ವಾಲ್ಮೀಕಿಯ ರಾಮಾಯಣ ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದೆ: ಡಾ. ಸುರೇಶ ಹನಗಂಡಿ

Must Read

ಕಲ್ಲೋಳಿ: ಆದಿಕವಿ ವಾಲ್ಮೀಕಿ ಮಹರ್ಷಿಯ ರಾಮಾಯಣವು ಮಾನವ ಕುಲವನ್ನು ಉದ್ಧಾರ ಮಾಡಲಿಕ್ಕೆ ಹುಟ್ಟಿದ ಮಹಾಗ್ರಂಥ. ಇದರಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳು ಕಾಲಬದ್ಧವಲ್ಲ, ದೇಶಬದ್ದವಲ್ಲ, ಸಾರ್ವಕಾಲಿಕ ನಿತ್ಯ ಸತ್ಯ ಎಂದು ಪ್ರಾಚಾರ್ಯ ಡಾ. ಸುರೇಶ ಹನಗಂಡಿ ಹೇಳಿದರು.

ಅವರು ಕಲ್ಲೋಳಿ ಪಟ್ಟಣದ ಶ್ರೀರಾಮಲಿಂಗೇಶ್ವರ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್. ಘಟಕ ಹಾಗೂ ವಿವಿಧ ವೇದಿಕೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಮಹರ್ಷಿ ವಾಲ್ಮೀಕಿ ಜಯಂತಿ’ ಕಾರ್ಯಕ್ರಮದಲ್ಲಿ ಭಾವ ಚಿತ್ರಕೆ ಪೂಜೆ ಸಲ್ಲಿಸಿ ಮಾತನಾಡಿದರು.

ರಾಮಾಯಣ ರಚಿತವಾದದ್ದೇ ಧರ್ಮದ ತಾತ್ವಿಕತೆಯನ್ನು, ಆದರ್ಶವನ್ನು, ಸಮನ್ವಯತೆಯನ್ನು ಜನಸಾಮಾನ್ಯರ ವ್ಯಾವಹಾರಿಕ ಜೀವನಕ್ಕೆ ಅಳವಡಿಸಿಕೊಡಲು. ಇಲ್ಲಿಯ ರಾಮತತ್ವ ಜಾತ್ಯತೀತ, ಧರ್ವತೀತ, ಕಾಲಾತೀತ, ದೇಶಾತೀತ. ಈ ಕಾವ್ಯದ ಮೂಲಕ ವಾಲ್ಮೀಕಿ ಹೇಳಬಯಸಿರುವುದು ಮಾನವನ ಮನೋವಿಕಾಸ ಮತ್ತು ಮಾನವರ ಬದುಕಿನ ಮಾರ್ಗಸೂಚಿಯನ್ನು. ಆದರ್ಶ ತಂದೆ-ತಾಯಿಗಳು, ಆದರ್ಶ ಸಹೋದರರು, ಆದರ್ಶ ಪತಿ-ಪತ್ನಿ, ಆದರ್ಶ ಪ್ರಜೆಗಳು, ಆದರ್ಶ ರಾಜ್ಯವನ್ನು ನಿರೂಪಿಸಲು ಬೇಕಾಗಿರುವ ನ್ಯಾಯ, ನೀತಿ, ಧರ್ಮ, ಸ್ನೇಹ, ಸತ್ಯ, ಶಾಂತಿ, ಸರಳತೆ, ಭಕ್ತಿ, ಇತ್ಯಾದಿ ಆದರ್ಶಗಳೇ ಈ ಕಾವ್ಯದ ಜೀವಾಳವಾಗಿ ಮೂಡಿಬಂದಿವೆ. ಈ ಕಾವ್ಯದ ಜೀವರಸ, ಕಾವ್ಯದ ಆತ್ಮರಸ, ಕಾವ್ಯದ ಧ್ವನಿರಸ, ಕರುಣಾರಸಂ ಏಕೋರಸಂ ಎನ್ನುವಂತೆ ಕಾವ್ಯ ಕರುಣಾ ರಸದಿಂದಲೆ ಆರಂಭವಾಗಿ, ಕರುಣಾ ರಸದಿಂದಲೇ ಮುಕ್ತಾಯವಾಗುತ್ತದೆ ಎಂದರು.

ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ಶಂಕರ ನಿಂಗನೂರ ಮಾತನಾಡಿ, ವಾಲ್ಮೀಕಿ ಒಬ್ಬ ಬೇಡ, ಬೇಟೆಗಾರ. ಗುಡ್ಡಗಾಡು ತಿರುಗುವ ಅಲೆಮಾರಿ. ಕಾಯಕದಿಂದಲೇ ಕೈಲಾಸ ಎನ್ನುವಂತೆ ಬೇಟೆಗಾರನಾದ ಬೇಡನಿಗೆ ಆ ಬೇಟೆಯೆ ಅವನ ಬದುಕಿನಲ್ಲಿ ಮಹತ್ತರ ಪಾತ್ರ ವಹಿಸಿ ತಿರುವನ್ನು ಕೊಡುತ್ತದೆ. ಬೇಟೆಯಿಂದಾಗುವ ನೋವು, ಸಂಕಟ, ವಿಷಾದಗಳ ಶೋಕವೇ ಶ್ಲೋಕವಾಗಿ ವಾಲ್ಮೀಕಿ ಪರಿವರ್ತಿತನಾಗುತ್ತಾನೆ ಹಾಗೆಯೇ ನಮ್ಮ ಬದುಕಿನಲ್ಲಿಯೂ ಬದಲಾವಣೆಗಳನ್ನು ತಂದುಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದರು.

ಎಂ.ಬಿ.ಕುಲಮೂರ ಮಾತನಾಡಿ, ವಾಲ್ಮೀಕಿ ಕವಿಯಾಗಿ, ತತ್ವಜ್ಞಾನಿಯಾಗಿ, ಮಾನವೀಯ ಮೌಲ್ಯಗಳ ಹರಿಕಾರನಾಗಿ, ಭಾರತೀಯ ಸಂಸ್ಕೃತಿಯ ಸೃಷ್ಟಿಕರ್ತನಾಗಿ ಕಾವ್ಯ, ಧರ್ಮ, ನೀತಿ ಮೊದಲಾದ ಮೌಲ್ಯಗಳನ್ನು ತನ್ನ ಕೃತಿಯಲ್ಲಿ ಅನಾವರಣಗೊಳಿಸಿದ್ದಾನೆ. ಇಂತಹ ಮಹಾತ್ಮರ ಜೀವನ ನಮ್ಮೇಲ್ಲರಿಗೂ ಆದರ್ಶಪ್ರಾಯ ಎಂದು ನುಡಿದರು.

ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಿ.ಎಸ್.ಹುಗ್ಗಿ, ಡಾ. ಕೆ.ಎಸ್.ಪರವ್ವಗೋಳ, ಆರ್.ಎಸ್.ಪಂಡಿತ, ಸಂತೋಷ ಜೋಡಕುರಳಿ, ಸಂತೋಷ ಬಂಡಿ, ಎಂ.ಬಿ. ಜಾಲಗಾರ, ಗ್ರಂಥಪಾಲಕ  ಬಿ.ಬಿ.ವಾಲಿ, ರಘುನಾಥ ಮೇತ್ರಿ, ಕಛೇರಿ ಸಿಬ್ಬಂದಿಗಳಾದ ಬಿ.ಎಂ.ಶೀಗಿಹಳ್ಳಿ, ನಿರಂಜನ ಪಾಟೀಲ, ಮಂಜುನಾಥ ಗೊರಗುದ್ದಿ, ಮಹೇಶ ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group