ಅಖಿಲ ಭಾರತ ಸರ್ವ ಸೇವಾ ಸಂಘದ 90 ನೇ ಅಧಿವೇಶನದಲ್ಲಿ ಚಂದನ ಪಾಲ್ ಅವರನ್ನು ಅಧ್ಯಕ್ಷರಾಗಿ ಎರಡನೇ ಅವಧಿಗೆ ಅವಿರೋಧ ಆಯ್ಕೆ ಮಾಡಲಾಗಿದೆ.
ಮಹಾರಾಷ್ಟ್ರ ರಾಜ್ಯದ ವಾರ್ಧ ಜಿಲ್ಲಾ ಸೇವಾ ಗ್ರಾಮ ಗಾಂಧೀ ಆಶ್ರಮ ಪರಿಸರದಲ್ಲಿ ಇದೇ 5,6,7 ರಂದು ನಡೆದ ಸಮ್ಮೇಳನದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ರಾಜ್ಯ ಸರ್ವೋದಯ ಮಂಡಲದ ಅಧ್ಯಕ್ಷ ಡಾ.ಹೆಚ್. ಎಸ್. ಸುರೇಶ್, ಕಾರ್ಯದರ್ಶಿ ಡಾ. ಯ. ಚಿ. ದೊಡ್ಡಯ್ಯ , ಮಂಡ್ಯ ಜಿಲ್ಲಾ ಸರ್ವೋದಯ ಮಂಡಲ ಅಧ್ಯಕ್ಷ ಪ್ರೊ. ಕೆ. ನಾಗಾನಂದ ,ಪೂರ್ವಾಧ್ಯಕ್ಷ ಎಂ ಬೋರೇ ಗೌಡ , ಎಂ . ಎಲ್.ರಮೇಶ್,
ಸಹ ಕಾರ್ಯದರ್ಶಿ, ಗಾಂಧೀ ಸರ್ವೋದಯ ವಿಚಾರ ಕೇಂದ್ರ, ಮಂಡ್ಯ , ತುಮಕೂರು ಜಿಲ್ಲೆಯ ಅಧ್ಯಕ್ಷ ಆರ್.ವಿ. ಪುಟ್ಟಕಾಮಣ್ಣ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಧ್ಯಕ್ಷ ಡಾ.ವಿ ಪ್ರಶಾಂತ್,ಕಾರ್ಯದರ್ಶಿ ವಿ .ಎನ್.ಸೂರ್ಯ ಪ್ರಕಾಶ್, ಶಿವಮೊಗ್ಗ ಜಿಲ್ಲೆಯ ಅಧ್ಯಕ್ಷ ಭಗವಂತ ರಾವ್, ಗೌರವ ಅಧ್ಯಕ್ಷ ಎಂ ಎನ್ ಸುಂದರ ರಾಜ್, ಉಪಾಧ್ಯಕ್ಷ ಬಸವರಾಜಪ್ಪ ಕಂದಗಾಲ್, ಡಾ.ಹೆಚ್.ಎಂ. ನಾಗಾರ್ಜುನ ಮತ್ತು ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆ, ಶಿಡ್ಲಘಟ್ಟ ಪ್ರ.ದ ಕಾಲೇಜು , ನಾಗಾರ್ಜುನ ಮ್ಯಾನೆಜ್ಮೆಂಟ್ ಕಾಲೇಜು ಚಿಕ್ಕಬಳ್ಳಾಪುರ ಕಾಲೇಜುಗಳನ್ನು ಪ್ರತಿನಿಧಿಸಿ ಹತ್ತೊಂಬತ್ತು ವಿದ್ಯಾರ್ಥಿ – ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಕರ್ನಾಟಕ ಸರ್ವೋದಯ ಮಂಡಲ ಕಾಲೇಜು ಯುವಜನರನ್ನು ತಲುಪಲು ಹಲವು ಹತ್ತು ಕಾರ್ಯಕ್ರಮಗಳ ಕುರಿತು ಚಂದನ್ ಪಾಲ್ ಮೆಚ್ಚುಗೆಯ ನುಡಿಗಳನ್ನು ನುಡಿದರು .ಸಮಾವೇಶದಲ್ಲಿ ಇನ್ನೂರಕ್ಕೂ ಮಿಕ್ಕಿ ಪ್ರತಿನಿಧಿಗಳು ಹಾಜರಿದ್ದರು .