ಬೆಂಗಳೂರು : ನವೆಂಬರ್ ತಿಂಗಳು ಪೂರ್ತಿ ಕರುನಾಡಿನಲ್ಲಿ ಕನ್ನಡದ ಹಬ್ಬ , ಕನ್ನಡ ಡಿಂಡಿಮ , ಸಿಲಿಕಾನ್ ಸಿಟಿ ಯಿಂದ ಹಿಡಿದು ಕರ್ನಾಟಕದ ಎಲ್ಲೆಡೆ ಕನ್ನಡ ರಾಜ್ಯೋತ್ಸವದ ಮೆರುಗು ಹಾಗೂ ಕನ್ನಡದ ಕಂಪು – ಕನ್ನಡದ ಇಂಪಿನ ಬಗ್ಗೆ ಮಾತು ಹಾಗೂ ನವೆಂಬರ್ ಮಾಸ ಪೂರ್ತಿ ಕನ್ನಡದ ,ಕನ್ನಡಿಗರ ಹಬ್ಬ – ಕರುನಾಡಿನಲ್ಲಿ !!
ಬೆಂಗಳೂರು ನಗರದ ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಲ್ಲಿ ನಿಮಗೆ ಕನ್ನಡದ ಪ್ರೇಮಿಯೊಬ್ಬರು ಸಿಗುತ್ತಾರೆ ಅವರು ಸತತ 28 ವರುಷಗಳಿಂದ ಅವರದೇ ಆದ ರೀತಿಯಲ್ಲಿ ತಾಯಿ ಭುವನೇಶ್ವರಿ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ .
ಅವರು ವೃತ್ತಿಯಲ್ಲಿ ಆಟೋ ಚಾಲಕ ,ಇರುವುದು ಸಿಲಿಕಾನ್ ಸಿಟಿ ಯ ‘ಇಟ್ಟಮಡೂ’ ವಿನಲ್ಲಿ.
ಬನಶಂಕರಿ 3 ನೇ ಹಂತದ ಜನತಾ ಬಜಾರ್ ನಿಂದ ಇಟ್ಟ ಮಡೂ ವಿಗೆ ಹೋಗುವ ಬಸ್ ನಿಲ್ದಾಣದಲ್ಲಿ ಇರುವ ಆಟೋ ನಿಲ್ದಾಣದಲ್ಲಿ ನವೆಂಬರ್ ತಿಂಗಳ ಮುಸ್ಸಂಜೆ ಹೊತ್ತಿನಲ್ಲಿ ನಿಂತಿತ್ತು ಕನ್ನಡದ ತೇರು , ಸುತ್ತ ಮುತ್ತ ನೋಡುತ್ತಾ ನಿಂತೆ ಆಗ ಅಲ್ಲಿಗೆ ಬಂದ ರವಿ ಕುಮಾರ್ ಇನ್ನೇನು ಕನ್ನಡದ ತೇರು ಹತ್ತಿ ಹೊರಟಿದ್ದರು ಆಗ ಅವರ ಜೊತೆ ಮಾತು ಆರಂಭ ವಾಗಿತ್ತು ,ಅವರ ಕನ್ನಡದ ತೇರು ಮತ್ತು ಹಾಗೂ ಅವರ ಕನ್ನಡಾಭಿಮಾನದ ಬಗ್ಗೆ “ಟೈಮ್ಸ್ ಆಫ್ ಕರ್ನಾಟಕ” .ಇನ್ ಆನ್ ಲೈನ್ ಪತ್ರಿಕೆ ಮಾತು ಕತೆ ನಡೆಸಿದ್ದು ಅವರ ಕುರಿತ ಲೇಖನ ಇಲ್ಲಿದೆ
ಹೊಸಕೋಟೆಯ ವೆಂಕಟರಮಣ ಮತ್ತು ಶ್ರೀಮತಿ ನಂಜಮ್ಮ ದಂಪತಿ ಪುತ್ರರಾಗಿ 1972ರಲ್ಲಿ ರವಿಕುಮಾರ್ ಜನಿಸಿದರು.
ಓದಿದ್ದು 7 ನೇ ತರಗತಿವರೆಗೆ ಆದರೆ ತಾವು ಹುಟ್ಟಿದ್ದ ನಾಡಿನ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಹಾಗೂ ಕನ್ನಡ ಭಾಷೆಯ ಮೇಲೆ ಪ್ರೇಮ !!
