ಬೆಳಗಾವಿ – ಎಲ್ಲರಿಗೂ ಶಾಂತಿ ಸಮಾಧಾನ ನೆಮ್ಮದಿ ಬೇಕಾಗಿದೆ ಧಮ೯ಕ್ಕಾಗಿ ಸದ್ಗುರು ಆಚಾರ ವಿಚಾರವಿರಬೇಕು ಇಷ್ಟಲಿಂಗ ಪೂಜೆ ಮಾಡಿರಿ ಯೋಗಾಸನ ಅತಿ ಅವಶ್ಯ ಕತೆ ಇದೆ ನಮ್ಮ ಹೆಸರಿನ ಮುಂದೆ ಹುದ್ದೆ ಹಾಕಲು ಶ್ರಮ ಅಭ್ಯಾಸ ಅತಿ ಅವಶ್ಯಕತೆ ಇದೆ ಎಂದು ಅಲ್ಲಮಪ್ರಭು ಸ್ವಾಮೀಜಿ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು
ಬೆಳಗಾವಿ ಡಾ. ಫ ಗು ಹಳಕಟ್ಟಿ ಭವನ ಮಹಾತೇಂಶ ನಗರ ದಲ್ಲಿ ವಾರದ ಪ್ರಾಥ೯ನೆ ಉಪನ್ಯಾಸ ಕಾಯ೯ಕ್ರಮ ದಲ್ಲಿ ಆಗಮಿಸಿದ ಕುಮಾರ ಅಲ್ಲಮಪ್ರಭು ಸ್ವಾಮೀಜಿಗಳು, ಶರಣು ಎಂದವನಿಗೆ ಮರಣವಿಲ್ಲ ಧಮ೯ ನಮ್ಮನ್ನು ರಕ್ಷಿಸುತ್ತದೆ ಎಂದು ನುಡಿದರು.
ಶ್ರೀ ಬಸವ ಪ್ರಕಾಶ ಸ್ವಾಮೀಜಿ ಕೂಡಲ ಸಂಗಮ ಅವರು 12.13.14.ಜನವರಿ 2024ರಂದು ವಿಶ್ವಗುರು ಬಸವಣ್ಣನವರ ತಪೋಭೂಮಿ ಐಕ್ಯಸ್ಥಳ ಕೂಡಲಸಂಗಮದಲ್ಲಿ 37ನೇ “ಶರಣ ಮೇಳ ಇದ್ದು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕೆಂದರು.
ಎಂ ವೈ ಮೆಣಸಿನಕಾಯಿ ಅವರು ಉಪನ್ಯಾಸ ನೀಡುತ್ತ, ರಕ್ತದಲ್ಲಿ ಗ್ಲೂಕೋಸ ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದೇ ಮಧುಮೇಹಕ್ಕೆ ಕಾರಣ.
ದೇಹವು ತನಗೆ ಅಗತ್ಯವಿರುವಷ್ಟು ಇನ್ಸುಲಿನನ್ನು ಉತ್ಪತ್ತಿ ಮಾಡುವ ಸಾಮರ್ಥ್ಯ ಹೊಂದಿರುವುದಿಲ್ಲ ಜೀವಕೋಶಗಳ ಮೇಲೆ ಇನ್ಸುಲಿನನ್ನು ಪ್ರಭಾವ ನಿಗದಿತ ಪ್ರಮಾಣದಲ್ಲಿ ಆಗುವುದಿಲ್ಲ ಬೊಜ್ಜು ತಂಬಾಕು ಸೇವನೆ ಮದ್ಯಪಾನ ಐಷಾರಾಮಿ ಜೀವನ ಶೈಲಿ ಅನಿಯಂತ್ರಿತ ಆಹಾರ ಸೇವನೆ ಮಾಡುವವರಿಗೆ ಮಧುಮೇಹ ಆಗುವ ಸಂಭವವಿದೆ ಎಂದು ಮಧುಮೇಹದ ಲಕ್ಷಣಗಳು ಪರಿಹಾರಗಳು ತಿಳಿಸಿದರು.
ಆರಂಭದಲ್ಲಿ ಶರಣ ಶರಣೆಯರು ವಚನ ಪಠಣ ಮಾಡಿದರು ಮಹಾದೇವಿ ಅರಳಿ, ನರಗುಂದ ಮೇಡಂ, ಗುಡಸ ಮೇಡಂ, ಆನಂದ ಕಕಿ೯, ತಲ್ಲೂರ ಜವನಿ ದಂಪತಿಗಳು, ವೀರೇಶ ಹಲಕಿ, ಇತರರು ಉಪಸ್ಥಿತರಿದ್ದರು.
ಇಂದಿನ ದಾಸೋಹ ಸೇವೆಯನ್ನು ಸದಾಶಿವ ದೇವರಮನಿ ಯವರು ನೀಡಿದರು. ಸಂಗಮೇಶ ಅರಳಿ ಸ್ವಾಗತಿಸಿದರು. ಸುರೇಶ ನರಗುಂದ ನಿರೂಪಿಸಿದರು ಕೊನೆಯಲ್ಲಿ ಕುಮಾರ ಪಾಟೀಲ ವಂದಿಸಿದರು