ಜಿಲ್ಲೆಗೊಂದು ಕಾನೂನು, ಹುಮನಾಬಾದಗೊಂದು ಕಾನೂನಾ? ; ಸಿದ್ದು ಪಾಟೀಲ ಪ್ರಶ್ನೆ

Must Read

ಬೀದರ – ಜಿಲ್ಲೆಯ ಹುಮನಾಬಾದ ತಾಲೂಕಾ ಪಂಚಾಯತ ಕಾರ್ಯಾಲಯದಲ್ಲಿ ನಡೆದ ಕೆಡಿಪಿ‌ ಸಭೆಯಲ್ಲಿ ಬಿಜೆಪಿ ಶಾಸಕ ಸಿದ್ದು ಪಾಟೀಲರು ಅಧಿಕಾರಿಗಳು‌ ಹಾಗೂ ಸರ್ಕಾರದ ವಿರುದ್ದ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ ಪ್ರಸಂಗ ನಡೆಯಿತು.

ಜಿಲ್ಲೆಗೊಂದು ಕಾನೂನು, ಹುಮನಾಬಾದ್‌ಗೆ ಒಂದು ಕಾನೂನು ಇರುತ್ತಾ ಎಂದು ಪ್ರಶ್ನಿಸಿದ ಅವರು, ಒಂದು ಗಂಟೆ ತಡವಾಗಿದ್ದಕ್ಕೆ ಕೆಡಿಪಿ ಸಭೆ ಮುಂದೂಡಿ ಅಂತಾ ಎಮ್‌ಎಲ್‌ಸಿಗಳು ಪತ್ರ ಬರೀತಾರೆ.

ಅದೇ ಉಸ್ತುವಾರಿ ಸಚಿವರು, 2 ಗಂಟೆ ತಡವಾಗಿ ಬಂದರೂ, ಸಭೆ ಮುಂದುವರೆಸುತ್ತಾರೆ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. 

ಹುಮನಾಬಾದ್ ತಾಲೂಕು ಅಧಿಕಾರಿಗಳು ಸರ್ಕಾರದ ಏಜೆಂಟ್ ಆಗಿದ್ದಾರೆ. ಕಲೆಕ್ಷನ್ ಎಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಕಿಡಿ ಕಾರಿದ ಅವರು, 

ಪರೋಕ್ಷವಾಗಿ ಮಾಜಿ ಸಚಿವ ರಾಜಶೇಖರ ಪಾಟೀಲ ಕುಟುಂಬದ ವಿರುದ್ದ ವಾಗ್ದಾಳಿ ನಡೆಸಿದರು.

ಇಬ್ಬರು ಎಮ್‌ಎಲ್‌ಸಿ‌ಗಳು ಸಭೆ ಮುಂದೂಡಿ ಅಂತ ಪತ್ರ ಬರೆದಿದ್ದಾರೆ. ಹುಮನಾಬಾದ್ ಜನಪ್ರತಿನಿಧಿಗಳಿಗೆ ಪ್ರತಿಷ್ಠೆ ಬೇಕಾಗಿದೆ,ಜನರ ಹಿತ ಬೇಕಾಗಿಲ್ಲ ಎಂದು ಎಮ್‌ಎಲ್‌ಸಿಗಳಾದ ಭೀಮರಾವ್ ಪಾಟೀಲ ಹಾಗು ಚಂದ್ರಶೇಖರ ಪಾಟೀಲ ವಿರುದ್ದ ಪರೋಕ್ಷ ವಾಗ್ದಾಳಿ ನಡೆಸಿದರು

ಪ್ರಭಾರಿ ತಾಲೂಕು ಪಂಚಾಯತ ಅಧಿಕಾರಿ ಹಾಗೂ ಪಶು ವೈದ್ಯಾಧಿಕಾರಿ ಡಾ.ಗೋವಿಂದ ವಿರುದ್ದವೂ ಪಾಟೀಲರು ಕಿಡಿ ಕಾರಿದರಲ್ಲದೆ, 27 ವರ್ಷಗಳಿಂದ ಹುಮನಬಾದ್‌ನಲ್ಲೆ ಸೇವೆ ಸಲ್ಲಿಸುತ್ತಿರೋದ್ಯಾಕೆ‌ ಈ ಅಧಿಕಾರಿ, ಬೇರೆ ಅಧಿಕಾರಿಗಳಿದ್ರೂ, ಇವರನ್ನೆ ಮುಂದುವರೆಸ್ತಿರೊದ್ಯಾಕೆ ಎಂದು ಪ್ರಶ್ನೆ ಮಾಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group