ಜೆಸ್ಕಾಂ ಇಲಾಖೆಯ ಅವಾಂತರಕ್ಕೆ ಲೋಕಲ್ ಫಾರ್ಮ ಡೈರಿಯವರು ಸಂಕಷ್ಟಕ್ಕೆ…
ವಿದ್ಯುತ್ ಬಿಲ್ ಕಟ್ಟಿಲ್ಲವೆಂದು ಸಂಪರ್ಕ ಕಡಿತಗೊಳಿಸಿದ್ದರಿಂದ ಕೆಟ್ಟು ಹೋದ ಸುಮಾರು 3000 ಸಾವಿರ ಲೀಟರ್ ಹಾಲನ್ನು ಜೆಸ್ಕಾಂ ಕಚೇರಿಯ ಮುಂದೆ ಹಾಕುವ ಮೂಲಕ ಹಾಲಿನ ವ್ಯಾಪಾರಿಯೊಬ್ಬರು ಆಕ್ರೋಶ ಹೊರ ಹಾಕಿದ ಘಟನೆ ನಡೆದಿದೆ.
1 ಲಕ್ಷ ರೂಪಾಯಿ ಬಿಲ್ ಬಾಕಿಯಿತ್ತು. ಜೆಸ್ಕಾಂನವರು ವಿದ್ಯುತ್ ಕಡಿತಗೊಳಿಸಿದರು ಅದರಲ್ಲಿ 50 ಸಾವಿರ ರೂಪಾಯಿ ಬಿಲ್ ಹಣ ಕಟ್ಟಿ ಎಂದು ಹೇಳಿದ ಅಧಿಕಾರಿಗಳು ಬಿಲ್ ಕಟ್ಟಿದರೂ ವಿದ್ಯುತ್ ಸಂಪರ್ಕ ಕಲ್ಪಿಸದ ಹಿನ್ನೆಲೆಯಲ್ಲಿ ಹಾಲು ಕೆಟ್ಟು ಹೋದ ಪರಿಣಾಮ ಕಚೇರಿಯ ಮುಂದೆ ಹಾಲು ತಂದು ಚೆಲ್ಲಿ ಪ್ರತಿಭಟನೆ ನಡೆಸಿದರು.
ಹಾಲಿನ ಡೈರಿ ಮಾಲೀಕರಾದ ಶಾಂತಾಬಾಯಿ ಹಾಗೂ ಅಜಯ ಬಿರಾದಾರ ಅವರು ಟಂಟಂ ನಲ್ಲಿ ಸುಮಾರು 25 ಕ್ಯಾನ್ ತಂದು ಕಚೇರಿ ಮುಂದೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ನಷ್ಟಕ್ಕೆ ಅಧಿಕಾರಿಗಳೇ ಹೊಣೆ…..
ಈ ಸರ್ಕಾರದಲ್ಲಿ ಬಡವರಿಗೆ ಉಳಿಗಾಲ ಇಲ್ಲ…
ಒಂದಡೇ ಉಚಿತ ವಿದ್ಯುತ್ ಅನ್ನುತ್ತಾರೆ ಇನ್ನೊಂದಡೆ ನಾವು ವ್ಯಾಪಾರಿಗಳು ಬಿಲ್ ಕಟ್ಟಿದರು ನಮಗೆ ನ್ಯಾಯವಿಲ್ಲ ಎಂದು ಶಾಂತಾಬಾಯಿ ಕಣ್ಣೀರು ಹಾಕಿ ಬೇಸರ ವ್ಯಕ್ತಪಡಿಸಿದರು.
ಈ ಘಟನೆಯಲ್ಲಿ 6000 ಸಾವಿರ ಲೀಟರ್ ಹಾಲು ಅಂದಾಜು ಮೊತ್ತ 3ಲಕ್ಷ 60 ಸಾವಿರ ಮೌಲ್ಯದ ನಷ್ಟವಾಗಿದೆ ಎನ್ನಲಾಗಿದೆ
ವರದಿ : ನಂದಕುಮಾರ ಕರಂಜೆ, ಬೀದರ