spot_img
spot_img

2026 ಕ್ಕೆ ಬೆಳಗಾವಿ ಏರ್ ಪೋರ್ಟ್ ನೂತನ ಟರ್ಮಿನಲ್ ಸಿದ್ಧ – ಈರಣ್ಣ ಕಡಾಡಿ

Must Read

spot_img
- Advertisement -

ಬೆಳಗಾವಿ: ಬೆಳಗಾವಿ ವಿಮಾನ ನಿಲ್ದಾಣದ ಹೊಸ ಟರ್ಮಿನಲ್ 357 ಕೋಟಿ ರೂಪಾಯಿ ವೆಚ್ಚದಲ್ಲಿ ಒಟ್ಟು 16,400 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಟರ್ಮಿನಲ್ 2026 ರೊಳಗೆ ನಿರ್ಮಾಣವಾಗಲಿದೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ತಿಳಿಸಿದ್ದಾರೆ.

ಶನಿವಾರ ಡಿ-2 ರಂದು ಬೆಳಗಾವಿ ವಿಮಾನ ನಿಲ್ದಾಣ ಮೇಲ್ದರ್ಜೆಗೆ ಏರಿಸುವ ಯೋಜನೆಯ ಕುರಿತು ವಿಮಾನ ನಿಲ್ದಾಣ ಸಲಹಾ ಸಮಿತಿಯ ಜೊತೆ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಸಭೆ ನಡೆಸಿ, ಸಂಪೂರ್ಣ ಯೋಜನೆಯ ರೂಪರೇಶಗಳ ಬಗ್ಗೆ ಚರ್ಚಿಸಿದರು.

ವಿಮಾನ ನಿಲ್ದಾಣದ ಹೊಸ ಟರ್ಮಿನಲ್‌ನಲ್ಲಿ 4 ಏರೋ ಬ್ರಿಡ್ಜ್, 8 ಏಕ್ಸಲೇಟರ್, 8 ಲಿಫ್ಟ್ ಏಕಕಾಲಕ್ಕೆ ಹೊರ ಹೋಗುವ ಮತ್ತು ಒಳಬರುವ 2400 ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಹೊಂದಿದೆ. ಏಕಕಾಲಕ್ಕೆ 9 ವಿಮಾನಗಳ ನಿಲುಗಡೆ ವ್ಯವಸ್ಥೆ ಹೊಂದಿದ್ದು, ಟರ್ಮಿನಲ್ ಎದುರಿಗೆ 500 ಕಾರ್, 200 ಬೈಕ್, 10 ಬಸ್ ಹಾಗೂ ಇನ್ನಿತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಹೊಂದಿದೆ. ಮುಂದಿನ ದಿನಗಳಲ್ಲಿ ಅತ್ಯಾಧುನಿಕವಾದ ಸೌಲಭ್ಯಗಳ ಮೂಲಕ ವಿಮಾನ ನಿಲ್ದಾಣವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ರೂಪುರೇಷೆ ಸಿದ್ಧಪಡಿಸಲಾಗಿದೆ ಎಂದರು

- Advertisement -

ಈಗಾಗಲೇ ದೆಹಲಿ, ಮುಂಬೈ ಸೇರಿದಂತೆ ದೇಶದ ಅನೇಕ ನಗರಗಳಿಗೆ ಬೆಳಗಾವಿಯಿಂದ ನೇರ ಸಂಪರ್ಕ ವಿಮಾನಗಳು ಹಾರಾಡುತ್ತಿವೆ. ಇನ್ನೂ ಹೆಚ್ಚಿನ ವಿಮಾನ ಸೇವೆ ಸಿಗಲಿದ್ದು, ಉತ್ತರ ಕರ್ನಾಟಕ ಭಾಗದ ಜನರಿಗೆ ಹೆಚ್ಚಿನ ಅನುಕೂಲ ಆಗಲಿದೆ. ಉತ್ತಮ ಗುಣಮಟ್ಟದ ವಿಮಾನ ಸೇವೆ ನೀಡಲು ಸಹ ಇದು ಸಹಕಾರಿಯಾಗಲಿದೆ.

ಈ ಸಂದರ್ಭದಲ್ಲಿ ಲೋಕಸಭಾ ಸಂಸದೆ ಮಂಗಲಾ ಅಂಗಡಿ, ವಿಮಾನ ನಿಲ್ದಾಣ ನಿರ್ದೇಶಕ ಎಸ್ ತ್ಯಾಗರಾಜನ್ ಸಲಹಾ ಸಮಿತಿ ಸದಸ್ಯರಾದ ಭರತ ದೇಶಪಾಂಡೆ, ಸಂಜಯ ಭಂಡಾರಿ, ಆಯ್.ಜಿ ದೇಯಣ್ಣವರ, ಗುರುದೇವ ಪಾಟೀಲ್, ಪ್ರಿಯಾಂಕಾ ಅಜ್ರೇಕರ್, ಅನುಪ್ ಕಾಟೆ, ಸೇರಿದಂತೆ ಜಿಲ್ಲೆಯ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- Advertisement -
- Advertisement -

Latest News

೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೆಟಿಕ್ಸ ಕ್ರೀಡಾಕೂಟ 

ದಾನವೀರ ಶ್ರೀ ಶಿರಸಂಗಿ ಲಿಂಗರಾಜ ದೇಸಾಯಿ, ಆಹಾರ ಅಭಿಯಂತ್ರಿಕ ತೋಟಗಾರಿಕೆ ಮಹಾವಿದ್ಯಾಲಯ, ದೇವಿಹೊಸುರ, ಹಾವೇರಿಯಲ್ಲಿ ನಡೆದ ೧೫ ನೇ ಅಂತರ ತೋಟಗಾರಿಕೆ ಮಹಾವಿದ್ಯಾಲಯಗಳ ಅಥ್ಲೇಟಿಕ್ಸ ಕ್ರೀಡಾ...
- Advertisement -

More Articles Like This

- Advertisement -
close
error: Content is protected !!
Join WhatsApp Group