ ಸ್ಟ್ಯಾಂಡ್ ಅಪ್ ಎಂಬ ತಂಡವೊಂದನ್ನು ಕಟ್ಟಿಕೊಂಡು ತಮ್ಮ ಹಾಸ್ಯ ಗೋಷ್ಟಿಗಳನ್ನು ನಡೆಸುತ್ತ ಸಾಗಿರುವರು.ಇವರಲ್ಲಿ ಕಿರಣ್ ಶಾನುಭೋಗ ಕೊಪ್ಪಳ  ಜಿಲ್ಲೆಯವರು.ಮತ್ತೊಬ್ಬರು ಅಭಿಷೇಕ್ ಕೋರಿಶೆಟ್ಟರ್  ಹಾವೇರಿ ಜಿಲ್ಲೆಯವರು ಇನ್ನೊಬ್ಬರು ಪ್ರಜ್ವಲ್ ಶಿವಮೊಗ್ಗ ಜಿಲ್ಲೆಯವರು.ಇವರ ಜೊತೆಗೆ ಮುನವಳ್ಳಿಯ ಕಾರ್ತಿಕ್ ಗೋಪಶೆಟ್ಟಿ ಸದಸ್ಯನಾಗಿ ಗುರುತಿಸಿಕೊಂಡಿರುವರು.ಇವರೆಲ್ಲರೂ ಪದವಿ ವಿದ್ಯಾರ್ಥಿಗಳು.

ನಾವು ಬೆಳದು ನಮ್ಮವರು ಬೆಳೆಸುವುದೇ ಈ ತಂಡದ  ಮುಖ್ಯಗುರಿ – ಎಂದು ಹೇಳುವ ಅಭಿಷೇಕ ಕೋರಿಶೆಟ್ಟರ್/.

ಸ್ಟಾಂಡ್ ಅಪ್ ಕಾಮಿಡಿ:

ಸ್ಟಾಂಡ್ ಅಪ್ ಕಾಮಿಡಿ ಅಂದ್ರೆ ನಿಮಗೆಲ್ಲರಿಗೂ ಗೊತ್ತಿರಬಹುದು ಮೈಕ್ ಹಿಡಿದುಕೊಂಡು ನಿಂತು ಮುಂದೆ ಇರುವ ಜನಗಳನ್ನು ನಗಿಸುವುದು. ಬರೀ ನಗಿಸುವುದು ಅಷ್ಟೇ ಅಲ್ಲದೇ ಒಳ್ಳೊಳ್ಳೆ ವಿಚಾರಗಳನ್ನು ಹಂಚಿಕೊಳ್ಳುವುದು. ಸ್ಟೇಜ್ ಮೇಲೆ ನಿಂತು ಜನರನ್ನ ನಗಿಸುವುದು ಬಹಳ ಸವಾಲಿನ ಕೆಲಸವಾಗಿದೆ. ಯಾಕೆ ಅಂದರೆ ಯಾರಿಗೂ ನೋವಾಗದಂತೆ ಹಾಗೂ ಭಾವನೆಗೆ ಧಕ್ಕೆಯಾಗದಂತೆ ಮಾತನಾಡುವುದು ಸುಲಭದ ಕೆಲಸವಲ್ಲ. 

ಹಾಗಾದ್ರೆ ಏನ್ ಇದು” ಚಿಲ್ ಗುರು”?

ಈ ಸ್ಟಾಂಡ್ ಅಪ್ ಕಾಮಿಡಿ ಮಾಡಬೇಕು ಅಂಥ ಗ್ರಾಮೀಣ ಪ್ರತಿಭೆಗಳಿಗೆ ತುಂಬಾ ಅಸೆ ಇರುತ್ತೆ ಆದ್ರೆ ಅವರಿಗೆ ಸೂಕ್ತ ವೇದಿಕೆ ಸಿಗಲ್ಲ,ಪ್ರತಿ ಸಲ ಬೆಂಗಳೂರು ಅಂತಹ ದೊಡ್ಡ ಊರಿಗೆ ಹೋಗಿ ಪರ್ಫಾರ್ಮೆನ್ಸ್ ಕೊಡೋದಕ್ಕೆ ಆಗಲ್ಲಾ. ಇದನ್ನ ಗಮನಿಸಿದ ಇವರು ಕಟ್ಟಿದ ತಂಡವೇ “ಚಿಲ್ ಗುರು”

ಈ ತಂಡದಿಂದ ಇನ್ನೂ ಹೆಚ್ಚಿನ ಪ್ರತಿಭೆಗಳು ಮುಂದೆ ಬರಬೇಕು ಹಾಗೂ ಅವರ ಜೊತೆ ನಾವು ಬೆಳೆಯಬೇಕು ಎನ್ನುವುದು ಈ ತಂಡದ ಆಸೆ.

ಅಭಿಷೇಕ್ ಕೋರಿಶೆಟ್ಟರ್, ಪ್ರಜ್ವಲ್ ಪಾಟೀಲ್ ಹಾಗೂ ಕಿರಣ್ ಶಾನಭೋಗರ್ ಎಂಬ ೩ ಪದವಿ ವಿದ್ಯಾರ್ಥಿಗಳು ಈ ತಂಡವನ್ನು ಕಟ್ಟಿ ಬೆಳೆಸುತ್ತಿರುವ ಯುವ ಪ್ರತಿಭೆಗಳು.