( 2020 ರ ) ಈಗ ಭಾರತಕ್ಕೆ ಬಂದು ಎರಗಿರುವ ಕರೊನಾ – ಇವರು ನಾಡಿಗೆ ಕರೊನಾ ಸಂಕಷ್ಟ ಎದುರಾಗಿ ಆಟೋ ಬಾಡಿಗೆ ಕಡಿಮೆ ಆಗಿದೆ ಆದರೂ ಕುಗ್ಗದೆ ಸತತ 28 ವರುಷ ಗಳಿಂದ ತಾವು ಮಾಡಿ ಕೊಂಡು ಬಂದಿರುವ ಕನ್ನಡಾಂಬೆಯ ಸೇವೆಯನ್ನು ಕೈ ಬಿಡದೆ ಅವರ ಆಟೋ ರಿಕ್ಷಾ ಗೆ ಅಂದರೆ ಅವರ’ ಕನ್ನಡದ ತೇರು’ ಅದನ್ನು ಈ ಬಾರಿಯ ಸಿಂಗಾರ ಮಾಡಿ ನವೆಂಬರ್ ತಿಂಗಳು ಪೂರ್ತಿ ಸಿಲಿಕಾನ್ ಸಿಟಿ ತುಂಬಾ ಕನ್ನಡದ ತೇರಿನಲ್ಲಿ ಸಂಚಾರ ಮಾಡುತ್ತಾ ಹೊಟ್ಟೆ ಪಾಡಿಗೆ ಆಟೋ ರಿಕ್ಷಾ ಚಾಲನೇ ಮಾಡುತ್ತಾ ಕನ್ನಡದ ಕಂಪನ್ನು 28 ವರುಷಗಳಿಂದ ಹಂಚುತ್ತಾ ಇದ್ದಾರೆ ಕನ್ನಡ ಪ್ರೇಮಿ ರವಿ ಕುಮಾರ್ .!!
ನೆಲ – ಜಲ – ಭಾಷೆ ಗಾಗಿ ಅವರನ್ನೇ ಸಮರ್ಪಣೆ ಮಾಡಿಕೊಂಡಿದ್ದಾರೆ ಅವರೇ ರವಿ ಕುಮಾರ್ ಎಂಬ ಕನ್ನಡಾಭಿಮಾನಿ .
ಸತತ 28 ವರ್ಷಗಳಿಂದ ಕನ್ನಡ ತಾಯಿಯ ಸೇವೆ ಮಾಡುತ್ತಾ ಅವರ ಆಟೋಗೆ ಬಾಡಿಗೆಗೆ ಬರುವ ಅನ್ಯ ಭಾಷಿಕರಿಗೆ ಕನ್ನಡವನ್ನು ಹೇಳಿಕೊಡುವ ಕಾಯಕ ಮಾಡುತ್ತಾ ಹೊಟ್ಟೆ ಪಾಡಿಗೆ ಆಟೋ ಚಾಲಕ ವೃತ್ತಿ ನಿಭಾಯಿಸುತ್ತಾ ಎಲೆ ಮರೆಯ ಕಾಯಿ ಆಗಿ ತಾಯಿ ಕನ್ನಡಾಂಬೆಯ ಅಭಿಮಾನವನ್ನು ಕನ್ನಡದ ನಾಡಿನಲ್ಲಿ ಕನ್ನಡ ಸಾಹಿತ್ಯ ದ ಕಂಪನ್ನು ಪಸರಿಸುತ್ತಾ ಇದ್ದಾರೆ ರವಿ !!
ನವೆಂಬರ್ ತಿಂಗಳಲ್ಲಿ ಅವರ ಆಟೋ ವನ್ನು ಕನ್ನಡ ದ ತೇರು ಮಾಡಿ ಆಟೋ ರಿಕ್ಷಾವನ್ನು ವಿಶೇಷವಾಗಿ ಹೂವಿನಿಂದ ಅಲಂಕಾರ ಮಾಡಿ ತಾಯಿ ಭುವನೇಶ್ವರಿ ಯ ಛಾಯಾ ಚಿತ್ರವನ್ನು ಆಟೋ ಮೇಲ್ಭಾಗದಲ್ಲಿ ಕಟ್ಟಿ ಸಿಲಿಕಾನ್ ಸಿಟಿ ಯಲ್ಲಿ ಕನ್ನಡ ಪ್ರೇಮ ವನ್ನು ಮೆರೆಯುತ್ತಾರೆ ಕನ್ನಡ ದ ಅಭಿಮಾನಿ ಆಟೋ ಚಾಲಕ ರವಿ ಕುಮಾರ್ .
ಕನ್ನಡ ಭಾಷೆ ,ನೆಲ , ಜಲ ವನ್ನು ಶ್ರೀಮಂತ ಗೊಳಿಸುವ ನಿಟ್ಟಿನಲ್ಲಿ ಸಾಗುತ್ತಿರುವ ಇವರ ಪಯಣಕ್ಕೆ ಹೃದಯ ಪೂರ್ವಕ ಅಭಿನಂದನೆಗಳು ಸಲ್ಲಿಸೋಣ ಅಲ್ಲವೇ ??
ತೀರ್ಥಹಳ್ಳಿ, ಅನಂತ ಕಲ್ಲಾಪುರ
[…] ಕನ್ನಡದ ತೇರೆಳೆವ ಆಟೋಚಾಲಕ ರವಿ ಕುಮಾರ್!! […]