ಸಾಮಾಜಿಕ ಕ್ರಾಂತಿ ಮಾಡಿದ ದಾಸ ಶ್ರೇಷ್ಠ ಕನಕದಾಸರು – ಅಶೋಕ ಮನಗೂಳಿ

Must Read

ಸಿಂದಗಿ; ದಾಸ ಸಾಹಿತ್ಯದ ಮೂಲಕ ಜೀವನಪಾಠ ಸಾರಿದವರು ಕನಕದಾಸರು. ಜಾತಿ, ಮತ, ಕುಲಗಳ ಭೇದ ಭಾವವನ್ನು ಮೀರಿಸುವಂತೆ ಸಮಾಜದ ಪಿಡುಗುಗಳ ಬಗ್ಗೆ ಜನ ಸಾಮಾನ್ಯರಿಗೆ ಅರ್ಥವಾಗುವ ಭಾಷೆಯಲ್ಲಿ ತಿಳಿಸಿ ಸಾಮಾಜಿಕ ಕ್ರಾಂತಿಯನ್ನೇ ಮಾಡಿದ ಸಂತಶ್ರೇಷ್ಠ ಕನಕದಾಸರು ಎಂದು ಶಾಸಕ  ಅಶೋಕ ಎಮ್ ಮನಗೂಳಿ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲ್ಲೂಕು ಆಡಳಿತವತಿಯಿಂದ ಹಮ್ಮಿಕೊಂಡ ಶ್ರೀ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಸಮಾರಂಭದ ಅದ್ಯಕ್ಷತೆ ವಹಿಸಿ ಮಾತನಾಡಿ, ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯ ಬಲ್ಲಿರಾ ಬಲ್ಲಿರಾ ಎಂದು ಜನಸಾಮಾನ್ಯರ ಮಾತಿನಲ್ಲೇ ತಮ್ಮ ತತ್ವಗಳನ್ನು ಬೋಧಿಸುವ ಮೂಲಕ ಸಮಾಜವನ್ನು ತಿದ್ದುವಲ್ಲಿ ಪ್ರಮುಖ ಪಾತ್ರ ವಹಿಸಿದಂತವರು ಅಂತವರ ತತ್ವಾದರ್ಶಗಳನ್ನು ತಾವೆಲ್ಲರೂ ಮೈಗೂಡಿಸಿಕೊಂಡು ಜೀವನ ನಡೆಸುವುದು ಅತ್ಯವಶ್ಯಕವಾಗಿದೆ ಎಂದು ತಿಳಿಸಿದರು. 

ಅಂಜುಮನ್ ಕಾಲೇಜಿನ ನಿವೃತ್ತ ಉಪನ್ಯಾಸಕ ಆರ್. ಎಸ್ ವಾಡೇದ ಉಪನ್ಯಾಸ ನೀಡಿ, ದಾಸ ಪರಂಪರೆಯ 50ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರು ಒಬ್ಬರು. ಹದಿನೈದು -ಹದಿನಾರನೇ ಶತಮಾನ ಕನಕದಾಸರ ಜೀವಿತಾವಧಿಯ ಕಾಲಘಟ್ಟ. ಆ ಕಾಲದ ಹರಿದಾಸರ ಪೈಕಿ ದಾಸ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಕೊಟ್ಟವರು ಅವರು. ಕನ್ನಡ ಭಾಷೆಯ ಕೀರ್ತನೆಕಾರರು ಮತ್ತು ಪುರಂದರ ದಾಸರೊಂದಿಗೆ ಕರ್ನಾಟಕ ಸಂಗೀತಕ್ಕೆ ಅಪಾರ ಕೊಡುಗೆಯನ್ನು ನೀಡಿದವರು ಅವರು. ಸಹಜ ಬದುಕು ಬಾಳಿದ ಕನಕದಾಸರು, ಕೀರ್ತನರಾರರಾಗಿ, ತತ್ತ್ವಜ್ಞಾನಿಯಾಗಿ, ಸಂತರಾಗಿ, ದಾರ್ಶನಿಕರಾಗಿ ಕನ್ನಡ ನಾಡಿನ ಸಾಂಸ್ಕøತಿಕ ಪರಂಪರೆಗೆ ಅನನ್ಯ ಕೊಡುಗೆಯನ್ನು ನೀಡಿದ್ದಾರೆ. ಕನಕದಾಸರು ದಂಡನಾಯಕರಾಗಿದ್ದು, ಯುದ್ಧದಲ್ಲಿ ಸೋತ ನಂತರ ಅವರಿಗೆ ವೈರಾಗ್ಯ ಉಂಟಾಗಿ ಹರಿಭಕ್ತ ದಾಸರಾದರು ಎಂಬ ಐತಿಹ್ಯವಿದೆ ಎಂದರು.

ತಹಶೀಲ್ದಾರ ಪ್ರದೀಪಕುಮಾರ ಹಿರೇಮಠ, ಆರಕ್ಷಕ ವೃತ್ತ ನಿರೀಕ್ಷಕ ಡಿ. ಹುಲಿಗೆಪ್ಪ,  ಕುರುಬ ಸಮಾಜ ಅಧ್ಯಕ್ಷ ನಿಂಗಣ್ಣ ಬಿರಾದಾರ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಾ. ಎಚ್.ವಾಯ್ ಸಿಂಗೇಗೋಳ ಸಿ.ಡಿ.ಪಿ.ಓ ಶಂಭುಲಿಂಗ ಹಿರೇಮಠ ಸಿಂದಗಿ ಅಶೋಕ ತೆಲ್ಲೂರ  ಅಧ್ಯಕ್ಷರು ಸರಕಾರಿ ನೌಕರರ ಸಂಘ ಸಿಂದಗಿ, ಇದೆ ಸಂದರ್ಭದಲ್ಲಿ ಮುಖಂಡರಾದ ನಿಂಗಣ್ಣ ಬಿರಾದಾರ ತಾಲೂಕಾ ಹಾಲುಮತ ಸಮಾಜದ ಅಧ್ಯಕ್ಷರು, ಸಿದ್ದಣ್ಣ ಹಿರೇಕುರುಬರ, ಶ್ರೀಶೈಲ ಬೀರಗೊಂಡ ಪುರಸಭೆ ಸದಸ್ಯರು, ಶರಣಪ್ಪ ಹಿರೇಕುರುಬರ, ಶ್ರೀನಿವಾಸ ಉಕ್ಕಲಿ, ಪ್ರಕಾಶ ಹಿರೇಕುರುಬರ, ಶಂಕರ ಸಾತಿಹಾಳ, ಮಾಳಪ್ಪ ಪೂಜಾರಿ, ಮಹಿಳಾ ಮುಖಂಡರಾದ ಜಯಶ್ರೀ ಹದನೂರ, ಮಹಾನಂದ ಬಮ್ಮಣ್ಣಿ, ಪ್ರತಿಭಾ ಚಳ್ಳಗಿ, ಹಂಗುಬಾಯಿ ಲಾತೂರ, ಶಶಿಕಲಾ ಅಂಗಡಿ ಸೇರಿದಂತೆ ಹಾಗೂ ಎಲ್ಲಾ ಸಮಾಜ ಬಾಂಧವರು ಎಲ್ಲ ತಾಲ್ಲೂಕು ಮಟ್ಟದ ಅಧಿಕಾರಿ ವರ್ಗದವರು ಮತ್ತು ತಹಶೀಲ್ದಾರ ಕಾರ್ಯಾಲಯದ ಎಲ್ಲಾ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group