spot_img
spot_img

ದೀಪದ ಬೆಳಕು ಕಂಡಾಗ ಮನಸ್ಸು ಮಂದಿರವಾಗುತ್ತದೆ

Must Read

- Advertisement -

ಒಂದು ದೀಪದಿಂದ ಇನ್ನೊಂದು ದೀಪ ಬೆಳಗಬೇಕು ದೀಪಗಳ ಸಾಲಿನಲ್ಲಿ ಹೆಚ್ಚಿನ ಬೆಳಕನ್ನು  ಕಂಡಾಗ ಮನೆ ಮನಸ್ಸು ಮಂದಿರವಾಗುತ್ತದೆ. ಆ ಮಂದಿರದೊಳಗೆ ಅಡಗಿರುವ ಆತ್ಮಜ್ಯೋತಿಯ ಕಡೆಗೆ ನಡೆಯುವುದೇ  ಮಾನವನ ಜೀವನದ ಗುರಿಯಾಗಿದೆ.

ಇದಕ್ಕಾಗಿ ಪ್ರಕೃತಿಯ ಬಿಂದುಗಳಾಗಿರುವ ಎಣ್ಣೆ, ಬತ್ತಿ, ಹಣತೆಯ ಸಹಾಯದಿಂದ  ದೀಪ ಎಷ್ಟು ಹಚ್ಚುವೆವೋ ಅಷ್ಟು ಪ್ರಕೃತಿಯಲ್ಲಿ ಬದಲಾವಣೆ ಆಗುತ್ತದೆ. ಇದು ಶುದ್ದವಾಗಿದ್ದರೆ ಮನಸ್ಸಿನ ಶುದ್ದತೆ ಹೆಚ್ಚುವುದು. ಅಶುದ್ದವಾಗಿರಬಾರದು. ಎಂದರೆ ಹಚ್ಚುವ ಹಣತೆ, ಎಣ್ಣೆ, ಬತ್ತಿಯಲ್ಲಿಯೂ ಶುದ್ದಾಶುದ್ದತೆಯಿರುವುದೆನ್ನುವ ಮಟ್ಟಿಗೆ ನಮ್ಮ ಹಿಂದಿನವರು ಗುರುತಿಸುತ್ತಿದ್ದರು. ಈಗ ಅಷ್ಟು ಶುದ್ದವಾಗಿಲ್ಲದಿದ್ದರೂ ಹಚ್ಚುವಾಗ ನಮ್ಮಲ್ಲಿ ಭಕ್ತಿ ಶ್ರದ್ದೆ ಯಿದ್ದರೆ  ಸಾಕು. ಎಲ್ಲಾ ಪರಮಾತ್ಮನೇ   ನೋಡಿಕೊಳ್ಳುವನು. ದೀಪದ ಮೂಲಕವೇ  ಜೀವಾತ್ಮನ ಸಂದೇಶ ಪರಮಾತ್ಮನಿಗೆ ತಲುಪುವುದು. ಇದೇ ಕಾರಣಕ್ಕಾಗಿ ಸಾಧಾರಣವಾಗಿ ವಿಶೇಷ ದಿನಗಳಲ್ಲಿ ದೀಪ ಹೆಚ್ಚಾಗಿ ಬೆಳಗಿಸುವರು. ಅಶುದ್ದ ದಿನಗಳಲ್ಲಿ  ಮನೆಯಲ್ಲಿ ದೀಪ ಬೆಳಗಬಾರದೆನ್ನುವರು.

ಸನಾತನ ಹಿಂದೂ ಧರ್ಮದಲ್ಲಿ ಇದರ ಮಹತ್ವವನ್ನು ತಿಳಿಸಿದ್ದಾರೆ. ಮೇಣದ ದೀಪಕ್ಕೂ ಎಣ್ಣೆಯ ದೀಪಕ್ಕೂ ಬಹಳ ವ್ಯತ್ಯಾಸವಿದೆ. ದೀಪ ಎಲ್ಲಾ ಪಾಪಕರ್ಮಗಳನ್ನು  ಕಳೆಯುವ ಸಾಧನವಾಗಿದೆ. ಇದು ಪ್ರಕೃತಿ ಪುರುಷರ ನಡುವೆ ಸಂದೇಶ ಕಳಿಸುವ ಸಂವಹನ ಸಾಧನವೆಂದರೆ ಸರಿಯಾಗಬಹುದು.

