ಸೋಲಿನ ಹತಾಶೆಯಲ್ಲಿದ್ದಾರೆ ಕುಮಾರಸ್ವಾಮಿ – ಖಂಡ್ರೆ

Must Read

ಬೀದರ – ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ ಸೋಲಿನ ಹತಾಶ ಭಾವನೆಯಿಂದ ಹೇಳಿಕೆ ನೀಡುತ್ತಾರೆ. ರಾಜ್ಯದಲ್ಲಿ ಜೆಡಿಎಸ ಪಕ್ಷ ದೂಳಿ ಪಟ ಆಗಿದ್ದು ಅದೇ ಹತಾಶೆಯಿಂದ  ಕರ್ನಾಟಕದ ಮಾನ ಹರಾಜು ಮಾಡುವ ಕೆಲಸ ಕುಮಾರಸ್ವಾಮಿ ಮಾಡಬಾರದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.

ಬೀದರನಲ್ಲಿ ಪತ್ರಕರ್ತರೊಡನೆ ಮಾತನಾಡಿದ ಅವರು, ನಮ್ಮ ರಾಜ್ಯದ ಮುಖ್ಯಮಂತ್ರಿ ಉಪಮುಖ್ಯ ಮಂತ್ರಿ ಬಗ್ಗೆ ಅವಹೇಳನ ಕಾರಿ ಮಾತು ಆಡಬಾರದು. ಕುಮಾರಸ್ವಾಮಿ ಹೇಳಿಕೆ ಇಡೀ ರಾಜ್ಯದ ಜನರಿಗೆ ದ್ರೋಹ ಮಾಡಿದ ಹಾಗೆ ಎಂದರು.

ಕರ್ನಾಟಕ ರಾಜ್ಯದ ಹೆಸರಿನಲ್ಲಿ ನೂರಾರು ಕೋಟಿ ಸಾಲ ತೆಗೆಯಲು ಹೊರಟಿರುವ ಮುಖ್ಯ ಮಂತ್ರಿ ಸಿದ್ಧರಾಮಯ್ಯ ವಿರುದ್ಧ ಕುಮಾರಸ್ವಾಮಿ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಖಂಡ್ರೆ, 

ರಾಜ್ಯದಲ್ಲಿ ಹಲವಾರು ಯೋಜನೆ ಅನುಷ್ಠಾನಕ್ಕೆ ತರಲು  ಹಣದ ಅವಶ್ಯಕತೆ ಇದೆ. ಗ್ಯಾರಂಟಿ ಯೋಜನೆ ರಾಜ್ಯದ ಬಡವರ ಬಗ್ಗೆ ಇದೆ. ಗೃಹ ಲಕ್ಷ್ಮಿ ಯೋಜನೆ ಅನುಷ್ಠಾನಕ್ಕೆ ತರಲು ಹಣದ ಅವಶ್ಯಕತೆ ಇದೆ. ಸಾಲ ಮಾಡಲು ಕಾನೂನಿನಲ್ಲಿ ಅವಕಾಶ ಇದೆ ರಾಜ್ಯದ ಜನರಿಗೋಸ್ಕರ ಸಾಲ ಮಾಡುತ್ತೇವೆ ಎಂದು ನುಡಿದ ಅವರು, ಹಿಂದಿನ ಸರ್ಕಾರ ಸಾಲ ಮಾಡಿಲ್ಲವಾ ಎಂದು ಪ್ರಶ್ನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group