ಈ ತಂಡವು ಈಗಾಗಲೇ ಹುಬ್ಬಳ್ಳಿ ಹಾಗೂ ವಿಜಯಪುರದಲ್ಲಿ ಓಪನ್ ಮೈಕ್ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ” ಹೌದು ಹುಲಿಯಾ” ಎಂಬ ಮೆಗಾ ಶೋ ಕೊಡ ಮಾಡಿ ಮುಗಿಸಿದೆ. ಹುಬ್ಬಳ್ಳಿಯ ಪ್ರಸಿದ್ಧ ಡಾನ್ಸ್ ಮಾಸ್ಟರ್ ಅದ ಸುಶಾಂತ್ ಕುಲಕರ್ಣಿ ಹಾಗೂ ಎಸ್ ಡಿ ಎ ಡಾನ್ಸ್ ಅಕಾಡೆಮಿ, ಬೆಳಗಾವಿಯ ಯುವ ಉದ್ಯಮಿ ಕರಣ್ ಜವಳಿ ಮತ್ತು ಹೆಸರಾಂತ ಹಾಸ್ಯ ಕಲಾವಿದ ರಾಘವೇಂದ್ರ ಆಚಾರ್ಯ ಅವ್ರು ಈ ಹೊಸ ಪ್ರತಿಭೆಗಳಿಗೆ ಬೆನ್ನೆಲುಬಾಗಿ ಪ್ರೋತ್ಸಾಹಿಸಿದರು.ಎಂದು ಹೆಮ್ಮೆಯಿಂದ ನುಡಿಯುತ್ತಾರೆ ಅಭಿಷೇಕ ಕೋರಿಶೆಟ್ಟರ್.

ಮುನವಳ್ಳಿಯಲ್ಲಿ ಈ ತಂಡ ನೀಡಿದ ಹಾಸ್ಯದ ಪ್ರಯೋಗವನ್ನು ಇಲ್ಲಿ ಸ್ವಲ್ಪ ಉದಾಹರಿಸುವೆ. ಅಭಿಷೇಕ್ ಕೋರಿಶೆಟ್ಟರ ಗ್ರಾಮೀಣ ಸೊಗಡಿನ ಹಬ್ಬಗಳ ಆಚರಣೆ ಜೊತೆಗೆ ಹಾಸ್ಯ. ಜೊತೆಗೆ ರಘು ಆಚಾರ್ಯ ತನ್ನ ವಿಶಿಷ್ಟ ಶೈಲಿಯ ಜೊತೆಗೆ ಬದುಕಿನ ಮೌಲ್ಯಗಳನ್ನು ಬಿಂಬಿಸಿದರೆ. ಶಿವಮೊಗ್ಗ ಶೈಲಿಯ ಹಾಸ್ಯ. ಕೊಪ್ಪಳ ಜಿಲ್ಲೆಯ ಹಾಸ್ಯ ಕಾರ್ತಿಕ್ ಗೋಪಶೆಟ್ಟಿ ಮುನವಳ್ಳಿಯ ತಮ್ಮ ಮನೆಯಿಂದ ಪಂಚಲಿಂಗೇಶ್ವರ ದೇವಾಲಯಕ್ಕೆ ನಡೆದುಕೊಂಡು ಬರುವಾಗ ಕಟ್ಟೆಯ ಮೇಲೆ ಕುಳಿತ ಹಿರಿಯರ ಮಾತುಗಳನ್ನು ಹಾಸ್ಯದ ರೂಪದಲ್ಲಿ  ಹೊರಹೊಮ್ಮಿಸಿದರು. ಇಡೀ ತಂಡದ ಹಾಸ್ಯ ಚುಟುಕುಗಳು ಬದುಕಿನ ಮೌಲ್ಯಗಳನ್ನು ಒಳಗೊಂಡಿದ್ದು ವಿಶೇಷವಾಗಿತ್ತು.

ಯುವಕರು ಈ ದಿಸೆಯಲ್ಲಿ ಮುಂದುವರೆದಿದ್ದು ನಿಜಕ್ಕೂ ಹೆಮ್ಮೆ ಪಡುವಂತಹ ಸಂಗತಿ. ಈ ಯುವಕರ ತಂಡವನ್ನು ನಾಡಿನ ಜನ ಪ್ರೋತ್ಸಾಹಿಸಬೇಕು, ಈ ದಿಸೆಯಲ್ಲಿ ಇವರು ಕೂಡ ಹೆಚ್ಚು ಹೊಸತನದ ಹಾಸ್ಯ ಸಂಗತಿಗಳನ್ನು ತಮ್ಮ ಹಾಸ್ಯ ಚಟುವಟಿಕೆಗಳಲ್ಲಿ ಅಳವಡಿಸಿಕೊಳ್ಳಬೇಕು.ಅಂದರೆ ಮುಂದಿನ ದಿನಗಳಲ್ಲಿ ಈ ತಂಡವು ತನ್ನ ಪ್ರತಿಭೆಗಳ ಮೂಲಕ ಉತ್ತಮ ಹೆಸರುಗಳಿಸುವುದು ಖಚಿತ. ಈ ದಿಸೆಯಲ್ಲಿ ಈ ಯುವಕರು ತಮ್ಮ ಪ್ರಯತ್ನ ಮುಂದುವರೆಸಲಿ ಎಂದು ಆಶಿಸುವೆನು.


ವೈ. ಬಿ. ಕಡಕೋಳ

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group