- Advertisement -

ಧನತ್ರಯೋದಶಿಯಂದು ಧನ್ವಂತರಿಯ ಜೊತೆಗೆ ಕುಬೇರನ ಪೂಜೆ ನಡೆಯುತ್ತದೆ. ಆರೋಗ್ಯವಿದ್ದರೆ ತಾನೆ ಹಣ ಸಂಪತ್ತು. ಮಾರನೆದಿನ ಅತಿಯಾದ ಹಣಸಂಪತ್ತಿನಿಂದ  ರಾಜನಾದಾಗ ಹೆಣ್ಣು ಹೊನ್ನು ‌ಮಣ್ಣಿಗಾಗಿ ಸ್ವಾರ್ಥ ಅಹಂಕಾರ ಬೆಳೆದು ಅಸುರನಾಗಿದ್ದ ನರಕಾಸುರನ ವಧೆ ಮಾಡಿದ ದಿನ ನರಕ ಚತುರ್ದಶಿ ನಂತರ ಅಸುರನಿಂದ ಬಿಡುಗಡೆ ಪಡೆದ ಲಕ್ಷ್ಮಿ ಸ್ವರೂಪರಾದ ಸ್ತ್ರೀ ಯರಿಗೆ‌ಮುಕ್ತಿ  ಸಿಕ್ಕಿ , ಶ್ರೀ ಕೃಷ್ಣ ಪರಮಾತ್ಮನು ಹದಿನಾರುಸಾವಿರ  ಮಹಿಳೆಯರನ್ನು ಅಸುರನಿಂದ ಬಿಡುಗಡೆ ಮಾಡಿ ಎಲ್ಲರನ್ನೂ ಮದುವೆ ಆಗಿ ಲಕ್ಷ್ಮಿ ಸ್ಥಾನ ಕೊಟ್ಟದ್ದು  ಯಾವುದೇ ಕಾಮದಿಂದಲ್ಲ ಎನ್ನುವ ಸತ್ಯ ಸತ್ವ ತತ್ವವನರಿತರೆ ಲಕ್ಮಿ ಸ್ವರೂಪರಾದ ಹೆಣ್ಣಿನಿಂದಲೇ ಧರ್ಮ ರಕ್ಷಣೆ ಸಾಧ್ಯ. ಅಮವಾಸ್ಯೆಯಂದು ಧನಲಕ್ಮಿ ಪೂಜೆ ನಡೆಯುತ್ತದೆ. ಮಾರನೆ ದಿನ ಬಲಿಪಾಡ್ಯಮಿ  ಬಲಿ ಚಕ್ರವರ್ತಿಯಂತೆ ಅಧಿಕ ದಾನ ಮಾಡಿದರೂ ಕಷ್ಟ ಎನ್ನುವ ಸಂದೇಶ ಹೊತ್ತು ಬಂದಿರುವ ಬಲಿಪಾಡ್ಯಮಿಯಲ್ಲಿ ದೀಪಾವಳಿಯ ಸಡಗರ ಸಂಭ್ರಮದ ಆಚರಣೆಯ ಹಿಂದಿರುವ ಸಂದೇಶಗಳು ನಾವು ಅರ್ಥ ಮಾಡಿಕೊಂಡರೆ ಪ್ರತಿದಿನವೂ ಇಂತಹ ದೇವಾಸುರರು‌ ಮಾನವರ ಒಳಗೂ ಹೊರಗೂ ಸುಳಿದಾಡುತ್ತಿದ್ದರೂ ಗಮನಿಸುವಷ್ಟು ಸಮಯವಿಲ್ಲದ ಕಾರಣ ಈ ಹಬ್ಬ ಹರಿದಿನಗಳು ಹೆಚ್ಚಾಗಿದೆ. ಮಕ್ಕಳಿಗೆ ಸರಿಯಾದ‌ ರೀತಿಯಲ್ಲಿ ದೈವಶಕ್ತಿ ಅಸುರಿ ಶಕ್ತಿಯ ಬಗ್ಗೆ ತಿಳಿಸಿ ಬೆಳೆಸಿದರೆ‌ ಭೂಮಿಯಲ್ಲಿ ಧರ್ಮ ರಕ್ಷಣೆ‌ಕಾಲಕ್ಕೆ ತಕ್ಕಂತೆ ನಡೆದಿರೋದು  ಕಾಣಬಹುದು.

ಒಂದೊಂದು ದೀಪವೂ ಶ್ರೇಷ್ಟವಾಗಿದೆ. ಆದರೂ ಅದರ ಒಳಗೆ ಏನಿದೆ ಎನ್ನುವುದು ಕಣ್ಣಿಗೆ ಕಾಣದಾಗಿದೆ. ಈ ದೀಪಾವಳಿಯ ಸಕಲರಿಗೂ ಬೆಳಕು ನೀಡಿ ಸನ್ಮಂಗಳ ಉಂಟುಮಾಡಲಿ.


ಶ್ರೀಮತಿ ಅರುಣ ಉದಯಭಾಸ್ಕರ, ಬೆಂಗಳೂರು

- Advertisement -
- Advertisement -

Latest News

ಮನೋಜ್ಞ ಅನುಭೂತಿಯ ವಿಶ್ವ ಧ್ಯಾನದ ದಿನಾಚರಣೆ 

      ಮೈಸೂರಿನ ಮಾನಸಗಂಗೋತ್ರಿಯು ಇಂದು ಮನಸ್ಸನ್ನು ಮುದಗೊಳಿಸುವ ಅಪರೂಪದ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು. ವಿಶ್ವ ಸಂಸ್ಥೆಯು 21 ಡಿಸೆಂಬರ್ ವಿಶ್ವ ಧ್ಯಾನದ ದಿನವನ್ನಾಗಿ ಆಚರಿಸಲು...
- Advertisement -

More Articles Like This

- Advertisement -
close
error: Content is protected !!
Join WhatsApp Group