ಸಿಂದಗಿ: ಮಕ್ಕಳು ಮೊಬೈಲ್ ಗೀಳಿನಿಂದ ಸಮಾಜ ಹಾಳು ಮಾಡಿಕೊಳ್ಳುವದಕ್ಕಿಂತ ಸಾತ್ವಿಕ ಬದುಕಿಗೆ ಆಧ್ಯಾತ್ಮಿಕ ಸಂಸ್ಕೃತಿ ಬೆಳೆಸಿಕೊಳ್ಳುವುದು ಇಂದಿನ ದಿನಮಾನಕ್ಕೆ ಅಗತ್ಯವಾಗಿದೆ ಎಂದು ತಾಲೂಕು ದಂಡಾಧಿಕಾರಿ ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ ಹೇಳಿದರು.
ತಾಲೂಕಿನ ಸುಕ್ಷೇತ್ರ ಚಿಕ್ಕಸಿಂದಗಿ ಗ್ರಾಮದಲ್ಲಿ ಶ್ರೀ ಸದ್ಗುರು ವೀರೇಶ್ವರ ಮಹಾ ಶಿವಯೋಗಿಗಳ 83ನೇ ಪುಣ್ಯಸ್ಮರಣೋತ್ಸವದ ಹಾಗೂ ಜಾತ್ರಾ ಮಹೋತ್ಸವದ ನಿಮಿತ್ತವಾಗಿ ಎಮ್ಮಿಗನೂರು ಜಡೆಸಿದ್ದೇಶ್ವರ ಮಹಾ ಶಿವಯೋಗಿಗಳ ಪುರಾಣ- ಪ್ರವಚನದಲ್ಲಿ ಭಾಗವಹಿಸಿ ಮಾತನಾಡಿ, ಆಧ್ಯಾತ್ಮಿಕ ವಚನಗಳ ವಿಚಾರ ಎಲ್ಲವು ಜೀವನದ ಶೈಲಿಗಳಲ್ಲಿ ಅತ್ಯುತ್ತಮ ವಿಚಾರ ಪುರಾಣ ಪ್ರವಚನದಲ್ಲಿ ಶರಣರ ಸಂತರ ಶಿವಯೋಗಿಗಳ ಜೀವನ ದರ್ಶನದೊಂದಿಗೆ ಅವರ ವಿಚಾರಧಾರೆಗಳು ಮತ್ತು ಅನುಭವ ನುಡಿಗಳು ಆಲಿಸಿ ಸಮಾಜದಲ್ಲಿ ಶಾಂತಿ ಸಹನೆ ಹಾಗೂ ಸಮರಸದ ಜೀವನ ಸಾಗಿಸಲು ಆಧ್ಯಾತ್ಮಿಕ ನಿತ್ಯ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದರು.
ತಾಳಿಕೋಟಿಯ ಹಿರೂರ ಶ್ರೀ ಅನ್ನ ದಾನೇಶ್ವರ ಸಂಸ್ಥಾನ ಹಿರೇಮಠದ ಶ್ರೀ ಷ.ಬ್ರ.ಜಯಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಸದ್ಗರು ವೀರೇಶ್ವರ ಶಿವಯೋಗಿಗಳು ಹಾಕಿ ಕೊಟ್ಟಿರುವ ಸನ್ಮಾರ್ಗದಲ್ಲಿ ನಡೆಯಬೇಕು. ಗುರುವಿನ ಕುರಿತು ಶ್ರದ್ಧೆ ಭಕ್ತಿಯಿಂದ ನೆನೆಯುವ ಮೂಲಕ ಸದ್ಗುರು ವೀರೇಶ್ವರ ಶಿವಯೋಗಿಗಳ ತತ್ವ ಜೀವನದಲ್ಲಿ ರೂಡಿಸಿ ಕೊಳ್ಳಬೇಕು. ಸಮಾಜದಲ್ಲಿ ದಾನ ಧರ್ಮ ಪರೋಪಕಾರದಲ್ಲಿ ಭಾಗವಹಿಸಬೇಕು ಎಂದರು.
ಗ್ರಾಮದ ಹಿರೇಮಠದ ಶಂಕ್ರಯ್ಯ ಗುರಲಿಂಗಯ್ಯ ಹಿರೇಮಠ,ಸದ್ಗುರು ವಿರೇಶ್ವರ ಮಠದ ಪ್ರಮುಖ ಅರ್ಚಕ ಬಸಯ್ಯ ಈರಯ್ಯ ಮಠವತಿ ವೇದಿಕೆ ಮೇಲೆ ಇದ್ದರು. ವಿಜಯಪುರದ ನಗರ ಸಭೆ ಸದಸ್ಯ ಮಲ್ಲಿಕಾರ್ಜುನ ಗಡಗಿ, ಮಲ್ಲಿಕಾರ್ಜುನ ಪೂಜಾರಿ, ಸೂರ್ಯಕಾಂತ ಗುರುಪಾದಪ್ಪ ಗಡಗಿ, ಗೌಡಪ್ಪಗೌಡ ಯಮನಪ್ಪಗೌಡ ಪಾಟೀಲ, ನಾಗೊಂಡಪ್ಪಗೌಡ ಪಾಟೀಲರಿಗೆ ಸನ್ಮಾನಿಸಿ ಗೌರವಿಸಿದರು.
ಬಸವಣ್ಣನಾಗಿ ಗುರುನಾಥ ಮೈಂದರಗಿ, ಮಹಾಂತೇಶ ಕಾಳಗಿ, ಕೆರೂಟಗಿಯ ಖ್ಯಾತ ಸಂಗೀತ ಶಿಕ್ಷಕ ರೇಣುಕಾಚಾರ್ಯ ಹಿರೇಮಠ ಸೇವೆ ನೆರವೇರಿಸಿದರು.
ಅಖಿಲ ಭಾರತ ಗಾಣಿಗ ಸಮಾಜದ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರಕಾಶ ತುಪ್ಪದ ಸ್ವಾಗತಿಸಿದರು. ರುದ್ರಗೌಡ ಮಾಗಣಗೇರಿ ನಿರೂಪಿಸಿದರು. ಚಂದ್ರಕಾಂತ ರಾಮಗೊಂಡ ವಂದಿಸಿದರು.
ಈ ಸಂದರ್ಭದಲ್ಲಿ ಅಶೋಕಗೌಡ ಪಾಟೀಲ, ಬಿ.ಟಿ.ಪಾಟೀಲ, ರೇವಣಸಿದ್ದಪ್ಪ ಚನ್ನೂರ, ಪೀರಪ್ಪ ಮಾಗಣಗೇರಿ, ಮಲ್ಕಣ್ಣ ಕಿರಣಗಿ, ಪರಸುರಾಮ ರಾಮಗೊಂಡ, ಪರಸು ಹಿಪ್ಪರಗಿ, ಸಿದ್ದಪ್ಪ ಬಮ್ಮನಳ್ಳಿ, ಶಂಕರಲಿಂಗ ನಿಗಡಿ, ಶಿವಣ್ಣ ಬುಶೇಟ್ಟಿ, ಎಂ.ಜೆ.ಮಾಗಣಗೇರಿ, ಬಸಪ್ಪ ನಾಗಾವಿ, ಶ್ರೀಶೈಲ ಅರಳಗುಂಡಗಿ, ಶ್ರೀನಿವಾಸ ಓಲೇಕಾರ, ಮನೋಹರ ರೂಗಿ, ಬಸವರಾಜ ಅಗಸರ ಹಾಗೂ ಅಪಾರ ಸರ್ವ ಭಕ್ತರು ಇದ್ದರು