- Advertisement -
ಕಲ್ಲೋಳಿ: ನವದೆಹಲಿಯಲ್ಲಿ ನಡೆಯಲಿರುವ ‘ನನ್ನ ಮಣ್ಣು, ನನ್ನ ದೇಶ’ ಅಮೃತ ಕಳಸ ರಾಷ್ಟ್ರ ಮಟ್ಟದ ಕಾರ್ಯಕ್ರಮಕ್ಕೆ ಕಲ್ಲೋಳಿ ಪಟ್ಟಣ ಪಂಚಾಯತ ವತಿಯಿಂದ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸ್ವಯಂಸೇವಕ ವಿದ್ಯಾರ್ಥಿ ಕುಮಾರ ಪುಂಡಲಿಕ ವಾಲಿಕಾರ ನಿಯೋಜನೆಗೊಂಡು ಪ್ರತ್ಯೇಕ ರೈಲ್ವೆ ಮೂಲಕ ಇಂದು ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣ ಬೆಳೆಸಿದ್ದಾನೆ.
ಸಂಸ್ಥೆಯ ಅಧ್ಯಕ್ಷರಾದ ಬಸಗೌಡ ಪಾಟೀಲ, ಪ್ರಾಚಾರ್ಯರಾದ ಡಾ. ಸುರೇಶ ಹನಗಂಡಿ, ಎನ್.ಎಸ್.ಎಸ್. ಕಾರ್ಯಕ್ರಮಾಧಿಕಾರಿಗಳಾದ ಶಂಕರ ನಿಂಗನೂರ ಹಾಗೂ ಉಪನ್ಯಾಸಕರು, ಕಛೇರಿ ಸಿಬ್ಬಂದಿಗಳು ಶುಭ ಕೋರಿ ವಿದ್ಯಾರ್ಥಿಯನ್ನು ಬೀಳ್ಕೊಟ್ಟರು.